ಶರಣ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ
ನಟ ಶರಣ್ ಸದ್ಯ 'ಅಮೇರಿಕಾದಲ್ಲಿ ಅಧ್ಯಕ್ಷ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ನಂತರ ಅವರ ಮತ್ತೊಂದು ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ. ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ಶರಣ್ ನಟಿಸುತ್ತಿದ್ದಾರೆ.
ಶರಣ್ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ. ಸಿಂಪಲ್ ಸುನಿ ಡೈಲಾಗ್ ಮೂಲಕ ಚಮಕ್ ಕೊಡುವುದರಲ್ಲಿ ಫೇಮಸ್. ಈಗ ಈ ಜೋಡಿ ಒಂದಾಗಿದ್ದು, ಸಿನಿಮಾ ಪಕ್ಕಾ ಎಂಟರ್ಟೈನಿಂಗ್ ಆಗಿ ಇರಲಿದೆಯಂತೆ. ಕಾಮಿಡಿ ಪ್ಲೇವರ್ ಜೊತೆಗೆ ಸುನಿ ಸ್ಟೈಲ್ ನಲ್ಲಿ ಸಿನಿಮಾ ಬರಲಿದೆಯಂತೆ.
ರಾಮಾಯಣದಲ್ಲಿ ಬರುವ ತ್ರಿಶಂಕು ಸ್ವರ್ಗ ಮತ್ತು ಮಹಾಭಾರತದ ಒಂದು ಎಳೆಯನ್ನು ಇಟ್ಟುಕೊಂಡು ಇಂದಿನ ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡಲಿದ್ದಾರಂತೆ. ಕಾಸು ಕೊಟ್ಟು ಬಂದ ಪ್ರೇಕ್ಷಕರನ್ನು ನಾನ್ ಸ್ಟಾಪ್ ನಗಿಸುವ ಕೆಲಸವನ್ನ ಸಿನಿಮಾ ಮಾಡಲಿದೆ.

ಈ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಜನವರಿ 16 ರಂದು ಸಿನಿಮಾ ಮುಹೂರ್ತ ನಡೆಯಲಿದೆ. ಸಿನಿಮಾ ನಾಯಕಿಯನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಜನವರಿ 22 ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭ ಆಗಲಿದೆ.


Click it and Unblock the Notifications











