»   » ಜು.22 ಕ್ಕೆ ಬೆಂಗಳೂರಿನಲ್ಲಿ ಸುನಿಲ್ ಗ್ರೋವರ್ ಲೈವ್ ಕಾಮಿಡಿ ಶೋ

ಜು.22 ಕ್ಕೆ ಬೆಂಗಳೂರಿನಲ್ಲಿ ಸುನಿಲ್ ಗ್ರೋವರ್ ಲೈವ್ ಕಾಮಿಡಿ ಶೋ

Posted By:
Subscribe to Filmibeat Kannada

ಖ್ಯಾತ ನಟ ಹಾಗೂ ಹಿಂದಿ ಕಿರುತೆರೆಯ ಸ್ಟ್ಯಾಂಡಪ್ ಕಾಮಿಡಿಯನ್ ಸುನೀಲ್ ಗ್ರೋವರ್ ರವರು ಜುಲೈ 22 ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇಷ್ಟು ದಿನ ಕೇವಲ ಟಿವಿ ಮುಂದೆ ಕುಳಿತು ಸುನಿಲ್ ಗ್ರೋವರ್ ಹಾಸ್ಯ ಕಾರ್ಯಕ್ರಮಗಳ ಶೋಗಳನ್ನ ನೋಡಿರುವ ಬೆಂಗಳೂರಿಗರಿಗೆ ಜುಲೈ 22 ರಂದು ಅವರ ಲೈವ್ ಕಾಮಿಡಿ ಶೋ ನೋಡುವ ಅವಕಾಶವು ಸಿಗಲಿದೆ. ಸುನಿಲ್ ಗ್ರೋವರ್ ಜುಲೈ 22 ರಂದು ಅಂದರೆ ಇದೇ ಶನಿವಾರದಂದು ಅವರು ಬೆಂಗಳೂರಿನ ಫಿನಿಕ್ಸ್ ಮಾರ್ಕೆಟ್ ಸಿಟಿಗೆ ಆಗಮಿಸುತ್ತಿದ್ದು, ಅಲ್ಲಿ ಅವರ ಲೈವ್ ಕಾಮಿಡಿ ಶೋವನ್ನು ಏರ್ಪಡಿಸಲಾಗಿದೆ.

Sunil Grover Live event in Bengaluru Phoenix Marketcity on July 22

ಸುನಿಲ್ ಗ್ರೋವರ್ ಲೈವ್ ಕಾಮಿಡಿ ಶೋ ವೈಟ್‌ಫೀಲ್ಡ್ ಮುಖ್ಯ ರಸ್ತೆ, ಮಹಾದೇವಪುರದಲ್ಲಿನ 'ಫಿನಿಕ್ಸ್ ಮಾರ್ಕೆಟ್‌ಸಿಟಿ'ಯಲ್ಲಿನ 'ಕನ್ಸರ್ಟ್ ಲೇನ್(Concert Lane)'ನಲ್ಲಿ ಸಂಜೆ 7 ಗಂಟೆಗೆ ಶುರುವಾಗಲಿದೆ. ಇವರ ಕಾರ್ಯಕ್ರಮ ನೋಡ ಬಯಸುವವರು ಈ ಲಿಂಕ್ ಕ್ಲಿಕ್‌ ಮಾಡಿ ಬುಕ್‌ಮೈ ಶೋ ದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಸುನಿಲ್ ಗ್ರೋವರ್ ಹಲವು ಕಾಮಿಡಿ ಶೋಗಳಲ್ಲಿ ಅಭಿನಯಿಸಿದರು ಸಹ, ಇವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಶೋನಲ್ಲಿಯ Gutthi ಮತ್ತು 'ದಿ ಕಪಿಲ್ ಶರ್ಮಾ' ಶೋ ನಲ್ಲಿಯ ಡಾ.ಮಶೂರ್ ಗುಲಟಿ ಮತ್ತು ರಿಂಕು ಭಾಬಿ ಪಾತ್ರಗಳಿಂದ ಹಿಂದಿ ಕಿರುತೆರೆ ಪ್ರಿಯರ ಮನಗೆದ್ದರು.

English summary
Sunil Grover Live event in Bengaluru Phoenix Marketcity on July 22.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada