Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುರ್ತು ನಿರ್ಗಮನದಲ್ಲಿ ಸಿಲುಕಿರುವ ಐವರು ನಾಯಕಿಯರು
ತುರ್ತು ನಿರ್ಗಮನ ಅಂದ ತಕ್ಷಣ ಏನಾದರು ಅಪಾಯ ಆದಾಗ ಜೀವ ಉಳಿಸಿಕೊಳ್ಳಬೇಕು ಎನ್ನುವ ಸ್ಥಿತಿ ಬಂದಾಗ ಮೊದಲಿಗೆ ನೆನಪಾಗುವ ಪದ. ಆದರೆ ಚಿತ್ರರಂಗದ ಐವರು ನಾಯಕಿಯರು ತುರ್ತು ನಿರ್ಗಮನದ ಎಲ್ಲಿದೆ ಅಂತ ಹುಡುಕುತ್ತಿದ್ದಾರಂತೆ. ಆಗಂತ ಇವರೆಲ್ಲರೂ ಈ ಜಾಗವನ್ನ ಹುಡುಕುತ್ತಿರುವುದು ನಿಜ ಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ.
ತುರ್ತು ನಿರ್ಗಮನ 'ಎಕ್ಸ್ಕ್ಯೂಸ್ ಮಿ' ಸುನೀಲ್ ರಾವ್ ಅಭಿನಯದ ಚಿತ್ರ. ಎಂಟು ವರ್ಷದ ನಂತರ ಮತ್ತೆ ಸುನೀಲ್ ರಾವ್ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ವಿಶೇಷ ಎಂದರೆ ಸಿನಿಮಾದಲ್ಲಿ ಐವರು ನಾಯಕಿಯರು ಅಭಿನಯ ಮಾಡುತ್ತಿದ್ದಾರೆ. ಚಿತ್ರೀಕರಣ ಆರಂಭ ಆಗುವ ಮುಂಚೆಯೇ ವಿಭಿನ್ನವಾದ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ನಿರ್ದೇಶಕ ಹೇಮಂತ್ ಕುಮಾರ್ ಸಿನಿಮಾದ ಐವರು ನಾಯಕಿಯರಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಾರೆ.
ಸಂಯುಕ್ತ ಹೆಗ್ಡೆ, ಸುಧಾರಾಣಿ, ಅರುಣಾ ಬಾಲ್ ರಾಜ್, ಹಿತಾ ಚಂದ್ರಶೇಖರ್ ಹಾಗೂ ಅಮೃತಾ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ.
ಆಗಸ್ಟ್ನಲ್ಲಿ ಸಿನಿಮಾ ರಿಲೀಸ್ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಮಲಯಾಳಂನ ಖ್ಯಾತ ಸಂಕಲನಕಾರ ಬಿ. ಅಜಿತ್ಕುಮಾರ್ ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಛಾಯಾಗ್ರಹಣ ಪ್ರಯಾಗ್ ಮುಕುಂದನ್ ಅವರದು. ಹೇಮಂತ್ ಹಾಗೂ ಭರತ್ ಕುಮಾರ್ ಜಂಟಿಯಾಗಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.