ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಕ್ಸ್‌ಕ್ಯೂಸ್ ಮಿ ಸುನೀಲ್
Recommended Video

ಬಾಲ ನಟನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡು ನಂತರ ಗಾಯಕನಾಗಿ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದ ಗಾಯಕ ಹಾಗೂ ಕಲಾವಿದ ಸುನೀಲ್ ರಾವ್. 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡ ನಟ ಸುನೀಲ್ ರಾವ್ ಪ್ರಖ್ಯಾತಿ ಗಾಯಕಿ ಬಿ ಕೆ ಸುಮಿತ್ರ ಅವರ ಪುತ್ರ.
'ಎಕ್ಸ್‌ಕ್ಯೂಸ್ ಮಿ' ಚಿತ್ರದ ನಂತರ ವೆಬ್ ಸೀರಿಸ್ ನಲ್ಲಿ ಅಭಿನಯಿಸಿ ಮತ್ತೆ ಚಿತ್ರರಂಗದಲ್ಲಿ ಸಕ್ರೀಯವಾದ ನಟ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ತುರ್ತು ನಿರ್ಗಮನ' ಸಿನಿಮಾ ಮೂಲಕ ಸುನೀಲ್ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡುವ ಸಂಭ್ರಮ ಒಂದು ಕಡೆಯಾದರೆ ಮತ್ತೊಂದು ಕಡೆ ರಿಯಲ್ ಲೈಫ್ ನಲ್ಲಿ ದಾಂಪತ್ಯ ಜೀವನ ಶುರು ಮಾಡುತ್ತಿದ್ದಾರೆ.
ಹಾಗಾದರೆ ಸುನೀಲ್ ರಾವ್ ಮದುವೆ ಆಗುತ್ತಿರುವುದು ಯಾರನ್ನು?
ಮದುವೆ ಸಂಭ್ರಮ ಹೇಗಿತ್ತು? ಮದುವೆ ನಡೆದದ್ದು ಎಲ್ಲಿ? ಸುನೀಲ್ ರಾವ್ ಮದುವೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುನೀಲ್ ರಾವ್
'ಎಕ್ಸ್‌ಕ್ಯೂಸ್ ಮಿ' ಸಿನಿಮಾ ನಾಯಕ ಹಾಗೂ ಗಾಯಕ ಸುನೀಲ್ ರಾವ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಅವರ ಜೊತೆ ಸುನೀಲ್ ವಿವಾಹ ನಡೆದಿದೆ.

ಸುನೀಲ್ ವೆಡ್ಸ್ ಶ್ರೇಯಾ ಐಯ್ಯರ್
ಸುನೀಲ್ ರಾವ್ ಮದುವೆ ಆಗಿರುವ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ 'ಟಕ್ಕರ್' ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸಕಿ.

ಪ್ರೀತಿಗೆ ಬಿತ್ತು ಮದುವೆ ಸೀಲ್
ಶ್ರೇಯಾ ಐಯ್ಯರ್ ಹಾಗೂ ಸುನೀಲ್ ರಾವ್ ಅವರಿಗೆ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ದಂಪತಿಗಳಾಗುತ್ತಿದ್ದಾರೆ.

ಸುನೀಲ್- ಶ್ರೇಯಾ ಕಲ್ಯಾಣ
ಬೆಂಗಳೂರಿನ ಜೆಪಿ ನಗರದಲ್ಲಿ ಶ್ರೇಯಾ-ಸುನೀಲ್ ಮದುವೆ ಜೆ ಪಿ ನಗರದಲ್ಲಿ ನಡೆದಿದೆ. ಸುನೀಲ್ ಆಪ್ತರಾದ ಅನುಪಮ ಗೌಡ ಹಾಗೂ ರಘುಶಾಸ್ತ್ರಿ ಇನ್ನು ಅನೇಕರು ಮದುವೆಯಲ್ಲಿ ಭಾಗಿ ಆಗಿದ್ದಾರೆ.


Click it and Unblock the Notifications











