ಎಷ್ಟು ಮುದ್ದಾಗಿದ್ದಾನೆ 'ಎಕ್ಸ್ ಕ್ಯೂಸ್ ಮೀ' ನಟ ಸುನೀಲ್ ರಾವ್ ಮಗ.!
'ಶಾಂತಿ ಕ್ರಾಂತಿ', 'ಕೆಂಡದ ಮೇಲೆ', 'ಏಳು ಸುತ್ತನ ಕೋಟೆ', 'ಮಾಲ್ಗುಡಿ ಡೇಸ್' ಸೇರಿದಂತೆ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದವರು ಖ್ಯಾತ ಗಾಯಕಿ ಬಿ.ಕೆ.ಸುಮಿತ್ರ ಪುತ್ರ ಸುನೀಲ್ ರಾವ್. ಬಳಿಕ ಗಾಯಕನಾಗಿ, 'ಎಕ್ಸ್ ಕ್ಯೂಸ್ ಮೀ' ಅಂತಹ ಹಿಟ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ ಸುನೀಲ್ ರಾವ್ ಇತ್ತೀಚೆಗಷ್ಟೆ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದರು. ಇಂತಿಪ್ಪ ಸುನೀಲ್ ರಾವ್ ಬಾಳಲ್ಲಿ ಸದ್ಯ ಸಂತಸ ತುಂಬಿ ತುಳುಕುತ್ತಿದೆ.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಗೆಳತಿ ಶ್ರೇಯಾ ಅಯ್ಯರ್ ಜೊತೆಗೆ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಸುನೀಲ್ ರಾವ್-ಶ್ರೇಯಾ ಅಯ್ಯರ್ ದಂಪತಿಗೆ ಗಂಡು ಮಗು ಜನಿಸಿತು.
ತಮ್ಮ ಪುತ್ರನಿಗೆ ಅಥರ್ವ ಅಂತ ಶ್ರೇಯಾ-ಸುನೀಲ್ ಜೋಡಿ ನಾಮಕರಣ ಮಾಡಿದ್ದಾರೆ. ಆರು ತಿಂಗಳ ಕಂದಮ್ಮ ಅಥರ್ವ ನೋಡಲು ಎಷ್ಟು ಮುದ್ದಾಗಿ ಇದ್ದಾನೆ ಗೊತ್ತಾ.?

ತಮ್ಮ ಪುತ್ರ ಅಥರ್ವನ ಫೋಟೋನ ಸುನೀಲ್ ರಾವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುನೀಲ್ ರಾವ್ ಮನೆಯ ಪುಟಾಣಿ ಕೃಷ್ಣನನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.


Click it and Unblock the Notifications











