ಸುನಿಲ್ ಶೆಟ್ಟಿ ಬಗ್ಗೆ ಕೇಳಿಬಂದಿದ್ದ ಸುದ್ದಿ ಸುಳ್ಳು

By Bharath Kumar

Recommended Video

ಸುನೀಲ್ ಶೆಟ್ಟಿ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರಾ..?

ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇದೀಗ, ಎರಡನೇ ಕನ್ನಡವನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದು ಸುಳ್ಳು ಎಂದು ಸ್ವತಃ ಸುನಿಲ್ ಶೆಟ್ಟಿ ಅವರೇ ಖಚಿತ ಪಡಿಸಿದ್ದಾರೆ.

ಸಂಚಾರಿ ವಿಜಯ್ ಅಭಿನಯದ 'ಪಿರಂಗಿಪುರ' ಚಿತ್ರತಂಡ ಇತ್ತೀಚಿಗಷ್ಟೆ ಸುನಿಲ್ ಶೆಟ್ಟಿ ಅವರನ್ನ ಭೇಟಿ ಮಾಡಿತ್ತು. ಈ ವೇಳೆ ಸಿನಿಮಾ ಬಗ್ಗೆ ಚರ್ಚೆಯೂ ಆಗಿದೆ. ಆದ್ರೆ, ಸುನಿಲ್ ಈ ಚಿತ್ರದಲ್ಲಿ ಅಭಿನಯಿಸುವುದಾಗಿಯೂ ಮತ್ತು ಕಾಲ್ ಶೀಟ್ ಕೊಟ್ಟಿರುವುದಾಗಿಯೂ ಹರಿದಾಡಿದ್ದ ಸುದ್ದಿ ಕೇವಲ ವದಂತಿ.

sunil shetty Not signed pirangipura movie

ಈ ಬಗ್ಗೆ ಟ್ವೀಟ್ ಮಾಡಿರುವ ಸುನಿಲ್ ಶೆಟ್ಟಿ ''ಸದ್ಯಕ್ಕೆ ನಾನು ಕೇವಲ 'ಪೈಲ್ವಾನ್' ಚಿತ್ರವನ್ನ ಮಾತ್ರ ಒಪ್ಪಿಕೊಂಡಿರುವುದು ಮತ್ತು ಕನ್ನಡದಲ್ಲಿ ಅಭಿನಯಿಸುತ್ತಿರುವುದು. ಬೇರೆ ಯಾವ ಚಿತ್ರಕ್ಕೂ ನಾನು ಒಪ್ಪಿಗೆ ಕೊಟ್ಟಿಲ್ಲ. ಆದ್ರೆ, ಹೆಚ್ಚು ಕನ್ನಡ ಸಿನಿಮಾಗಳನ್ನ ಮಾಡುವ ಆಸೆ ಇದೆ'' ಎಂದು ತಿಳಿಸಿದ್ದಾರೆ.

sunil shetty Not signed pirangipura movie

ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದಲ್ಲಿ ಬಹುಮುಖ್ಯಪಾತ್ರವೊಂದನ್ನ ಸುನಿಲ್ ಶೆಟ್ಟಿ ನಿರ್ವಹಿಸುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಸದ್ಯಮ ಸುದೀಪ್ ಮತ್ತು ಟೀಮ್ ಸರ್ಬಿಯಾ ದೇಶದ ಬೆಲ್ ಗ್ರೇಡ್ ನಲ್ಲಿದ್ದಾರೆ.

ಮತ್ತೊಂದೆಡೆ ಸಂಚಾರಿ ವಿಜಯ್ ಅಭಿನಯದ 'ಪಿರಂಗಿಪುರ' ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಮೇಕಿಂಗ್ ವಿಚಾರದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

More from Filmibeat

English summary
Sunil shetty Not signed any other Kannada movie except ‘Pailwan’ directed by krishna with sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X