For Quick Alerts
    ALLOW NOTIFICATIONS  
    For Daily Alerts

    Sunny Leone: ನೀವು ಸನ್ನಿ ಲಿಯೋನಿ ಅಭಿಮಾನಿಯೆ? ನಿಮಗೆ ಸಿಗಲಿದೆ ಭಾರಿ ರಿಯಾಯಿತಿ!

    |

    ನಟಿ, ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಸನ್ನಿಗಾಗಿ ಚಿತ್ರ ವಿಚಿತ್ರ ಕಾರ್ಯಗಳನ್ನು ಮಾಡುತ್ತಿರುತ್ತಾರೆ.

    Recommended Video

    Sunny Leone | ಸನ್ನಿ ಲಿಯೋನ್ ಹೆಸರು ಹೇಳಿದ್ರೆ ಮಂಡ್ಯದಲ್ಲಿ ಆಫರ್ ಅಂತೆ.

    ಸನ್ನಿಯ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು, ಸನ್ನಿಯ ಹೆಸರನ್ನು ಬಳಗಕ್ಕೆ ಇಟ್ಟುಕೊಳ್ಳುವುದು, ಜಾತ್ರಗಳಿಗೆ, ಊರ ಹಬ್ಬಗಳಿಗೆ ಸನ್ನಿ ಚಿತ್ರವುಳ್ಳ ಫ್ಲೆಕ್ಸ್‌ಗಳನ್ನು ಹಾಕಿಸುವುದು ಇನ್ನಿತರೆ ಕಾರ್ಯಗಳನ್ನು ಸನ್ನಿ ಅಭಿಮಾನಿಗಳು ಮಾಡುತ್ತಿರುತ್ತಾರೆ.

    Sunny Leone :ಮತ್ತೊಂದು ಕನ್ನಡ ಹಾಡಿಗೆ ಮಾದಕ ಸ್ಟೆಪ್ಸ್ ಹಾಕಿದ ನಟಿ ಸನ್ನಿ ಲಿಯೋನಿ!Sunny Leone :ಮತ್ತೊಂದು ಕನ್ನಡ ಹಾಡಿಗೆ ಮಾದಕ ಸ್ಟೆಪ್ಸ್ ಹಾಕಿದ ನಟಿ ಸನ್ನಿ ಲಿಯೋನಿ!

    ಆದರೆ ಮಂಡ್ಯದ ಒಬ್ಬ ಸನ್ನಿ ಲಿಯೋನಿ ಅಭಿಮಾನಿ, ಸನ್ನಿ ಅಭಿಮಾನಿಗಳಿಗೆ ತನ್ನ ಅಂಗಡಿಯಲ್ಲಿ ವಿಶೇಷ ರಿಯಾಯಿತಿ ಘೋಷಿಸಿದ್ದಾನೆ.

    2000 ರೂಪಾಯಿ ಸಾಲ ಪಡೆದು ತೀರಿಸಿಲ್ಲ ಸನ್ನಿ ಲಿಯೋನಿ! 2000 ರೂಪಾಯಿ ಸಾಲ ಪಡೆದು ತೀರಿಸಿಲ್ಲ ಸನ್ನಿ ಲಿಯೋನಿ!

    ಮಂಡ್ಯದ 100 ಅಡಿ ರಸ್ತೆಯಲ್ಲಿ ಡಿಕೆ ಚಿಕನ್ ಹೆಸರಿನ ಚಿಕನ್ ಅಂಗಡಿ ಇಟ್ಟುಕೊಂಡಿರುವ ಪ್ರಸಾದ್ ನಟಿ ಸನ್ನಿ ಲಿಯೋನಿಯ ಅಪ್ಪಟ ಅಭಿಮಾನಿಯಾಗಿದ್ದು, ಸನ್ನಿ ಲಿಯೋನಿ ಅಭಿಮಾನಿಗಳಿಗೆ ತನ್ನ ಅಂಗಡಿಯಲ್ಲಿ 10% ರಿಯಾಯಿತಿ ಘೋಷಿಸಿದ್ದಾರೆ. ಜೊತೆಗೆ ಕೆಲವು ಷರತ್ತುಗಳನ್ನು ಸಹ ಇಟ್ಟಿದ್ದಾರೆ.

    ಕೆಲವು ಷರತ್ತುಗಳು ಸಹ ಇವೆ

    ಕೆಲವು ಷರತ್ತುಗಳು ಸಹ ಇವೆ

    10% ರಿಯಾಯಿತಿ ಪಡೆಯಲು ಸನ್ನಿ ಲಿಯೋನಿ ಅಭಿಮಾನಿ ಆಗಿರುವುದು ಕಡ್ಡಾಯ. ಸನ್ನಿ ಲಿಯೋನಿ‌ರ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್‌ ಖಾತೆಗಳನ್ನು ಕಡ್ಡಾಯವಾಗಿ ಫಾಲೋ ಮಾಡುತ್ತಿರಬೇಕು. ಸನ್ನಿ ಲಿಯೋನಿ‌ಗೆ ಕಮೆಂಟ್ ಮಾಡಿರಬೇಕು, ಆಕೆಯ ಪೋಸ್ಟ್‌ಗಳನ್ನು ರೀಟ್ವೀಟ್‌ ಅಥವಾ ಶೇರ್ ಮಾಡಿಕೊಂಡಿರಬೇಕು. ಹೀಗಿದ್ದರೆ ಮಾತ್ರ ವ್ಯಕ್ತಿಯನ್ನು ಸನ್ನಿ ಲಿಯೋನಿ ಅಭಿಮಾನಿ ಎಂದು ಗುರುತಿಸಿ ಅಂಥಹವರಿಗಷ್ಟೆ 10% ರಿಯಾಯಿತಿಯನ್ನು ಪ್ರಸಾದ್ ನೀಡುತ್ತಾರೆ.

    ಕನಿಷ್ಟ ಹತ್ತು ಫೋಟೊ ಸೇವ್‌ ಮಾಡಿಕೊಂಡಿರಬೇಕು

    ಕನಿಷ್ಟ ಹತ್ತು ಫೋಟೊ ಸೇವ್‌ ಮಾಡಿಕೊಂಡಿರಬೇಕು

    ಈ ಬಗ್ಗೆ ಮಾತನಾಡಿರುವ ಪ್ರಸಾದ್, ''ನಾನು ಸನ್ನಿ ಲಿಯೋನಿಯ ಬಹು ದೊಡ್ಡ ಅಭಿಮಾನಿ. ಹಾಗಾಗಿ ನನ್ನಂತೆ ಇತರ ಸನ್ನಿ ಲಿಯೋನಿ ಅಭಿಮಾನಿಗಳಿಗಾಗಿ ಹೀಗೆ ರಿಯಾಯಿತಿ ದರದಲ್ಲಿ ಚಿಕನ್ ಮಾರಾಟ ಮಾಡುತ್ತಿದ್ದೇನೆ. ಸನ್ನಿ ಲಿಯೋನಿಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಫಾಲೋ ಮಾಡುತ್ತಿರುವ, ಅವರ ಕನಿಷ್ಟ ಹತ್ತು ಫೋಟೊಗಳನ್ನಾದರು ಮೊಬೈಲ್‌ನಲ್ಲಿ ಹೊಂದಿರುವ ಹಾಗೂ ಸನ್ನಿ ಲಿಯೋನಿಯ ಫೋಟೊಗಳಿಗೆ ಕಮೆಂಟ್, ಶೇರ್ ಮಾಡಿರಬೇಕು ಅಂಥಹವರಿಗೆ ರಿಯಾಯಿತಿ ನೀಡುತ್ತೇನೆ'' ಎಂದಿದ್ದಾರೆ.

    ''ಅವರು ಮಾಡುವ ಸಾಮಾಜಿಕ ಕಾರ್ಯಗಳು ಇಷ್ಟ''

    ''ಅವರು ಮಾಡುವ ಸಾಮಾಜಿಕ ಕಾರ್ಯಗಳು ಇಷ್ಟ''

    ''ನನಗೆ ಸನ್ನಿ ಲಿಯೋನಿ ಎಂದರೆ ಬಹಳ ಇಷ್ಟ. ಅವರು ಮಾಡುವ ಸಾಮಾಜಿಕ ಕೆಲಸಗಳು ನನಗೆ ಇಷ್ಟ. ಬಡ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಬಡ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಇದೆಲ್ಲ ಕಾರಣದಿಂದಲೂ ಸನ್ನಿ ನನಗೆ ಇಷ್ಟ. ಹಾಗಾಗಿ ನಾನು ಅವರ ಹೆಸರಲ್ಲಿ ಹೀಗೆ ರಿಯಾಯಿತಿ ನೀಡುತ್ತಿದ್ದೇನೆ. ಸನ್ನಿ ಲಿಯೋನಿ ಎಂದ ಕೂಡಲೆ ಬೇರೆ ದೃಷ್ಟಿಯಿಂದ ನೋಡುತ್ತಾರೆ. ಆದರೆ ಅವರ ಒಳ್ಳೆಯ ಗುಣ ನೋಡಿ ನಾನು ಅವರ ಅಭಿಮಾನಿಯಾಗಿದ್ದೇನೆ, ಬೇರೆಯದ್ದಲ್ಲ'' ಎಂದಿದ್ದಾರೆ.

    ಎರಡು ವರ್ಷದಿಂದಲೂ ಇದೆ ಆಫರ್

    ಎರಡು ವರ್ಷದಿಂದಲೂ ಇದೆ ಆಫರ್

    ''ಅಂಗಡಿಗೆ ಬಂದ ಕೆಲವರು ನನ್ನನ್ನು ಗೇಲಿ ಸಹ ಮಾಡಿದ್ದಾರೆ. ಕೆಲವರು ಖುಷಿಯಿಂದ ಬಂದು ತಾವು ಸನ್ನಿ ಅಭಿಮಾನಿ ಎಂದು ಹೇಳಿ ಚಿಕನ್ ಪಡೆದು ಹೋಗುತ್ತಾರೆ. ಎರಡು ವರ್ಷಗಳಿಂದಲೂ ನನ್ನ ಅಂಗಡಿಯಲ್ಲಿ ಸನ್ನಿ ಅಭಿಮಾನಿಗಳಿಗೆ ರಿಯಾಯಿತಿ ನೀಡುತ್ತಿದ್ದೇನೆ. ದಿನವೂ ಒಬ್ಬರು ಅಥವಾ ಇಬ್ಬರು ಬಂದು ಸನ್ನಿ ಅಭಿಮಾನಿಗಳೆಂದು ಹೇಳಿ ರಿಯಾಯಿತಿ ಪಡೆಯುತ್ತಿದ್ದಾರೆ'' ಎಂದಿದ್ದಾರೆ ಪ್ರಸಾದ್.

    English summary
    A Sunny Leone fan in Mandy giving 10 percent discount on his chicken shop only for Sunny Leone fans. He said he is doing this from last two years.
    Friday, April 15, 2022, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X