twitter
    For Quick Alerts
    ALLOW NOTIFICATIONS  
    For Daily Alerts

    ಸನ್ನಿ ನೈಟ್ಸ್ ಬ್ಯಾನ್ ಮಾಡಿದಕ್ಕೆ ಗರಂ ಆದ್ರು ಅಭಿಮಾನಿಗಳು

    By Pavithra
    |

    ಹೊಸವರ್ಷವನ್ನ ಬರಮಾಡಿಕೊಳ್ಳಲು ಬೆಂಗಳೂರಿನ 'ಮಾನ್ಯತಾ ಟೆಕ್ ಪಾರ್ಕ್' ನಲ್ಲಿ ಸನ್ನಿನೈಟ್ಸ್ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಸನ್ನಿ ಬೆಂಗಳೂರಿಗೆ ಬರ್ತಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ 'ಕರವೇ ಯುವಸೇನಾ' ಸಂಘಟನಾಕಾರರು ಸನ್ನಿ ಲಿಯೋನ್ ಬೆಂಗಳೂರಿಗೆ ಬರಬಾರದು ಎಂದು ಪ್ರತಿಭಟನೆ ನಡೆಸುವುದರ ಜೊತೆಗೆ ಗೃಹ ಸಚಿವರಿಗೆ ಮನವಿ ಪತ್ರವನ್ನೂ ನೀಡಿದ್ದರು.

    'ಕರವೇ ಯುವಸೇನೆ' ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ 'ಸನ್ನಿ ಲಿಯೋನ್' ಪಾರ್ಟಿಯಲ್ಲಿ ಪಾಲ್ಗೊಳ್ಳದಂತೆ ತಡೆ ಹಿಡಿದಿದೆ. ನಿನ್ನೆ ಈ ಬಗ್ಗೆ ನಟಿ ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ತಾನು ಬೆಂಗಳೂರಿಗೆ ಬರುತಿಲ್ಲ ಎಂದು ಅಭಿಮಾನಿಗಳಿಗೆ ಮತ್ತು ಜನರಿಗೆ ತಿಳಿಸಿದ್ದರು.

    ಸನ್ನಿ ಲಿಯೋನ್ ಸಂಭಾವನೆ ಕೇಳಿ ನಿರ್ಮಾಪಕರು ಕಂಗಾಲು ಸನ್ನಿ ಲಿಯೋನ್ ಸಂಭಾವನೆ ಕೇಳಿ ನಿರ್ಮಾಪಕರು ಕಂಗಾಲು

    ಸದ್ಯ ಸನ್ನಿ ಲಿಯೋನ್ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಡೆ ಹಿಡಿದಿರುವ ಸರ್ಕಾರದ ವಿರುದ್ದ ಅಭಿಮಾನಿಗಳು ಮತ್ತು ಜನರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತ ಕಾರ್ಯಕ್ರಮ ಆಯೋಜಕರು ನ್ಯಾಯ ಕೇಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಗಾದ್ರೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಜನರು ಯಾವ ರೀತಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ? ಮುಂದೆ ಓದಿ

    ಸನ್ನಿ ಲಿಯೋನ್ ಪರ ನಿಂತ 'ಪ್ರಕಾಶ್ ಬೆಳವಾಡಿ'

    ಸನ್ನಿ ಲಿಯೋನ್ ಪರ ನಿಂತ 'ಪ್ರಕಾಶ್ ಬೆಳವಾಡಿ'

    ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡಿರೋ ವಿಚಾರವಾಗಿ ಫೇಸ್ ಬುಕ್ ನಲ್ಲಿ ನಟ ಪ್ರಕಾಶ್ ಬೆಳವಾಡಿ "ಇದು ಸರ್ಕಾರ, ನಾಗರಿಕ ಸಮಾಜ ಮತ್ತು ಕಾನೂನಿನ ವಿಫಲತೆ ಎಂದರ್ಥ" ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ತಮ್ಮ ಫೇಸ್ ಬುಕ್ ವಾಲ್ ಪೇಪರ್ ನಲ್ಲಿ ಸನ್ನಿ ಲಿಯೋನ್ ಫೋಟೋ ಅಪ್ಲೌಡ್ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ನಡೆಯಬೇಕಿದ್ದ 'ಸನ್ನಿ ನೈಟ್ಸ್' ಕ್ಯಾನ್ಸಲ್ಬೆಂಗಳೂರಿನಲ್ಲಿ ನಡೆಯಬೇಕಿದ್ದ 'ಸನ್ನಿ ನೈಟ್ಸ್' ಕ್ಯಾನ್ಸಲ್

    ಜನರ ಮುಂದೆ ಸೋಲು ಒಪ್ಪಿದ ಸರ್ಕಾರ

    ಜನರ ಮುಂದೆ ಸೋಲು ಒಪ್ಪಿದ ಸರ್ಕಾರ

    ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ಅಭಿಷೇಕ್ ಎಸ್ ಎನ್, "ರಾಜ್ಯ ಸರ್ಕಾರ ತಮ್ಮಿಂದ 'ಲಾ ಅಂಡ್ ಆರ್ಡರ್' ನಿಭಾಯಿಸಲು ಸಾಧ್ಯವಿಲ್ಲ ಎಂದು ಈ ಮೂಲಕ ಸಮಾಜದ ಮುಂದೆ ಒಪ್ಪಿಕೊಂಡಿದೆ" ಎಂದು ಟ್ವಿಟ್ ಮಾಡಿದ್ದಾರೆ.

    ಸರ್ಕಾರದ ನೀತಿಗೆ ಭಾರಿ ವಿರೋಧ

    ಸರ್ಕಾರದ ನೀತಿಗೆ ಭಾರಿ ವಿರೋಧ

    ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ನಲ್ಲಿ 'ಬೆಂಗಳೂರಿನ ಕಾರ್ಯಕ್ರಮಕ್ಕೆ ನಾನು ಆಗಮಿಸುತ್ತಿಲ್ಲ. ಬೆಂಗಳೂರಿನ ಪೊಲೀಸರು ನನಗೆ ಮತ್ತು ಕಾರ್ಯಕ್ರಮದ ಜನರಿಗೆ ರಕ್ಷಣೆ ಒದಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ' ಎಂದಿದ್ದಾರೆ. ಇದನ್ನ ನೋಡಿದ ಜನರು ಪೊಲೀಸರಿಗೆ ರಕ್ಷಣೆ ನೀಡಲಾಗುವುದಿಲ್ಲ ಎಂದರೆ ಮತ್ತೇನು ಮಾಡುತ್ತಾರೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಬೆಂಗಳೂರಿನಲ್ಲಿ 'ಸನ್ನಿ ನೈಟ್ಸ್' ನಿ‍ಷೇಧದ ಬಗ್ಗೆ 'ಬೇಬಿ ಡಾಲ್' ಬೇಸರಬೆಂಗಳೂರಿನಲ್ಲಿ 'ಸನ್ನಿ ನೈಟ್ಸ್' ನಿ‍ಷೇಧದ ಬಗ್ಗೆ 'ಬೇಬಿ ಡಾಲ್' ಬೇಸರ

    ಕೋರ್ಟ್ ಮೆಟ್ಟಿಲೇರಿರೋ ಆಯೋಜಕರು

    ಕೋರ್ಟ್ ಮೆಟ್ಟಿಲೇರಿರೋ ಆಯೋಜಕರು

    ಸನ್ನಿ ನೈಟ್ಸ್ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದ 'ಟೈಮ್ಸ್ ಕ್ರಿಯೇಷನ್ಸ್' ತಂಡ ಕಾರ್ಯಕ್ರಮ ಅನುಮತಿ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ. ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಅವಹೇಳನ ಮಾಡುವ ಉದ್ದೇಶ ಇಲ್ಲ, ಆಚರಣೆಗೆ ಈಗಾಗಲೇ ಸಾಕಷ್ಟು ಸಿದ್ದತೆ ನಡೆಸಿದ್ದೇವೆ. ಕಾರ್ಯಕ್ರಮಕ್ಕೆ ಹಣವನ್ನು ಖರ್ಚು ಮಾಡಲಾಗಿದೆ. ಹೀಗಾಗಿ ಅನುಮತಿ ನೀಡಲು ನಿರ್ದೇಶನಕ್ಕೆ ಮನವಿಯನ್ನೂ ಮಾಡಿದ್ದಾರೆ.

    English summary
    'Admitting I'm neither left, secular nor intellectual, this still means failure of govt,civil society and law'-Actor, Writer, Theater director Prakash Belavadi takes a dig at Karnataka Government attitude to snub Sunny Leones Happy New Year party at Manyata Teck park, Bengaluru. A viral stuff on Social Media Network.
    Wednesday, December 20, 2017, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X