»   » ಹೊಸ ವರ್ಷದ ರಾತ್ರಿಗಾಗಿ ಸನ್ನಿ ಲಿಯೋನ್ ಗೆ ಭರ್ಜರಿ ಆಫರ್

ಹೊಸ ವರ್ಷದ ರಾತ್ರಿಗಾಗಿ ಸನ್ನಿ ಲಿಯೋನ್ ಗೆ ಭರ್ಜರಿ ಆಫರ್

Posted By:
Subscribe to Filmibeat Kannada

ನೂತನ ವರ್ಷಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಉಳಿದಿರುವುದು ಕೇವಲ ಹತ್ತೇ ಹತ್ತು ದಿನಗಳು. ಇಡೀ ಜಗತ್ತೇ ಹೊಸ ವರ್ಷದ ಸಂಭ್ರಮದಲ್ಲಿ ಮಿಂದೇಳಲು ಮುಂದಾಗಿದೆ. 2015ಕ್ಕೆ ವೆಲ್ ಕಮ್ ಹೇಳುತ್ತಾ ಡಿಸೆಂಬರ್ 31ರಂದು ನಡೆಯಲಿರುವ ಸಂಭ್ರಮದ ಬಗ್ಗೆ ಒತ್ತಿ ಹೇಳಬೇಕಾದ ಅಗತ್ಯವಿಲ್ಲ.

ಮಧ್ಯರಾತ್ರಿಯಲ್ಲಿ ಆರಂಭವಾಗುವ ಹೊಸವರ್ಷದ ಸಂಭ್ರಮಾಚರಣೆಗೆ ಸಿನಿಮಾ ತಾರೆಗಳು ಹೊಸ ಸ್ಪರ್ಶ ನೀಡುತ್ತಿರುವುದು ಕಳೆದ ಕೆಲವರ್ಷಗಳಿಂದ ನಡೆದುಕೊಂಡುಬರುತ್ತಿರುವ ಆಚರಣೆ. ಮಧ್ಯರಾತ್ರಿಯಲ್ಲಿ ಇನ್ನಷ್ಟು ಕಿಕ್ ತರಲು ತಾರೆಗಳಿಗೆ ಭಾರಿ ಸಂಭಾವನೆ ನೀಡಲಾಗುತ್ತಿದೆ. [ಮಂಡ್ಯ ಹೈದನ ಜತೆ ಸೇಸಮ್ಮ ಸನ್ನಿ ಜಿಂಗ್ ಚಾಕ್ ಸ್ಟೆಪ್]

Sunny Leone

ಬೆತ್ತಲೆ ಚಿತ್ರಗಳ ಮೂಲಕ ಖ್ಯಾತರಾಗಿದ್ದ ಪೂನಂ ಪಾಂಡೆ 2014ರ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಬೆಂಗಳೂರಿನಲ್ಲಿ ಕುಣಿದು ಕುಪ್ಪಳಿಸಿದ್ದರು. ಇದೀಗ ಬಾಲಿವುಡ್ ತಾರೆ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಅವರಿಗೆ ಹೈದರಾಬಾದಿನಲ್ಲಿ ಕುಣಿಯಲು ಭರ್ಜರಿ ಆಫರ್ ನೀಡಲಾಗಿದೆ.

ಹೈದರಾಬಾದಿನ ಜೂಬ್ಲಿಹಿಲ್ಸ್ ನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಸನ್ನಿ ಲಿಯೋನ್ ಹಾಡಿ ಕುಣಿದು ರಂಜಿಸಲಿದ್ದಾರೆ. ಈ ಸಂಭ್ರಮಕ್ಕೆ ಕೋಟಿಗಟ್ಟೆ ದುಡ್ಡು ಸುರಿದು ಸನ್ನಿಯನ್ನು ಆಹ್ವಾನಿಸುತ್ತಿರುವವರು ಕಾಂಜಿಪಿಂಜಿ ಮಂದಿಯಲ್ಲ, ಭಾರಿ ದುಡ್ಡಿನ ಕುಳಗಳು ಎಂಬುದು ವಿಶೇಷ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹೊಸ ವರ್ಷದ ಆ ರಾತ್ರಿಗೆ ಇನ್ನಷ್ಟು ಮೆರುಗು ತುಂಬಲು ಸನ್ನಿ ಲಿಯೋನ್ ಸುಮಾರು ರು.5 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಓಹ್ ಅಷ್ಟೇನಾ ನೀವು ಬರುವುದು ಹೆಚ್ಚೂ ನಾವು ಕೊಡುವುದು ಹೆಚ್ಚೋ ಎಂದು ಕಾರ್ಯಕ್ರಮದ ಆಯೋಜಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಬಾಲಿವುಡ್ ನ ಕೆಲವು ಹಾಟ್ ಹಾಡುಗಳಿಗೆ ತಮ್ಮ ಮೈ ಬಳುಕಿಸಲಿದ್ದಾರಂತೆ. ಕಾರ್ಯಕ್ರಮದಲ್ಲಿ ಸೆಕ್ಸಿಸೆಕ್ಸಿಯಾಗಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ. ಆಯ್ಕೆಯಾದ ಕೆಲವೇ ಕೆಲವು ಬಿಗ್ ಶಾಟ್ಸ್ ಮಾತ್ರ ಈ ಸಂಭ್ರಮವನ್ನು ಸವಿಯಲಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Adult Star Sunny Leone is all geared up to enthral Telugu people on the night of December 31st on the eve of New Year 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada