»   » ಸ್ಯಾಂಡಲ್ ವುಡ್ ಗೆ ಹಾಟ್ ಬೆಡಗಿ ಸನ್ನಿ ಲಿಯೋನ್

ಸ್ಯಾಂಡಲ್ ವುಡ್ ಗೆ ಹಾಟ್ ಬೆಡಗಿ ಸನ್ನಿ ಲಿಯೋನ್

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಹಾಟ್ ಬೆಡಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೆ ಬಾಲಿವುಡ್ ನಲ್ಲಿ ತಮ್ಮ ಮೈಮಾಟದಿಂದಲೇ ಮೋಡಿ ಮಾಡಿರುವ ತಾರೆ ಸನ್ನಿ ಲಿಯೋನ್ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಸನ್ನಿಯನ್ನು ಕನ್ನಡಕ್ಕೆ ಕರೆತರುತ್ತಿರುವವರು ಜೋಗಿ ಪ್ರೇಮ್.

ತಮ್ಮ ಮುಂದಿನ ಚಿತ್ರ 'ಡಿ.ಕೆ'ಗಾಗಿ ಸನ್ನಿ ಲಿಯೋನ್ ಅವರನ್ನು ಪ್ರೇಮ್ ಸಂಪರ್ಕಿಸಿದ್ದಾರೆ. ಮುಂಬೈನಲ್ಲಿ ಎರಡು ಮೂರು ದಿನ ಕಾದು ಸನ್ನಿಯನ್ನು ಭೇಟಿಯಾಗಿ ಐಟಂ ಹಾಡಿಗೆ ಕರೆತರುತ್ತಿದ್ದಾರೆ. ಇದಕ್ಕಾಗಿ ಲಕ್ಷಗಟ್ಟಲೆ ಹಣವನ್ನೂ ಕೊಟ್ಟಿದ್ದಾರೆ. [ಹೊಸ ಅವತಾರದಲ್ಲಿ ಹಾಟ್ ತಾರೆ ಸನ್ನಿ ಲಿಯೋನ್]

ಇನ್ನೇನಿದ್ದರೂ ಸನ್ನಿ ಸೊಂಟ ಬಳುಕಿಸುವುದೊಂದು ಮಾತ್ರ ಬಾಕಿ ಇದೆ. ಪ್ರೇಮ್ ಅವರು ಹೊಸಹೊಸ ಐಟಂ ಬೆಡಗಿಯರನ್ನು ಕನ್ನಡಕ್ಕೆ ಕರೆತರುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ತಮ್ಮ ಚಿತ್ರಗಳಲ್ಲಿ ಹಲವಾರು ಹಾಟ್ ಬೆಡಗಿಯರ ಕೈಲಿ ಸ್ಟೆಪ್ ಹಾಕಿಸಿದ್ದಾರೆ.

ಪ್ರೇಮ್ ಚಿತ್ರಕ್ಕೆ ಐಟಂ ಬೆಡಗಿ ಇರಲೇಬೇಕಾ?

ಜೋಗಿ ಚಿತ್ರದಲ್ಲಿ ಬಿನ್ ಲಾಡೆನ್ನು ನನ್ ಮಾವ ಎಂದು ಯಾನಾ ಗುಪ್ತ ಮೈಬಳುಕಿಸಿದ್ದರು. 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ತುಂಡುಡುಗೆಯಲ್ಲಿ ಕುಣಿದಿದ್ದರು. ಪ್ರೇಮ್ ಅಡ್ಡ ಚಿತ್ರದಲ್ಲಿ ಸ್ಕಾರ್ಲೆಟ್ ನಿಕೋಲ್ಸನ್ ಹೆಜ್ಜೆ ಹಾಕಿದ್ದರು. ಈಗ ಸನ್ನಿ ಲಿಯೋನ್ ಬರುತ್ತಿದ್ದಾರೆ.

ಈಗ ಸೊಂಟ ಬಳುಕಿಸಲು ಸನ್ನಿ ಬರುತ್ತಿದ್ದಾರೆ

'ಲವ್ ಈಸ್ ಪಾಯಿಸನ್' ಚಿತ್ರದಲ್ಲಿ ಪೂನಂ ಪಾಂಡೆ ಸ್ಟೆಪ್ ಹಾಕಿದ್ದಾರೆ. 'ಸಿಲ್ಕ್ ಸಖತ್ ಹಾಟ್' ಚಿತ್ರದಲ್ಲಿ ಪಾಕಿಸ್ತಾನಿ ಬೆಡಗಿ ವೀಣಾ ಮಲಿಕ್ ಅಭಿನಯಿಸಿದ್ದರು. ಈಗ ಸನ್ನಿ ಲಿಯೋನ್ ಐಟಂ ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೊಂಟ ಬಳುಕಿಸಲು ಬರುತ್ತಿದ್ದಾರೆ.

ಇಷ್ಟಕ್ಕೂ ಡಿಕೆ ಎಂದರೆ ಯಾರು ಏನು?

ಇಷ್ಟಕ್ಕೂ 'ಡಿ.ಕೆ' ಎಂದರೆ ಏನು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಗಾಂಧಿನಗರದಲ್ಲಿ ಮಾತ್ರ ಈ ಶೀರ್ಷಿಕೆ ಬಗ್ಗೆ ಒಂದು ಸಣ್ಣ ಗುಮಾನಿಯೂ ಹಬ್ಬಿದೆ. ಅದೇನೆಂದರೆ ಡಿ.ಕೆ ಎಂದರೆ ಹಾಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುರಿತ ಕಥೆ ಎನ್ನಲಾಗಿದೆ.

ಇದು ರಾಜಕಾರಣಿಯೊಬ್ಬರ ಕಥೆಯಲ್ಲ

ಆದರೆ ಈ ‌ಸುದ್ದಿಯನ್ನು ಪ್ರೇಮ್ ಸಾರಾಸಗಟಾಗಿ ತಳ್ಳಿಹಾಕುತ್ತಾರೆ. 'ಡಿ.ಕೆ' ಎಂದರೆ ಯಾಕೆ ಎಲ್ಲರೂ ಇದೊಂದು ರಾಜಕಾರಣಿಯ ಕಥೆ ಎಂದು ಭಾವಿಸುತ್ತಾರೋ ನಾ ಕಾಣೆ ಎನ್ನುತ್ತಾರೆ.

ಇದೊಂದು ರಾ ಲವ್ ಸ್ಟೋರಿ ಕಣ್ಲಾ

ಇದು ಯಾವ ರೀತಿಯ ಕಥೆ ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆ ತನಕ ಕಾಯಿರಿ ಎಂದು ಹೇಳುವುದನ್ನು ಮಾತ್ರ ಅವರು ಮರೆಯುವುದಿಲ್ಲ. ಅಂದಹಾಗೆ ಈ ಚಿತ್ರಕ್ಕೆ ರಾ ಲವ್ ಸ್ಟೋರಿ ಎಂದೂ ಕರೆದಿದ್ದಾರೆ ಪ್ರೇಮ್.

English summary
Bollywood hot beauty Sunny Leone will be seen in a special song in Kannada movie D.K, which is directed by Prem. Sunny making her Kannada debut with the item song in 'DK'.
Please Wait while comments are loading...