ಇಂದು ಬೆಂಗಳೂರಿನಲ್ಲಿ 'ಸನ್ನಿ ನೈಟ್'

ಹಲವು ದಿನಗಳಿಂದ ಭಾರಿ ಚರ್ಚೆಯಲ್ಲಿದ್ದ 'ಸನ್ನಿ ನೈಟ್' ಕಾರ್ಯಕ್ರಮ ಕೊನೆಗೂ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಸನ್ನಿ ಲಿಯೋನ್ ಬೆಂಗಳೂರಿಗೆ ಬಂದ್ರೆ ಪ್ರತಿಭಟನೆ ಮಾಡೋದಾಗಿ ಕೆಲವು ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದರು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆಯೋಜಕರು ಪೊಲೀಸ್ ಭದ್ರತೆಯೊಂದಿಗೆ ಶೋ ಮಾಡುತ್ತಿದ್ದಾರೆ.

ಇಂದು (ನವೆಂಬರ್ 3) ಸಂಜೆ 6 ಗಂಟೆಗೆ ಬೆಂಗಳೂರಿನ ಮಾನ್ಯಾತಾ ಟೆಕ್ ಪಾರ್ಕ್ ನ ವೈಟ್ ಆರ್ಕೆಡ್ ನಲ್ಲಿ ಸನ್ನಿ ಲಿಯೋನ್ ಶೋ ಆರಂಭವಾಗಲಿದ್ದು, ರಾತ್ರಿ 10 ಗಂಟೆಯವರೆಗೂ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್ ಸುತ್ತ ಪೊಲೀಸರು ನಿಯೋಜನೆಯಾಗಿದ್ದು, 330 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 2 ಎಸಿಪಿ, 6 ಇನ್ಸ್ ಪೆಕ್ಟರ್ ಮತ್ತು 15 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 330 ಪೊಲೀಸರು ಭದ್ರತೆಗೆ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Sunny Leone to perform in bangalore

ಈ ಕಾರ್ಯಕ್ರಮದಲ್ಲಿ ಮೂರು ಹಾಡುಗಳಿಗೆ ಸನ್ನಿ ಲಿಯೋನ್ ಸೊಂಟ ಬಳುಕಿಸಲಿದ್ದಾಳೆ. ವಿಶೇಷ ಅಂದ್ರೆ, ಇದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘುದೀಕ್ಷಿತ್ ಕೂಡ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಅವರ ಶೋ ಹೆಚ್ಚು ಕಾಲ ಇರಲಿದೆ. ಸನ್ನಿ ಕೇವಲ ಮೂರು ಹಾಡಿಗೆ ಮಾತ್ರ ಡ್ಯಾನ್ಸ್ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

More from Filmibeat

English summary
Bollywood Actress Sunny Leone to perform along with music director raghu dixit in Bengaluru today ( November 3)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X