ಕನ್ನಡದಲ್ಲಿ 'ವೀರಮಹಾದೇವಿ' ಆದ ಸನ್ನಿ ಲಿಯೋನ್.!
Recommended Video

ನೀಲಿ ಲೋಕದ ಮಾಜಿ ನಟಿ, ಕಾಮಕನ್ನಿಕೆ, ಬಾಲಿವುಡ್ ಹಾಟ್ ಬಾಂಬ್, ಪಡ್ಡೆ ಹುಡುಗ್ರ ಕನಸಿನ ಹೀರೋಯಿನ್ ಎಂದೆಲ್ಲ ಗುರುತಿಸಿಕೊಂಡಿರುವ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ.
ಈ ಸಲ ಯಾವುದೋ ಒಂದು ಹಾಡಿನಲ್ಲೋ ಅಥವಾ ಒಂದು ಪಾತ್ರದಲ್ಲೋ ಬಂದು ಹೋಗ್ತಿಲ್ಲ. ಇಡೀ ಚಿತ್ರಕ್ಕೆ ಅವರೇ ನಾಯಕಿ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ ಸನ್ನಿ ಲಿಯೋನ್ ನಾಯಕಿಯಾಗಿದ್ದಾರೆ.
ಚಿತ್ರಕ್ಕೆ 'ವೀರಮಹಾದೇವಿ' ಎಂದು ಹೆಸರಿಟ್ಟಿದ್ದು, ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಆದ್ರೆ, ಇದೊಂದು ಡಬ್ಬಿಂಗ್ ಸಿನಿಮಾ ಎನ್ನುವುದು ಗಮನಿಸಬೇಕಾದ ವಿಚಾರ. ಅಷ್ಟಕ್ಕೂ, ಈ ವೀರಮಹಾದೇವಿ ಚಿತ್ರದ ವಿಶೇಷತೆ ಏನು.? ಸನ್ನಿಯ ಹೊಸ ಲುಕ್ ಹೇಗಿದೆ.? ಮುಂದೆ ಓದಿ....

'ವೀರಮಹಾದೇವಿ' ಫಸ್ಟ್ ಲುಕ್
ತಮಿಳಿನಲ್ಲಿ ಸೆಟ್ಟೇರಿರುವ 'ವೀರಮಹಾದೇವಿ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಈ ಚಿತ್ರಕ್ಕೆ ಸನ್ನಿ ಲಿಯೋನ್ ನಾಯಕಿಯಾಗಿದ್ದಾರೆ. ದಕ್ಷಿಣ ಭಾರತ ಇತಿಹಾಸಲ್ಲಿ ದಾಕಲಾಗಿರುವ ಮಹರಾಣಿಯೊಬ್ಬಳ ಪಾತ್ರದಲ್ಲಿ ಸನ್ನಿ ಅಭಿನಯಿಸುತ್ತಿದ್ದಾರೆ. ಅಂದ್ಹಾಗೆ, ಇದು ಮೊದಲ ತಮಿಳು ಚಿತ್ರವಾಗಲಿದೆ.

ಕನ್ನಡದಲ್ಲೂ ಬಿಡುಗಡೆಯಾಗುತ್ತೆ
ಇದೊಂದು ಮೂಲತಃ ತಮಿಳು ಸಿನಿಮಾ. ಆದ್ರೆ, ಕನ್ನಡದಲ್ಲೂ ಬಿಡುಗಡೆಯಾಗಲಿದೆಯಂತೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಸನ್ನಿಯ ವೀರಮಹಾದೇವಿ ಡಬ್ಬಿಂಗ್ ಆಗಲಿದೆ ಎಂದು ಚಿತ್ರತಂಡವೇ ಸ್ಪಷ್ಟಪಡಿಸಿದೆ.

ಅನುಷ್ಕಾ ಹಾದಿಯಲ್ಲಿ ಸನ್ನಿ.!
ಅರುಂಧತಿ, ರುದ್ರಮದೇವಿ, ಬಾಹುಬಲಿ ರೀತಿಯಲ್ಲಿ ಈ ಸಿನಿಮಾನೂ ಸಿದ್ಧವಾಗುತ್ತಿದ್ದು, ಸನ್ನಿ ಕೈಯಲ್ಲಿ ಖಡ್ಗ ಹಿಡಿದು, ಕುದರೆ ಏರಿ ಯುದ್ಧ ಮಾಡಲಿದ್ದಾರೆ. ಪೋನ್ಸ್ ಸ್ಟೀಪನ್ಸ್ ನಿರ್ಮಾಣ ಮಾಡುತ್ತಿದ್ದಾರೆ. ವಡಿಯೂದೈನ್ ನಆಕ್ಷನ್ ಕಟ್ ಹೇಳ್ತಿದ್ದಾರೆ.

ಡಬ್ಬಿಂಗ್ ಸಿನಿಮಾ ರಿಲೀಸ್ ಆಗುತ್ತಾ.?
ತಮಿಳಿನಲ್ಲಿ ಆರಂಭವಾಗಿರುವ ಈ ಸಿನಿಮಾ ಕನ್ನಡದಲ್ಲೂ ಡಬ್ಬಿಂಗ್ ಆಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಕನ್ನಡ ಇಂಡಸ್ಟ್ರಿಯಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ವಿರೋಧವಿದೆ.


Click it and Unblock the Notifications