For Quick Alerts
  ALLOW NOTIFICATIONS  
  For Daily Alerts

  ವೋಟರ್ ಐಡಿಯಲ್ಲಿ ಎಡವಟ್ಟು: 'ದುರ್ಗಾವತಿ'ಯಾದ ಸನ್ನಿ ಲಿಯೋನ್

  By Harshitha
  |

  ''ದುರ್ಗಾವತಿ'ಯಾದ ಸನ್ನಿ ಲಿಯೋನ್'' ಎಂದ ಕೂಡಲೆ ಮೋಹಕ ಬೆಡಗಿ ಸನ್ನಿ ಲಿಯೋನ್ ಯಾವುದೋ ಹೊಸ ಸಿನಿಮಾ ಮಾಡುತ್ತಿರಬೇಕು... 'ದುರ್ಗಾವತಿ' ಪಾತ್ರದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿರಬೇಕು ಅಂತ ನೀವು ಭಾವಿಸಬಹುದು.

  ಆದ್ರೆ, ನಾವಿಲ್ಲಿ ಹೇಳಲು ಹೊರಟಿರುವುದು 'ರೀಲ್' ಸುದ್ದಿ ಅಲ್ಲ. ಬದಲಾಗಿ 'ರಿಯಲ್' ಸುದ್ದಿ. ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್ ಫೋಟೋ ಪತ್ತೆ ಆಗಿದೆ. ಸನ್ನಿ ಲಿಯೋನ್ ಫೋಟೋಗೆ ದುರ್ಗಾವತಿ ಅಂತ ಹೆಸರು ನೀಡಲಾಗಿದೆ.!

  ಇದೇನಿದು ಸನ್ನಿ ಲಿಯೋನ್ ಹೇಗೆ ದುರ್ಗಾವತಿ ಆದರು ಅಂತ ಆಶ್ಚರ್ಯ ಪಡ್ತಿದ್ದೀರಾ.? ಇದೆಲ್ಲ ಡೇಟಾ ಆಪರೇಟರ್ ಮಾಡಿರುವ ಎಡವಟ್ಟು. ಬರೀ ಸನ್ನಿ ಲಿಯೋನ್ ಫೋಟೋ ಮಾತ್ರ ಅಲ್ಲ. ಉತ್ತರ ಪ್ರದೇಶದ ವೋಟರ್ ಲಿಸ್ಟ್ ನಲ್ಲಿ ಆನೆ, ಪಾರಿವಾಳ ಹಾಗೂ ಜಿಂಕೆ ಕೂಡ ಕಾಣಿಸಿಕೊಂಡಿದೆ.

  ಏನಿದು ವಿಚಿತ್ರವಾಗಿದೆ ಅಂತ ಅಂದುಕೊಳ್ಳುತ್ತಿರುವವರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

  ಮತದಾರರ ಪಟ್ಟಿಯಲ್ಲಿ ಸನ್ನಿ ಹಾಟ್ ಫೋಟೋ

  ಮತದಾರರ ಪಟ್ಟಿಯಲ್ಲಿ ಸನ್ನಿ ಹಾಟ್ ಫೋಟೋ

  ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್ ರ ಹಾಟ್ ಫೋಟೋ ಮುದ್ರಣಗೊಂಡಿದೆ. ವೋಟರ್ ಲಿಸ್ಟ್ ನಲ್ಲಿ ದುರ್ಗಾವತಿ ಸಿಂಗ್ ಎಂಬ ಮಹಿಳೆಯ ಫೋಟೋ ಬದಲಾಗಿ ಸನ್ನಿ ಲಿಯೋನ್ ಭಾವಚಿತ್ರ ತೋರಿಸುತ್ತಿದೆ.

  ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

  ವೋಟರ್ ಲಿಸ್ಟ್ ನಲ್ಲಿ ಆನೆ, ಜಿಂಕೆ

  ವೋಟರ್ ಲಿಸ್ಟ್ ನಲ್ಲಿ ಆನೆ, ಜಿಂಕೆ

  ಮತದಾರರ ಪಟ್ಟಿಯಲ್ಲಿ ಜನರ ಭಾವಚಿತ್ರ ಬದಲಾಗಿ ಪ್ರಾಣಿಗಳ ಫೋಟೋ ಹಾಕಲಾಗಿದೆ. ಕುನ್ವರ್ ಅಂಕುರ್ ಸಿಂಗ್ ಗೆ ಜಿಂಕೆಯ ಫೋಟೋ ಹಾಕಲಾಗಿದ್ದು, ಕುನ್ವರ್ ಗೌರವ್ ಸಿಂಗ್ ಗೆ ಪಾರಿವಾಳದ ಫೋಟೋ ಪ್ರಿಂಟ್ ಮಾಡಲಾಗಿದೆ. ಇನ್ನೂ ಮಾಜಿ ಸಚಿವ ನಾರದ್ ರೈ ಹೆಸರಿನ ಮುಂದೆ ಆನೆಯ ಚಿತ್ರ ಇದೆ.

  ಸನ್ನಿ ಅಂದ್ರೆ ಮಾದಕ ಅಲ್ಲ, ಮಾನವೀಯತೆ : ಗೌರವ ಮೂಡಿಸುವ ಸನ್ನಿಯ ಕೆಲಸಗಳು!ಸನ್ನಿ ಅಂದ್ರೆ ಮಾದಕ ಅಲ್ಲ, ಮಾನವೀಯತೆ : ಗೌರವ ಮೂಡಿಸುವ ಸನ್ನಿಯ ಕೆಲಸಗಳು!

  ತಡವಾಗಿ ಬೆಳಕಿಗೆ ಬಂದಿದೆ

  ತಡವಾಗಿ ಬೆಳಕಿಗೆ ಬಂದಿದೆ

  ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಮತದಾರರ ಪಟ್ಟಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ವೋಟರ್ ಲಿಸ್ಟ್ ನಲ್ಲಿ ಮಾಹಿತಿ ಸರಿಯಾಗಿದ್ದು, ಫೋಟೋಗಳು ಮಾತ್ರ ಸಮಸ್ಯೆ ತಂದಿವೆ. ಇದಕ್ಕೆಲ್ಲ ಡೇಟಾ ಆಪರೇಟರ್ ಕಾರಣ ಎನ್ನಲಾಗಿದೆ.

  ಎಫ್.ಐ.ಆರ್ ದಾಖಲು

  ಎಫ್.ಐ.ಆರ್ ದಾಖಲು

  ಸದ್ಯ ಡೇಟಾ ಆಪರೇಟರ್ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದಷ್ಟು ಬೇಗ ತಪ್ಪುಗಳನ್ನು ಸರಿ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  English summary
  Sunny Leone's photo printed in Uttar Pradesh voter ID of a Woman named Durgawathi Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X