ದರ್ಶನ್ ಬಗ್ಗೆ ಕೇಳಿದ್ದಕ್ಕೆ ಮುಖ ಕಿವುಚಿಕೊಂಡು ಏನಂದ್ರು ಸನ್ನಿ ಲಿಯೋನ್...?

By ಫಿಲ್ಮಿಬೀಟ್ ಡೆಸ್ಕ್

ದುರಂಹಕಾರಕ್ಕೆ ಮತ್ತೊಂದು ಹೆಸರೇನು ಎಂದು ಯಾರನ್ನಾದರೂ ಯಾರಾದರೂ ಕೇಳಿದರೆ, ಸದ್ಯಕ್ಕೆ ಕರುನಾಡಿನಲ್ಲಿ ಬಹುತೇಕರು ದರ್ಶನ್ ಎಂಬ ಉತ್ತರವನ್ನೇ ಕೊಡುತ್ತಾರೆ. ದರ್ಶನ್ ಖ್ಯಾತಿ ಎಷ್ಟರ ಮಟ್ಟಿಗೆ ಪಸರಿಸಿದೆ ಅಂದರೆ, ಕೋಪದಿಂದ ಕೊಯ್ದ ಮೂಗು ಮತ್ತೆ ಬರುವುದಿಲ್ಲ ಎಂಬ ಮಾತನ್ನು ಮರೆತು, ಕೋಪದ ಕೈಗೆ ಬುದ್ದಿಯನ್ನೂ ಕೊಟ್ಟು ಈಗ ಕೊರಗುತ್ತಿರುವ ದರ್ಶನ್‌ ಬಗ್ಗೆ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಕೂಡ ಈಗ ಮಾತನಾಡಿದ್ದಾರೆ.

ಹೌದು. ನೀಲಿ ನೆರಳಿನಿಂದ ಆಚೆ ಬಂದು ಇವತ್ತು ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿರುವ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದಿದ್ದರು. ಕನ್ನಡದಲ್ಲಿಯೇ ಮಾತು ಶುರು ಮಾಡಿ, ಎಲ್ರನ್ನ ನಿಬ್ಬೇರಗಾಗಿಸಿದರು. ಕನ್ನಡ ಕಲಿಯುತ್ತೇನೆ ಎಂಬ ಭರವಸೆಯನ್ನೂ ನೀಡುವ ಮೂಲಕ ಅಲ್ಲಿದ್ದವರ ಹೃದಯವನ್ನೂ ಗೆದ್ದರು ಸನ್ನಿ ಲಿಯೋನ್.

sunny-leones-response-to-sandalwood-actor-darshan-thoogudeepas-case

ಇನ್ನೂ ಕೇವಲ ದರ್ಶನ್‌ಗೆ ಮಾತ್ರ ಅಭಿಮಾನಿಗಳಿಲ್ಲ. ಸನ್ನಿ ಲಿಯೋನ್‌ಗೂ ಕೂಡ ಅಗಣಿತ.. ಅಸಂಖ್ಯಾತ... ಭಕ್ತರು ಇದ್ದಾರೆ. ಹೀಗಾಗಿಯೇ ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಸುದ್ದಿ ಕೇಳಿದ್ದ ಅಭಿಮಾನದ ಬಾವುಟ ಹೊತ್ತ ವರ್ಗ ಹೆಚ್‌.ಆರ್‌.ಬಿ.ಆರ್‌ ಲೇಔಟ್‌ನಲ್ಲಿ ಬಿಡಾರ ಹೂಡಿತ್ತು. ನೆಚ್ಚಿನ ನಾಯಕಿಗೆ ಜೈಕಾರವನ್ನೂ ಕೂಗುತ್ತಿತ್ತು.

ತನಗೆ ಸಿಕ್ಕ ಈ ಅಭೂತಪೂರ್ವ ಸ್ವಾಗತದಿಂದ ಸನ್ನಿ ಲಿಯೋನ್ ಸಂಭ್ರಮದಲ್ಲಿಯೇ ಇದ್ದರು. ಆದರೆ, ಅಷ್ಟರಲ್ಲಿಯೇ.. ಸನ್ನಿ ಲಿಯೋನ್ ಅವರಿಗೆ ಕನ್ನಡ ಚಿತ್ರರಂಗದ ಕುಖ್ಯಾತ ನಾಯಕ ದರ್ಶನ್ ಬಗ್ಗೆ ಪ್ರಶ್ನೆಯನ್ನ ಕೇಳಲಾಯ್ತು. ಸಹಜವಾಗಿಯೇ ಸನ್ನಿ ಲಿಯೋನ್ ಅವರ ತಾಳ್ಮೆ ಹಾರಿ ಹೋಯ್ತು. ಪಿತ್ತ ನೆತ್ತಿಗೇರಿತು. ಹೀಗಾಗಿಯೇ ಕೋಪದಲ್ಲಿಯೇ ಮಾತನಾಡಿದ ಸನ್ನಿ ಲಿಯೋನ್.. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ ಎಂದು ಮರು ಪ್ರಶ್ನೆಯನ್ನ ಹಾಕಿದರು. ಇದು ಸಹ ಹಾಗೆ ಎಂದು ಕೈ ಮುಗಿದರು.

sunny-leones-response-to-sandalwood-actor-darshan-thoogudeepas-case

ಸನ್ನಿ ಲಿಯೋನ್ ಮಾತನಾಡಿದ ಈ ಮಾತು ಅವರವರ ಭಾವಕ್ಕೆ ಅವರವರ ಭಕುತಿಗೆ ಆದರೂ, ಈ ಪ್ರಕರಣದ ಆಸು ಪಾಸು ಕೂಡ ದರ್ಶನ್ ಇಲ್ಲ ಎಂಬ ಮೊಂಡು ವಾದ ಮಾಡುತ್ತಿರುವ ಕೆಲವರು ದರ್ಶನ್ ಅವರನ್ನ ಬೆಂಬಲಿಸಿ ಸನ್ನಿ ಲಿಯೋನ್ ಮಾತನಾಡಿದ್ದಾರೆ ಎಂದು ಹುಯಿಲೆಬ್ಬಿಸುವ ಕೆಲಸಕ್ಕಿಳಿದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡ್ದೇ ಇದ್ದರೂ ಕೂಡ ನಮ್ಮ ಬಾಸು ವರ್ಲ್ಡ್‌ಗೆಲ್ಲ ಫೇಮಸು ಅಂತ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.

ಅಂದ್ಹಾಗೇ ನಿನ್ನೆಯಷ್ಟೇ ರಚಿತಾ ರಾಮ್, ದರ್ಶನ್ ನನ್ನ ಬದುಕಿನ ಗುರು ಎಂದಿದ್ದರು. ಅದಕ್ಕೂ ಕೆಲ ದಿನದ ಹಿಂದೆ ದರ್ಶನ್ ಅಂತಹ ದೊಡ್ಡ ಸ್ಟಾರ್‌ ಏನಲ್ಲ ಎಂದು ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ವ್ಯಂಗ್ಯದ ಮಾತುಗಳನ್ನಾಡಿದ್ದರು. ಸುದೀಪ್, ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂದಿದ್ದರು.

ಉಳಿದಂತೆ ಸದ್ಯಕ್ಕೆ ದುರ್ಜನರ ಸಂಗ ಮಾಡಿದ ತಪ್ಪಿಗೆ, ಅರೆ ಕ್ಷಣಕ್ಕಾದರೂ ದರ್ಶನ್ ಮನ, ಪಶ್ಚಾತಾಪದ ಅಗ್ನಿಕುಂಡದಲ್ಲಿ ಬೆಂದಿರುತ್ತೆ. ಇನ್ನೂ..ಅಭಿಮಾನಿಗಳ ಈ ದಾಸ ಹೊರಗಡೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಇಲ್ಲ. ಹೊರ ಬಂದ ನಂತರವಾದರೂ ಕೂಡ ನಡೆ - ನುಡಿಯಲ್ಲಿ ಬದಲಾವಣೆ ಕಂಡು ಬರುತ್ತಾ ಅನ್ನುವುದಕ್ಕೂ ಉತ್ತರ ಆ ದೇವರಿಗೆ ಗೊತ್ತು.

More from Filmibeat

English summary
Bollywood Actress Sunny Leone's Reaction to Sandalwood Actor Darshan Thoogudeepa's Case"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X