ಸೂಪರ್ ಡೂಪರ್ ಕಾನ್ಸೆಪ್ಟ್ ಇರುವ ಚಿತ್ರ ಟೋನಿ

By Rajendra
<ul id="pagination-digg"><li class="previous"><a href="/news/tony-hero-diamond-star-srinagara-kitty-interview-076429.html">« Previous</a>

5. ಇಷ್ಟಕ್ಕೂ ಚಿತ್ರದ ಸಬ್ಜೆಕ್ಟ್ ಏನು?
ಇಂದಿನ ಕಾಸ್ಮೋಪಾಲಿಟನ್ ನಗರಗಳಲ್ಲಿ ಗೊತ್ತಿದ್ದೂ ಗೊತ್ತಿಲ್ಲದೆ ಅಥವಾ ಗೊತ್ತಿಲ್ಲದೆಯೂ ಗೊತ್ತಾಗುವಂತೆ ನಡೆಯುತ್ತಿರುವಂತಹ ಒಂದು ಮಾಫಿಯಾವನ್ನು ಮೂಲವಾಗಿಸಿಕೊಂಡು ಹೆಣೆದ ಕಥೆ. ಚೆನ್ನಾಗಿ ಹಣ ಮಾಡಬೇಕು. ಒಂದೇ ದಿನ ಬದುಕಿದ್ದರೂ ರಾಯಲ್ ಆಗಿರಬೇಕು ಎಂಬ ಮನೋಭಾವವುಳ್ಳ ಹುಡುಗ. ಈ ರೀತಿಯ ಹುಡುಗ ಯಾವ ರೀತಿಯ ಒತ್ತಡಕ್ಕೆ ಸಿಕ್ಕಿಬೀಳುತ್ತಾನೆ.ಅಲ್ಲಿಂದ ಹೇಗೆ ಹೊರಬರುತ್ತಾನೆ ಎಂಬುದೇ ಕಥೆ.

6. ಡೈಲಾಗ್ ಗಳ ಪರವಾಗಿ ಚಿತ್ರ ಹೇಗೆ ಬಂದಿದೆ?
ಚಿತ್ರದಲ್ಲಿ ಜಯತೀರ್ಥ ನುಡಿಗಟ್ಟುಗಳನ್ನು ತುಂಬಾ ಚೆನ್ನಾಗಿ ಬಳಸಿದ್ದಾನೆ. ನಾವು ಪ್ರೀತಿಗೆ ಅಂಥ ಹುಡುಕ್ತೀವಿ ಆದರೆ ನಿಜವಾದ ಪ್ರೀತಿಗಾಗಿ ಪ್ರೀತಿಯಿಂದ ಬದುಕುವುದೇ ಇಲ್ಲ. ಮನುಷ್ಯನ ಆಸೆಗಳ ಬಗ್ಗೆ ಆಗಿರಬಹುದು. ಚಿತ್ರದಲ್ಲಿ ಪ್ರತಿಯೊಂದು ಮಾತುಗಳು ತುಂಬಾ ಪರಿಣಾಮಕಾರಿಯಾಗಿವೆ. ಚಿತ್ರದಲ್ಲಿನ ಎಲ್ಲಾ ಡೈಲಾಗ್ ಗಳು ನನಗೆ ಇಷ್ಟ. ಚಿತ್ರದಲ್ಲಿನ ಪ್ರತಿಯೊಂದು ಮಾತು ನಾಣ್ನುಡಿ ತರಹ ಇವೆ.

7. ಹುಲಿಗಳ ಜೊತೆ ಹೆಜ್ಜೆ ಹಾಕಿದ್ದೀರಿ ಹೇಗಿತ್ತು ಅನುಭವ?
ಅದೊಂದು ತುಂಬಾ ಅದ್ಭುತವಾದಂತಹ ಅನುಭವ. ಎಂಟು ಹುಲಿಗಳು ಎರಡು ಹುಲಿ ಮರಿಗಳು ಒಟ್ಟು ಹತ್ತು ಹುಲಿಗಳ ಜೊತೆ ಹೆಜ್ಜೆ ಹಾಕಿದ್ದೇನೆ. ಯಾರೂ ಈ ರೀತಿಯ ಪ್ರಯೋಗ ಮಾಡಿಲ್ಲ. ಭಾರತೀಯ ಚಿತ್ರೋದ್ಯಮದಲ್ಲೇ ಯಾರೂ ಮಾಡಿಲ್ಲ. ಇದೊಂದು ಎಕ್ಸ್ ಕ್ಲೂಸೀವ್ ಆಗಿರುವ ವಿಷುಯಲ್ಸನ್ನು ನಾವು ಪ್ರಯತ್ನಿಸಿದ್ದೇವೆ. ಸಖತ್ ಆಗಿತ್ತು. ಭಯ ಆಗುತ್ತಿತ್ತು. ಆದರೆ ಭಯವನ್ನು ಮೀರಿ ಏನಾದರೂ ಮಾಡಬೇಕು ಅಂಥ ಅನ್ನಿಸುತ್ತಿತ್ತು. ಎಲ್ಲಾ ಕಡೆಯಿಂದಲೂ ಈ ಸನ್ನಿವೇಶಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆ ಹಾಡನ್ನು ನೋಡಲು ಖುಷಿಪಡುತ್ತಿದ್ದಾರೆ. ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆಯಿತು. ಹತ್ತು ಹುಲಿಗಳು ಮತ್ತು ಆನೆಗಳೊಂದಿಗೆ ಚಿತ್ರೀಕರಣ ನಡೆಸಿದ್ದೇವೆ.

8. ಟೋನಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ?
ಸರಿಸುಮಾರು 125 ರಿಂದ 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಎರಡು ವಾರಗಳ ನಂತರ ವಿದೇಶಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಚೆನ್ನೈ, ಹೈದರಾಬಾದ್, ಮುಂಬೈನಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ.

9. ಐಂದ್ರಿತಾ ರೇ ಜೊತೆಗಿನ ಪಾತ್ರದ ಬಗ್ಗೆ ಹೇಳಿ?
ಐಂದ್ರಿತಾ ರೇ ಅವರದು ಈ ಚಿತ್ರದಲ್ಲಿ ಮುಗ್ಧ ಹಾಗೂ ಪ್ರೀತಿಗೆ ತುಂಬಾ ಬೆಲೆ ಕೊಡುವಂತಹ ಪಾತ್ರ. ತಾನು ಪ್ರೀತಿಸಿದ ಹುಡುಗನೇ ಜೀವನ ಎಂದು ನಂಬಿರುವ ಹುಡುಗಿ ಪಾತ್ರ. ಅವಳನ್ನು ಅಲ್ಲಿಂದ ಹೊರತಂದು ಜೀವನ ಮೌಲ್ಯಗಳನ್ನು ತಿಳಿಹೇಳುವಂತಹ ಪಾತ್ರ. ಮೇಕಪ್ ಇಲ್ಲದಂತೆ ತಮ್ಮ ಪಾತ್ರವನ್ನು ಅದ್ಭುತವಾಗಿ ಪೋಷಿಸಿದ್ದಾರೆ.

Diamond Star Srinagara Kitty

10. ಚಿತ್ರದಲ್ಲಿ ಲಂಕೇಶ್ ಅವರ ನೀಲು ಹನಿಗವನಗಳ ಬಳಕೆಯ ಉದ್ದೇಶ?
ಲಂಕೇಶ್ ಅವರ ನೀಲು ಕವನಗಳ ಸ್ಫೂರ್ತಿಯಿಂದ ಒಂದಷ್ಟು ಪ್ರಯೋಗಗಳನ್ನು ಮಾಡಿದ್ದೇವೆ. ಚಿತ್ರದಲ್ಲಿ ನಡೆಯುವ ಒಂದಷ್ಟು ಘಟನೆಗಳಿಗೆ ಲಂಕೇಶ್ ಅವರ ಮೌಲ್ಯಾಧಾರಿತ ಮಾತುಗಳನ್ನು ಅವರದೇ ಆದ ದಾರಿಯಲ್ಲಿ ಹೇಳಿದರೆ ಸೂಕ್ತ ಅನ್ನಿಸಿತು. ಹಾಗಾಗಿ ಅವನ್ನು ಬಳಸಿಕೊಂಡಿದ್ದೇವೆ. ಇಂದಿಗೂ ಪ್ರಸ್ತುತ ಅನ್ನಿಸುವ ಅವರ ಕೆಲವು ಮಾತುಗಳನ್ನು ಬಳಸಿಕೊಂಡಿದ್ದೇವೆ.

11. ಟೋನಿ ಚಿತ್ರ ಯಾಕೆ ನೋಡಬೇಕು?
ಇದೊಂದು ಸೂಪರ್ ಡೂಪರ್ ಕಾನ್ಸೆಪ್ಟ್ ಉಳ್ಳ ಚಿತ್ರ. ಪ್ರೇಕ್ಷಕರ ಎದೆ ಝಲ್ ಎನ್ನಿಸದೆ ಇರದು. ಸಿನಿಮಾ ಪ್ರೇಮಿಗಳು ತಪ್ಪದೇ ನೋಡಬೇಕಾದ ಚಿತ್ರವಿದು. ಅವರ ಹಣ ಮತ್ತು ಸಮಯಕ್ಕೆ ಮೋಸವಾಗಲ್ಲ. ಖಂಡಿತ ಈ ಚಿತ್ರ ನಿಮಗೆ ಖುಷಿಕೊಡುತ್ತದೆ ಎಂಬ ಭರವಸೆಯನ್ನು ನಾನು ಕೊಡುತ್ತೇನೆ.

<ul id="pagination-digg"><li class="previous"><a href="/news/tony-hero-diamond-star-srinagara-kitty-interview-076429.html">« Previous</a>

More from Filmibeat

English summary
Diamond Star Srinagara Kitty shares his love, passion, joy and happiness on his upcoming film Tony, directed by 'Olave Mandara' fame Jayatheertha. Actress Aindrita Ray plays lead in the film. Kitty says it's complete different and super duper concept film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X