ಕಿಚ್ಚನ ಮಾರ್ಕೆಟ್ ಹಿಗ್ಗಿಸಿದ 'ಮ್ಯಾಕ್ಸ್'; ಇನ್ನು ಮುಂದೆ ಹೊಸ ಲೆಕ್ಕ

ಒಂದು ಬ್ಲಾಕ್‌ಬಸ್ಟರ್ ಸಿನಿಮಾ ಸಹಜವಾಗಿಯೇ ಸ್ಟಾರ್ ನಟನ ಮಾರ್ಕೆಟ್ ಹಿಗ್ಗಿಸುತ್ತದೆ. ಒಬ್ಬ ನಟನ ಚಿತ್ರಕ್ಕೆ ಎಷ್ಟು ಹಣ ಹಾಕಬಹುದು? ಎಷ್ಟು ವಾಪಸ್ ಬರುತ್ತದೆ? ಎಷ್ಟು ಬ್ಯುಸಿನೆಸ್ ನಡೆಯುತ್ತದೆ? ಅಂತೆಲ್ಲಾ ಚಿತ್ರರಂಗದಲ್ಲಿ ಒಂದು ಲೆಕ್ಕ ಇರುತ್ತದೆ. ಸಿಂಪಲ್ ಆಗಿ ಬಂದು 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಅಷ್ಟೇ ಅಲ್ಲ, ಕಿಚ್ಚನ ಸಿನಿಮಾ ಮಾರ್ಕೆಟ್ ಹಿರಿದು ಮಾಡಿದೆ.

ಕೇವಲ 8 ದಿನಗಳಲ್ಲಿ ಈ ಹಿಂದಿನ ಎಲ್ಲಾ ಸುದೀಪ್ ಸಿನಿಮಾಗಳ ಕಲೆಕ್ಷನ್ ದಾಖಲೆಗಳನ್ನು 'ಮ್ಯಾಕ್ಸ್' ಮುರಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗಳಿಕೆ ಕಂಡು ಸದ್ದು ಮಾಡುವ ಸುಳಿವು ಸಿಗುತ್ತಿದೆ. 8ನೇ ದಿನ ಕೂಡ ಬಾಕ್ಸಾಫೀಸ್ ಗಳಿಕೆ ಚೆನ್ನಾಗಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಕೂಡ ಜೋರಾಗಿದೆ. 'ಯುಐ' ಸಿನಿಮಾ ಅಬ್ಬರದ ನಡುವೆಯೂ 'ಮ್ಯಾಕ್ಸ್' ಮ್ಯಾಜಿಕ್ ನಡೆದಿದೆ.

Super hit Max movie has increased Actor Kichcha Sudeep s market value

ಗಾಂಧಿನಗರದ ಲೆಕ್ಕಾಚಾರದ ಪ್ರಕಾರ 'ಮ್ಯಾಕ್ಸ್' ಸಿನಿಮಾ ಗ್ರಾಸ್ ಕಲೆಕ್ಷನ್ 35 ಕೋಟಿ ರೂ. ಮೀರಿದೆ. ಅದರಲ್ಲಿ ಅರ್ಧ ಅಂದರೆ 18 ರಿಂದ 20 ಕೋಟಿ ರೂ. ಶೇರ್ ಬಂದಿದೆಯಂತೆ. ಆ ಲೆಕ್ಕದಲ್ಲಿ ವಿತರಕು ಸಹ ಸೇಫ್ ಆಗಿದ್ದಾರೆ. ಇನ್ನು ಮುಂದೆ ಚಿತ್ರ ಗಳಿಸುವುದು ಲಾಭ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಪಕರಾಗಲಿ, ವಿತರಕರಾಗಲಿ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಆದರೆ ಚಿತ್ರದ ಕಲೆಕ್ಷನ್ ಹೇಗಿದೆ ಎನ್ನುವುದು ಕಣ್ಣಮುಂದೆ ಕಾಣುತ್ತಿದೆ.

ಮೊದಲ 3 ದಿನಗಳಲ್ಲಿ 'ಮ್ಯಾಕ್ಸ್' ಚಿತ್ರದ 3000 ಶೋಗಳು ಹೌಸ್‌ಫುಲ್ ಆಗಿ ದಾಖಲೆ ಬರೆದಿತ್ತು. ಈ ವಿಚಾರವನ್ನು ಕೆಆರ್‌ಜಿ ಸಂಸ್ಥೆಯೇ ಘೋಷಿಸಿತ್ತು. ಇನ್ನು ಕ್ರಿಸ್‌ಮಸ್ ರಜೆ, ಡಿಸೆಂಬರ್ 28ರ ಸರ್ಕಾರಿ ರಜೆ ಹಾಗೂ ವೀಕೆಂಡ್ ಚಿತ್ರಕ್ಕೆ ಪ್ರೇಕ್ಷಕರನ್ನು ಸಾಗರದಂತೆ ಸೆಳೆದಿತ್ತು. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಕೊಟ್ಟ ಹಣಕ್ಕೆ ಮೋಸ ಮಾಡದೇ ಮನರಂಜನೆ ಉಣಬಡಿಸಿತ್ತು. 'ಮ್ಯಾಕ್ಸ್' ಆರ್ಭಟ ನೋಡಿದವರೆಲ್ಲಾ ಪೈಸಾ ವಸೂಲ್ ಸಿನಿಮಾ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸುದೀಪ್ ಕರಿಯರ್‌ನಲ್ಲಿ 18 ಕೋಟಿ ರೂ. ಶೇರ್ ಎನ್ನುವುದು ದಾಖಲೆ ಎನ್ನಲಾಗ್ತಿದೆ. ಬರೀ ಕನ್ನಡದಲ್ಲೇ ಸಿನಿಮಾ ಇಷ್ಟು ದೊಡ್ಡದಾಗಿ ಕಲೆಕ್ಷನ್ ಮಾಡಿದೆ. ತೆಲುಗು, ತಮಿಳು ವರ್ಷನ್ ದೊಡ್ಡದಾಗಿ ಚಿತ್ರಕ್ಕೆ ಲಾಭ ತಂದುಕೊಟ್ಟಿಲ್ಲ. ಮೊದಲಿನಿಂದಲೂ ಚಿತ್ರತಂಡ ಪರಭಾಷೆಗಳಲ್ಲಿ ಸಿನಿಮಾ ಪ್ರಚಾರಕ್ಕೆ ಹಿಂದೇಟು ಹಾಕಿತ್ತು. ಆದರೆ ಕನ್ನಡದಲ್ಲಿ 'ಮ್ಯಾಕ್ಸ್' ಮನರಂಜನೆ ತೇರು ಜೋರಾಗಿದೆ ಹೊರಟಿದೆ.

Super hit Max movie has increased Actor Kichcha Sudeep s market value

'ಮ್ಯಾಕ್ಸ್' ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬಗ್ಗೆಯೂ ಚಿತ್ರತಂಡ ಸುಳಿವು ಕೊಟ್ಟಿದೆ. ಆದರೆ ಸದ್ಯಕ್ಕೆ ಸುದೀಪ್ 'ಮಾಕ್ಸ್' ಚಿತ್ರದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಬಳಿಕ 'ಬಿಲ್ಲ ರಂಗ ಬಾಷ' ಚಿತ್ರ ಶುರುವಾಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಚೇರನ್ ನಿರ್ದೇಶನದ ಚಿತ್ರದಲ್ಲಿ ಕೂಡ ಸುದೀಪ್ ನಟಿಸಬೇಕಿದೆ.

ಸೋಲೋ ಹೀರೋ ಆಗಿ ಸುದೀಪ್ ದೊಡ್ಡ ಹಿಟ್ ಕೊಟ್ಟು ಬಹಳ ದಿನಗಳಾಗಿತ್ತು. 'ಮ್ಯಾಕ್ಸ್' ಆ ಬರವನ್ನು ನೀಗಿಸಿದೆ. ಕಿಚ್ಚನ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ಇದೇ ತರಹದ ಚಿತ್ರಕ್ಕಾಗಿ ಕಾಯ್ತಾ ಇದ್ವಿ ಬಾಸ್ ಎಂದು ಜೈಕಾರ ಹಾಕುತ್ತಿದ್ದಾರೆ. ಚಿತ್ರ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಸ್ಕ್ರೀನ್‌ಗಳ ಸಂಸ್ಥೆ ಹೆಚ್ಚಿಸಲಾಗಿದೆ.

ತಮಿಳಿನ ಕಲೈಪುಲಿ ಎಸ್ ತನು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೊದಲ ದಿನ 14ರಿಂದ 15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಬಗ್ಗೆ ನಿರ್ಮಾಪಕರು ಮಾತನಾಡಿದ್ದರು. ಮುಂದಿನ ದಿನಗಳಲ್ಲಿ ಅರ್ಜುನ್ ಮಹಾಕ್ಷಯ್ ಆರ್ಭಟ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Max movie has significantly boosted actor Kichcha Sudeep's market
Read more about: filmibeat original sudeep max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X