For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ 'ಒನ್ ವೇ'ಯಲ್ಲಿ ಬರಲಿರುವ ರಜನಿಕಾಂತ್

  By ಜೀವನರಸಿಕ
  |

  ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಸಿನಿಮಾಗೆ ಬರ್ತಾರಾ ಅನ್ನೋ ಗುಲ್ಲು ಅಪರೂಪಕ್ಕೊಂದು ಸಾರಿ ಕೇಳ್ತಾ ಇರುತ್ತೆ. ಆದರೆ ಈಗ ಹಾಗಲ್ಲ, ರಜನಿ ಬಾರದಿದ್ರೂ ರಜನಿಕಾಂತ್ ಗೆಳೆಯ ರಾಜ್ ಬಹಾದ್ದೂರ್ ಅವರು 'ಕೊಟ್ಲಪ್ಪೋ ಕೈ' ಚಿತ್ರದ ನಿರ್ದೇಶಕ ಋಷಿ ಅವರ ಮುಂದಿನ ಚಿತ್ರ 'ಒನ್ ವೇ'ಯಲ್ಲಿ ನಟಿಸಲಿದ್ದಾರಂತೆ.

  ರಜನಿಕಾಂತ್ ಬೆಂಗಳೂರಿಗೆ ಬಂದ್ರೆ ಮೊದಲು ಹೋಗೋದು ತನ್ನ ಆತ್ಮೀಯ ಗೆಳೆಯ ರಾಜ್ ಬಹದ್ದೂರ್ ಮನೆಗೆ. ಇವರ ಗೆಳೆತನ ಬಾಲ್ಯದಿಂದಲೇ ಶುರುವಾಗಿದ್ದು. ಈಗ ತನ್ನ ಆತ್ಮೀಯ ಗೆಳೆಯ ಕನ್ನಡದಲ್ಲಿ ನಟಿಸ್ತಿರೋ ಸುದ್ದಿ ಕೇಳಿ ರಜನಿ ಒಂದು ಸಾರಿ ಸಿನಿಮಾದ ಪ್ರಚಾರಕ್ಕೆ ಬರಬಹುದು. ರಜನಿ ಬಂದ್ರೆ ಮ್ಯಾಜಿಕ್ಕೇ ನಡೆದು ಹೋಗುತ್ತೆ ಅನ್ನೋ ಯೋಚನೆ ನಿರ್ದೇಶಕ ಋಷಿಯವರದ್ದು.

  ಇನ್ನು ಗೆಳೆಯ, ಗೆಳೆತನ ಅಂದ್ರೆ ತುಂಬಾನೇ ಬೆಲೆಕೊಡೋ ರಜನಿ ತನ್ನ ಗೆಳೆಯ ಹೇಳಿದ್ರೆ ಇಷ್ಟನ್ನೂ ಮಾಡೋದಿಲ್ವಾ. ಇಲ್ಲದಿದ್ರೆ 'ಅಮೃತಧಾರೆ'ಯಲ್ಲಿ ಗೋಲ್ಡನ್ ಗರ್ಲ್ ರಮ್ಯಾರನ್ನು ಅಮಿತಾಭ್ ಅಪ್ಪಿಕೊಂಡ ಹಾಗೆ ರಜನಿ ಒಂದ್ಸಾರಿ ಬಂದು ಅಪ್ಪಿಕೊಂಡ್ರು ಸಾಕು.

  ಏನೇ ಆಗ್ಲಿ ಕನ್ನಡಿಗರ ಆಸೆ ಕೂಡ ಅದೇ ರಜನಿ ಕನ್ನಡಕ್ಕೆ ಮತ್ತೆ ಬರಲಿ ಎಂಬುದು. ಅಪ್ಪಿಕೊಳ್ಳೋ ಸೀನನ್ನಾದ್ರೂ ಒಪ್ಪಿಕೊಳ್ಳಲಿ ಎಂದು ಹಂಬಲಿಸುತ್ತಿದ್ದಾರೆ. ಅಂದಹಾಗೆ ರಜನಿಕಾಂತ್ ಅವರು ಅಭಿನಯಿಸಿದ ಕನ್ನಡ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

  ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಕುಂಕುಮ ರಕ್ಷೆ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ಸವಾಲಿಗೆ ಸವಾಲ್, ತಪ್ಪಿದ ತಾಳ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  Here is some good news for Super Star Rajinikanth fans. After almost thirty plus years Rajini is suppose to act in Kannada film 'One Way', in which his close friend Raj Bahadur playing a supporting role. The movie is being directed by 'Kotlallappo Kai' fame Rishi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X