»   » ಇದೆಲ್ಲಾ ಸ್ಟೈಲ್ ಕಿಂಗ್ 'ರಜನಿ'ಯಿಂದ ಮಾತ್ರ ಸಾಧ್ಯ!

ಇದೆಲ್ಲಾ ಸ್ಟೈಲ್ ಕಿಂಗ್ 'ರಜನಿ'ಯಿಂದ ಮಾತ್ರ ಸಾಧ್ಯ!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಕೈಲಿ ಯಾವುದು ಸಾಧ್ಯವಿಲ್ಲ. ನಥಿಂಗ್ ಈಸ್ ಇಂಪಾಸಿಬಲ್ ಅನ್ನುವ ಮಾತು ರಜನಿಯನ್ನ ನೋಡಿಯೇ ಹೇಳಿದ್ದಂತೆ. ಸೈಕಲ್ ನಲ್ಲಿ ಬುಲ್ಲೆಟ್ ಟ್ರೈನ್ ವೇಗವನ್ನು ಮೀರಿಸುವ 'ಪಡೆಯಪ್ಪ' ಎಲ್ಲಾ ದಾಖಲೆಗಳಿಗೆ ಚಕ್ರವರ್ತಿ!

  ಸೂರ್ಯನಿಗೆ ಕಣ್ಣು ಹೊಡೆಯುವ ರಜನಿಕಾಂತ್ ಬಗ್ಗೆ ಇರುವ ಜೋಕ್ ಗಳು ಒಂದೆರಡಲ್ಲ. 'ಎಂದಿರನ್' ಸಿನಿಮಾ ತೆರೆಗೆ ಬಂದ ಮೇಲಂತೂ ಅಂತರ್ಜಾಲದಲ್ಲಿ ರಜನಿ ಕುರಿತಾದ ಜೋಕುಗಳು ಬಿಸಿಬಿಸಿ ಕಜ್ಜಾಯದ್ದಂತೆ ಸೇಲ್ ಆಗ್ತಿದೆ. [ನೆಟ್ ಸಂಪರ್ಕ ಇಲ್ಲದೆ ರಜನಿ ವೆಬ್ ಸೈಟ್ ನೋಡಿ!]

  ಅಂತಹ ಜೋಕುಗಳಲ್ಲಿ ಈಗಲೂ ಎಲ್ಲರು ಬಿದ್ದುಬಿದ್ದು ನಗುವ ಕೆಲ ನಗೆಚಟಾಕಿಗಳ ಸಂಗ್ರಹ ಇಲ್ಲದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

  ಪಾಸಿಬಲ್ ನಂಬರ್ 1

  ಸೂಪರ್ ಸ್ಟಾರ್ ರಜನಿಕಾಂತ್ ಬಿಗ್ ಬಾಸ್ ಮನೆಗೆ ಹೋದ್ರೆ ಏನಾಗಬಹುದು? ಎಲ್ಲರಿಗೂ ಗೊತ್ತಿರುವ ಹಾಗೆ, ಎಲ್ಲಾ ಸ್ಪರ್ಧಿಗಳನ್ನು ಬಿಗ್ ಬಾಸ್ ಕನ್ ಫೆಶನ್ ರೂಮ್ ಗೆ ಕರೆಯುತ್ತಾರೆ ಅಲ್ವಾ.ಆದ್ರೆ ರಜನಿಕಾಂತ್ ಎಂಟ್ರಿಕೊಟ್ಟಮೇಲೆ, ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುವ ಅಶರೀರ ವಾಣಿ ಹೀಗಿರುತ್ತೆ - ''ಬಿಗ್ ಬಾಸ್ ಕನ್ ಫೆಶನ್ ರೂಮ್ ಗೆ ಬರಬೇಕು ಅಂತ ರಜನಿಕಾಂತ್ ಅಪೇಕ್ಷಿಸುತ್ತಾರೆ'' Tongue out

  ಪಾಸಿಬಲ್ ನಂಬರ್ 2

  ಫೇಸ್ ಬುಕ್ ನಲ್ಲಿ ಎಲ್ಲರೂ ಫ್ರೆಂಡ್ಸ್ ಆಗಬಹುದು. ಆದ್ರೆ ಫೇಸ್ ಬುಕ್ ಅನ್ನೇ ಫ್ರೆಂಡ್ ಆಗಿ ಮಾಡಿಕೊಳ್ಳುವ ಏಕೈಕ ವ್ಯಕ್ತಿ ರಜನಿಕಾಂತ್. Innocent

  ಪಾಸಿಬಲ್ ನಂಬರ್ 3

  ಹಾಲಿವುಡ್ ನ ಸೂಪರ್ ಡ್ಯೂಪರ್ ಹಿಟ್ ಚಿತ್ರ 'Mission:Impossible', ನಲ್ಲಿ ರಜನಿಕಾಂತ್ ನಾಯಕನ ಪಾತ್ರ ನಿರ್ವಹಿಸಬೇಕಾಗಿತ್ತು. ಆದ್ರೆ, ಆ ಅವಕಾಶಕ್ಕೆ ರಜನಿಕಾಂತ್ ಬಿಲ್ ಕುಲ್ ಒಪ್ಪಿಕೊಳ್ಳಲಿಲ್ಲವಂತೆ. ಇದಕ್ಕೆ ಕಾರಣ ಗೊತ್ತಾ? 'Mission:Impossible' ಅನ್ನುವ ಟೈಟಲ್ ರಜನಿ ಜಾಯಮಾನಕ್ಕೆ ವಿರುದ್ಧ! Laughing [ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!]

  ಪಾಸಿಬಲ್ ನಂಬರ್ 4

  ಜಗತ್ತಿನ ಪ್ರಮುಖ ವ್ಯಕ್ತಿಗಳ Wax Statue, Madame Tussaud ಮ್ಯೂಸಿಯಂನಲ್ಲಿದೆ. ಆದ್ರೆ ರಜನಿಕಾಂತ್ ಮನೆಯಲ್ಲಿ Madame Tussaud ಮ್ಯೂಸಿಯಂನ Statue ಇದೆ! Wink

  ಪಾಸಿಬಲ್ ನಂಬರ್ 5

  ರಜನಿಕಾಂತ್ ಅಭಿನಯದ 'ಎಂದಿರನ್' ಸಿನಿಮಾ ನೋಡಿದ್ದೀರಾ ಅಲ್ಲಾ? ಈ ಚಿತ್ರದ ಬಗ್ಗೆ ಯಾರು ಏನು ಹೇಳಿದ್ರೋ ಬಿಟ್ಟಿದ್ರೋ! ಆದ್ರೆ ಸಾಕ್ಷಾತ್ ಆ 'ದೇವರು', 'ಎಂದಿರನ್' ಸಿನಿಮಾ ನೋಡಿ ಉದ್ಗರಿಸಿದ್ದು ಹೀಗೆ-'' ಓ ಮೈ ರಜನಿಕಾಂತ್!!!!''. Money mouth [ರಜನಿಕಾಂತ್ ಬಗ್ಗೆ ನಿಮಗೆ ತಿಳಿಯದ 10 ಸಂಗತಿಗಳು]

  ಪಾಸಿಬಲ್ ನಂಬರ್ 6

  2011 ರ ಕ್ರಿಕೆಟ್ ವರ್ಲ್ಡ್ ಕಪ್ ನ ಭಾರತ ಮುಡಿಗೇರಿಸಿಕೊಂಡಿದ್ದಕ್ಕೆ ಕಾರಣ ಯಾರು? ಬೇರಾರೂ ಅಲ್ಲ, ಒನ್ ಅಂಡ್ ಒನ್ಲಿ ರಜನಿಕಾಂತ್! ಬೇಕಾದ್ರೆ ನೀವೇ ನೋಡಿ....

  virendeR shewag

  sachin tendulkAr

  yuvraJ singh

  gautAm gambir

  yusuf pathaN

  ms dhonI

  virat Kohli

  harbhAjan singh

  zaheer khaN

  s sreesanTh

  r asHwin

  ರಜನಿ ಇದ್ದ ಕಡೆ ಸೋಲಿಗೆ ಜಾಗವಿಲ್ಲ! Cool

  ಪಾಸಿಬಲ್ ನಂಬರ್ 7

  ಒಮ್ಮೆ ರಜನಿಕಾಂತ್ ಸ್ವಿಸರ್ಲೆಂಡ್ ಗೆ ಹೋಗಿದ್ದರಂತೆ. ಆಗ ಅಚಾನಕ್ಕಾಗಿ ರಜನಿಕಾಂತ್ ಪರ್ಸ್ ಕೆಳಗೆ ಬಿದ್ದು ಹೋಯ್ತಂತೆ. ರಜನಿ ಅಂದು ಪರ್ಸ್ ಬೀಳಿಸಿದ್ದ ಜಾಗ ಇಂದು ಏನಾಗಿದೆ ಗೊತ್ತಾ? ''ಸ್ವಿಸ್ ಬ್ಯಾಂಕ್!'' Money mouth

  ಪಾಸಿಬಲ್ ನಂಬರ್ 8

  ರಜನಿಕಾಂತ್ ವ್ಯಾಯಾಮ (Push Up) ಮಾಡುವಾಗ, ದೇಹವನ್ನು ಅವರು ಮೇಲಕ್ಕೆ ಎತ್ತುವುದಿಲ್ಲ. ಬದಲಾಗಿ ಭೂಮಿಯನ್ನೇ ಕೆಳಗೆ ತಳ್ಳುತ್ತಾರೆ..! ದಟ್ ಈಸ್ ರಜನಿಕಾಂತ್..! ಮೈಂಡ್ ಇಟ್. Sealed

  ಪಾಸಿಬಲ್ ನಂಬರ್ 9

  ಜಿರಾಫೆಗಳು ಹುಟ್ಟುವುದಕ್ಕೆ ಕಾರಣ ರಜನಿಕಾಂತ್! ಅದ್ಹೇಗೆ ಅಂದ್ರೆ ಒಮ್ಮೆ ಅಕಸ್ಮಾತ್ ಆಗಿ ರಜನಿ, ಕುದುರೆಯ ಕುತ್ತಿಗೆ ಹೊಡೆದರಂತೆ. ಮಾರನೆ ದಿನ ನೋಡಿದ್ರೆ, ಉದ್ದ ಕುತ್ತಿಗೆಯೊಂದಿಗೆ ಜಿರಾಫೆಗಳು ಜನ್ಮತಾಳಿದ್ದವು! Kiss

  ಪಾಸಿಬಲ್ ನಂಬರ್ 10

  ಯಾವುದೇ ಫೋಟೋ ನೋಡಿ, ಇಲ್ಲಾ ರಜನಿಕಾಂತ್ ಭಾಗವಹಿಸುವ ಕಾರ್ಯಕ್ರಮಗಳನ್ನು ನೋಡಿ, ಎಲ್ಲೇ ಹೋದರೂ ತಮ್ಮ ಕೈಗೆ ರಜನಿಕಾಂತ್ ವಾಚ್ ಕಟ್ಟುವುದಿಲ್ಲ. ಯಾಕಂದ್ರೆ ಸಮಯವನ್ನು ನಿರ್ಧರಿಸುವುದೇ ತಲೈವಾ! Laughing

  ಪಾಸಿಬಲ್ ನಂಬರ್ 11

  ರಜನಿಕಾಂತ್ ಈಮೇಲ್ ಐಡಿ - gmail@rajinikanth.com [ಸೂಪರ್ ಸ್ಟಾರ್ ರಜನಿಕಾಂತ್ ಇ-ಮೇಲ್ ಲಭ್ಯ] Cool

  ಪಾಸಿಬಲ್ ನಂಬರ್ 12

  ಡಿಸೆಂಬರ್ 21 ಕ್ಕೆ ಪ್ರಳಯ ಯಾಕೆ ಆಗ್ಲಿಲ್ಲ ಅಂದ್ರೆ, ರಜನಿಕಾಂತ್ 100 ವರ್ಷ ವಾರೆಂಟಿ ಇರುವ ಲ್ಯಾಪ್ ಟಾಪ್ ಖರೀದಿಸಿದ್ದಾರೆ! Surprised

  English summary
  Super Star Rajinikanth celebrates his 64th Birthday today ( December 12th ). Here is the collection of Top Jokes about Rajinikanth.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more