»   » ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!

ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!

Posted By:
Subscribe to Filmibeat Kannada

ಸಿನಿಮಾ ರಂಗವನ್ನು ನೆಚ್ಚಿಕೊಂಡು, ಬೆಂಗಳೂರಿನ ಸಾಮಾನ್ಯ ಬಿ.ಟಿ.ಎಸ್ ಬಸ್ ಕಂಡಕ್ಟರ್ ಒಬ್ಬ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿದ್ದ. ಸಿಕ್ಕ ಪಾತ್ರಗಳನ್ನ ತನ್ನದೇ ಆದ ಮ್ಯಾನರಿಸಂ ನಲ್ಲಿ ಸ್ಟೈಲಿಶ್ ಆಗಿ ಮಾಡುತ್ತಿದ್ದ ಆತ ನೋಡನೋಡುತ್ತಲೇ 'ಸೂಪರ್ ಸ್ಟಾರ್' ಪಟ್ಟಕ್ಕೇರಿದ.

ಇವತ್ತು ಆ ಸೂಪರ್ ಸ್ಟಾರ್ ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ, ಇಡೀ ಪ್ರಪಂಚ 'ಭಾರತ' ಅಂದ್ರೆ 'ಸೂಪರ್ ಸ್ಟಾರ್' ನ ನೆನಪಿಸಿಕೊಳ್ಳುತ್ತೆ. ಇಷ್ಟೆಲ್ಲಾ ಮ್ಯಾಜಿಕ್ ಮಾಡಿದ ಮಹಾನುಭಾವ ರಜನಿಕಾಂತ್. ಮ್ಯಾಜಿಕ್ ಅನ್ನುವ ಪದಕ್ಕೆ ಅನ್ವರ್ಥ. [ಸ್ಟೈಲ್ ಕಿಂಗ್ ರಜನಿಕಾಂತ್ ಅಪೂರ್ವ ಫೋಟೋಗಳು]

ವಿಶ್ವದಾದ್ಯಂತ ಅತಿಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ರಜನಿಕಾಂತ್ ಗಿಂದು 64ನೇ ಹುಟ್ಟುಹಬ್ಬದ ಸಂಭ್ರಮ. 1950 ರಲ್ಲಿ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಜನಿಸಿದ 'ಶಿವಾಜಿ ರಾವ್ ಗಾಯಕ್ವಾಡ್', ಕಡುಬಡತನದಿಂದ ಹಿಡಿದು ಇಡೀ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗುವವರೆಗೂ, ತಮ್ಮ ಜೀವನಚಕ್ರವನ್ನು ಯಶಸ್ವಿಯಾಗಿ ಸಾಗಿಸಿದ್ದಾರೆ. [ರನ್ನಿಂಗ್ ರೇಸಲ್ಲಿ ರಜನಿ ಫಸ್ಟ್!]

ರಜನಿ 64ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಜೀವನದ ಕೆಲ ಅಚ್ಚರಿಯ ಸಂಗತಿಗಳ ಸಂಪೂರ್ಣ ವಿವರ ಇಲ್ಲಿದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಚಿಕ್ಕಂದಿನಿಂದಲೇ ಶುರುವಾಗಿತ್ತು ಅನುಕರಣೆ!

ಓದಿನಲ್ಲಿ ಅಷ್ಟು ಬುದ್ಧಿವಂತನಲ್ಲದೇ ಇದ್ದರೂ ಇತರರನ್ನು ರಜನಿ ಚೆನ್ನಾಗಿ ಅನುಕರಣೆ ಮಾಡುತ್ತಿದ್ದರಂತೆ. ಸ್ಕೂಲ್ ನಲ್ಲಿ ಟೀಚರ್ ಕ್ಲಾಸ್ ಗೆ ಲೇಟ್ ಆಗಿ ಬಂದ ಸಂದರ್ಭದಲ್ಲಿ ಥೇಟ್ ಟೀಚರ್ ನಂತೆ ಕೈಲಿ ಚಾಕ್ ಫೀಸ್ ಹಿಡಿದು ಪಾಠ ಮಾಡುತ್ತಿದ್ದರಂತೆ ಬಾಲಕ ಶಿವಾಜಿ! ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವುದು ಇದಕ್ಕೆ ಅಲ್ಲವೇ.

5 ರೂಪಾಯಿ ಖರ್ಚು ಮಾಡುವುದು ಗೊತ್ತಿರಲಿಲ್ಲ!

ಬೆಂಗಳೂರಿನ ಗವಿಪುರಂ ಶಾಲೆಯಲ್ಲಿ ಓದುತ್ತಿರುವಾಗ ರಜನಿ ನಾಟಕವೊಂದರಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದರು. ಶಿವಾಜಿಯ 'ಭೀಮ' ರೂಪ ನೋಡಿ ಮೆಚ್ಚಿದ್ದ ಅಂದಿನ ಇನ್ಸ್ ಪೆಕ್ಟರ್ ಒಬ್ಬರು 5 ರೂಪಾಯಿ ಬಹುಮಾನ ನೀಡಿದ್ದರು. ಅದನ್ನ ಹೇಗೆ ಖರ್ಚು ಮಾಡುವುದು ಅಂತ ಗೊತ್ತಿಲ್ಲದೇ, ಮುಗ್ಧ ಶಿವಾಜಿ, ತಮ್ಮ ಟೀಚರ್ ಹತ್ತರ ಬಂದು ಕೇಳಿದ್ರಂತೆ. ಆಗ, ಆ ದುಡ್ಡಿನಲ್ಲಿ ಟೀಚರ್ ಪುಸ್ತಕವನ್ನು ಕೊಡಿಸಿದ್ರಂತೆ.

ಪ್ರಸಾದಕ್ಕಾಗಿ ಕ್ಯೂ ನಿಲ್ಲುತ್ತಿದ್ದ ರಜನಿ!

ಶಿವಾಜಿ, ಚಿಕ್ಕವಯಸ್ಸಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ತುತ್ತು ಅನ್ನಕ್ಕೂ ಮನೆಯಲ್ಲಿ ಬಡತನ ಇತ್ತು. ಆಗ ಶಿವಾಜಿಗೆ ಆಸರೆಯಾಗಿದ್ದೇ ಗವಿಗಂಗಾಧರೇಶ್ವರ ದೇವಸ್ಥಾನ. ಹಬ್ಬದ ದಿನ ಪೂಜೆ-ಪುನಸ್ಕಾರಗಳೆಲ್ಲಾ ನಡೆದಾಗ ಎಲ್ಲೇ ಇದ್ದರೂ ದೇವಸ್ಥಾನದ ಪ್ರಸಾದಕ್ಕೋಸ್ಕರ ರಜನಿ ಹಾಜರಾಗುತ್ತಿದ್ದರಂತೆ. [ಸೂಪರ್ ಸ್ಟಾರ್ ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!]

ರಜನಿ ಕ್ವಾಲಿಫಿಕೇಷನ್ - ಎಸ್.ಎಸ್.ಎಲ್.ಸಿ. ಪಾಸ್!

ಹಣಕಾಸಿನ ಸಮಸ್ಯೆಯಿದ್ದ ಕಾರಣ ಶಿವಾಜಿಗೆ ಎಸ್.ಎಸ್.ಎಲ್.ಸಿ ವರೆಗೆ ಓದೋಕಷ್ಟೇ ಸಾಧ್ಯವಾಗಿದ್ದು. ತದ ನಂತ್ರ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಶುರುಮಾಡಿದ ಶಿವಾಜಿಗೆ ಬಿ.ಟಿ.ಎಸ್ ಸಾರಿಗೆ ಸಂಸ್ಥೆಯಲ್ಲಿ ಟಿಕೆಟ್ ಹರಿಯುವ ನೌಕರಿ ಸಿಕ್ಕಿತು.

ಒಂದ್ಕಾಲದಲ್ಲಿ ರಜನಿಗೆ ಚಾನ್ಸ್ ಕೊಡದ ನಿರ್ಮಾಪಕರು!

ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಕಲಿತ ನಂತರ ಸಿನಿಮಾ ಅವಕಾಶ ಸಲೀಸಾಗಿ ಸಿಗಲಿದೆ ಅಂತ ನಂಬಿದ ಶಿವಾಜಿಗೆ, ಕೆಲ ದಿನಗಳಲ್ಲೇ ತಮ್ಮ ಆಸೆಗೆ ಅನೇಕ ನಿರ್ಮಾಪಕರು ತಣ್ಣೀರು ಎರಚಿದ್ದರು. ನೋಡೋಕೆ ಕಪ್ಪಗಿದ್ದ ಕಾರಣ, ಶಿವಾಜಿಗೆ ಒಂದು ಚಾನ್ಸ್ ಕೊಡುವುದಕ್ಕೆ ಒಬ್ಬ ನಿರ್ಮಾಪಕ ಕೂಡ ಮುಂದೆ ಬರ್ಲಿಲ್ಲ. ಈಗ ಅದೇ ರಜನಿಯ ಕಾಲ್ ಶೀಟ್ ಗೆ ಪ್ರೊಡ್ಯೂಸರ್ ಗಳು ಕ್ಯೂ ನಿಲ್ಲುತ್ತಾರೆ.

ರಜನಿಗೆ ಲವ್ @ ಫಸ್ಟ್ ಸೈಟ್..!

ಅದು 1981ನೇ ಇಸವಿ, ಅವತ್ತಿಗಾಗಲೇ ಸೂಪರ್ ಸ್ಟಾರ್ ಆಗಿದ್ದ ರಜನಿಯನ್ನ ಸಂದರ್ಶನ ಮಾಡುವುದಕ್ಕೆ ಲತಾ ಅನ್ನುವ ಪತ್ರಕರ್ತೆ ಬಂದಿದ್ದರು. ಸಂದರ್ಶನ ಸಮಯದಲ್ಲಿ ''ನಿಮಗೆ ಯಾವ ತರಹದ ಹುಡುಗಿ ಇಷ್ಟ?'' ಅಂತ ಲತಾ ರಜನಿಗೆ ಪ್ರಶ್ನೆ ಕೇಳಿದ್ದರು. ಆಗ ರಜನಿ ಕೊಟ್ಟ ಉತ್ತರಕ್ಕೆ ಲತಾ ಮನಸ್ಸು ಪ್ರೇಮಗೀತೆ ಹಾಡುವುದಕ್ಕೆ ಶುರುಮಾಡಿತು. ಅಷ್ಟಕ್ಕೂ ರಜನಿ ಕೊಟ್ಟ ಉತ್ತರ ಹೀಗಿತ್ತು-''ನಿಮ್ಮ ತರಹದ ಹುಡುಗಿ ನಂಗಿಷ್ಟ!''. ಇಲ್ಲಿಂದಲೇ ಇಬ್ಬರ ಪ್ರೇಮ್ ಕಹಾನಿ ಶುರುವಾಗಿದ್ದು.

ಹುಟ್ಟುಹಬ್ಬದ ದಿನ ರಜನಿ ಚೆನ್ನೈನಲ್ಲಿರಲ್ಲ!

22 ವರ್ಷಗಳ ಹಿಂದೆ ರಜನಿಕಾಂತ್ ಹುಟ್ಟುಹಬ್ಬದ ಅದ್ಧೂರಿ ಸೆಲೆಬ್ರೇಷನ್ ನಲ್ಲಿ ಮೂವರು ಅಭಿಮಾನಿಗಳು ಸಾವನ್ನಪ್ಪಿದರು. ಅಂದಿನಿಂದ ರಜನಿ, ಚೆನ್ನೈನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಬೇರೆಕಡೆ ತಮ್ಮ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ ಸೂಪರ್ ಸ್ಟಾರ್.

ಎಲ್ಲಾ ಟೆಕ್ನಾಲಜಿಗೂ ರಜನಿ 'ದಳಪತಿ'.

ಬ್ಲಾಕ್ ಅಂಡ್ ವೈಟ್, ಕಲರ್, ಆನಿಮೇಷನ್, 3D ಮತ್ತು ಇತ್ತೀಚಿನ ಮೋಷನ್ ಕ್ಯಾಪ್ಚರ್ ಟೆಕ್ನಾಲಜಿಯ ಮೂಲಕ ತೆರೆಮೇಲೆ ಮಿಂಚಿರುವ ಭಾರತದ ಏಕೈಕ ಸ್ಟಾರ್ ಅಂದ್ರೆ ಅದು ರಜನಿಕಾಂತ್ ಮಾತ್ರ. [20 ಲಕ್ಷ + ಮಂದಿ ಮನಗೆದ್ದ ರಜನಿ ಟೀಸರ್ ]

ರಜನಿ ಸಿನಿಮಾ, IIM ವಿದ್ಯಾರ್ಥಿಗಳಿಗೆ ಪಾಠ!

IIM-A Post Graduate Elective Course ನ Contemporary Film Industry: A Business Perspective ಪೇಪರ್ ನ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ, ರಜನಿಕಾಂತ್ ಅಭಿನಯದ 'ಎಂದಿರನ್' ಸಿನಿಮಾದ ಬಗ್ಗೆ ಪಠನ ಮಾಡಲೇಬೇಕು.

ಮಾತೃಭಾಷೆಯಲ್ಲಿ ನಟಿಸದ ರಜನಿಕಾಂತ್

ರಜನಿಕಾಂತ್ ಕರ್ನಾಟಕದಲ್ಲಿ ಹುಟ್ಟಿದ್ದರೂ, ಅವರ ಮೂಲ ಮಹಾರಾಷ್ಟ್ರ. ಇಲ್ಲಿಯವರೆಗೂ ಕನ್ನಡ, ತೆಲುಗು, ತಮಿಳು, ಬೆಂಗಾಲಿ, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ರಜನಿ, ತಮ್ಮ ಮಾತೃಭಾಷೆ ಮರಾಠಿಯಲ್ಲಿ ನಟಿಸಿಲ್ಲ!

ಸಿನಿಮಾಗಳಲ್ಲಿ ರಜನಿ ಸಾಯೋದಿಲ್ಲ!

ಎಲ್ಲಾ ಹೀರೋಗಳು ಒಂದಲ್ಲಾ ಒಂದು ಸಿನಿಮಾದಲ್ಲಿ ದುರಂತ ನಾಯಕರಾಗಿರುತ್ತಾರೆ. ಆದ್ರೆ ರಜನಿ ಮಾತ್ರ ಈಗಲೂ ಎವರ್ ಗ್ರೀನ್ ಹೀರೋ. ಸೂಪರ್ ಮ್ಯಾನ್ ರೇಂಜಲ್ಲಿ ರಜನಿ ಮಿಂಚಿದ್ರೆ ಮಾತ್ರ ಅಭಿಮಾನಿಗಳಿಗೆ ಸಂತಸ. ಇಲ್ಲಾಂದ್ರೆ ನಾಡಿನಾದ್ಯಂತ ಅಲ್ಲೋಲ ಕಲ್ಲೋಲ ಗ್ಯಾರೆಂಟಿ. ಇದೇ ಕಾರಣಕ್ಕೆ ಯಾವುದೇ ನಿರ್ದೇಶಕರು ರಜನಿಯನ್ನ ತೆರೆಮೇಲೆ ಇಲ್ಲಿಯವರೆಗೂ ಸಾಯಿಸುವ ಸಾಹಸಕ್ಕೆ ಕೈಹಾಕಿಲ್ಲ.

ಪ್ರತಿದಿನ ಯೋಗ ಮಾಡ್ತಾರೆ ರಜನಿ

64ನೇ ವಯಸ್ಸಲ್ಲೂ ರಜನಿ ಇಷ್ಟು ಗಟ್ಟಿಮುಟ್ಟಾಗಿದ್ದಾರೆಂದರೆ ಅದಕ್ಕೆ ಕಾರಣ, ಪ್ರತಿದಿನ ಬಿಡದೆ ಮಾಡುವ ಯೋಗ. ನಿತ್ಯ 5 ಗಂಟೆಗೆ ಏಳುವ ರಜನಿ, ಯೋಗ ಮಾಡಿ ಒಂದು ಗಂಟೆ ವಾಕಿಂಗ್ ಮಾಡಿದ ನಂತ್ರ ಇತರೆ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ.

ಕಡಲೆಕಾಯಿ ಅಂದ್ರೆ ಪಂಚಪ್ರಾಣ

ರಜನಿಕಾಂತ್ ಗೆ 'ಬಡವರ ಬಾದಾಮಿ' ಕಡಲೆಕಾಯಿ ಅಂದ್ರೆ ಪಂಚಪ್ರಾಣ. ಕಡಲೆಕಾಯಿ ಎಲ್ಲೇ ಕಂಡರೂ, ಕೊಂಡು ತಿನ್ನುತಾರೆ ಸ್ಟೈಲ್ ಕಿಂಗ್. ಬೆಂಗಳೂರಿಗೆ ಬಂದಾಗೆಲ್ಲಾ ರಜನಿ ಮಾಡುವ ಮೊದಲ ಕೆಲಸ, ಮಾರುವೇಷದಲ್ಲಿ ತಮ್ಮ ಮನೆಯ ಹತ್ತಿರ ಸಿಗುವ ಕಡಲೆಕಾಯಿಯನ್ನ ಖರೀದಿಸಿ, ಅಲ್ಲೇ ಇರುವ ಅಶ್ವತ್ಥ ಕಟ್ಟೆಯಲ್ಲಿ ಕುಳಿತು ಸವಿಯುತ್ತಾರಂತೆ.

64ನೇ ಹುಟ್ಟುಹಬ್ಬಕ್ಕೆ 'ಲಿಂಗಾ' ದರ್ಶನ

ನಾಲ್ಕು ದಶಕಗಳ ಚಿತ್ರಜೀವನದಲ್ಲಿ ತಮ್ಮ ಅಭಿಮಾನಿಗಳಿಗೆ ರಜನಿ ಕೊಡುತ್ತಿರುವ ದೊಡ್ಡ ಉಡುಗೊರೆ ಅಂದ್ರೆ ಇದೆ. ರಜನಿ ಹುಟ್ಟುಹಬ್ಬದಂದು ಅವರ ಯಾವುದೇ ಸಿನಿಮಾ ಇಲ್ಲಿತನಕ ರಿಲೀಸ್ ಆಗಿಲ್ಲ. ಅಂತ ನೂತನ ವಿಶೇಷತೆಗೆ ಸಾಕ್ಷಿಯಾಗಿದೆ ಇಂದು ರಿಲೀಸ್ ಆಗಿರುವ'ಲಿಂಗಾ'. ['ಲಿಂಗಾ' ಚಿತ್ರದ ಕೆಲ ಕಣ್ಣರಳಿಸುವ ಸಂಗತಿಗಳು]

English summary
Super Star Rajinikanth celebrates his 64th Birthday today ( December 12th ). Here is the detailed report of few interesting facts about Rajini's life. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada