»   » ರಜನಿ ಜೊತೆ ದೀಪಿಕಾ ರೋಮಾನ್ಸ್ ಕನಸು ಭಗ್ನ

ರಜನಿ ಜೊತೆ ದೀಪಿಕಾ ರೋಮಾನ್ಸ್ ಕನಸು ಭಗ್ನ

Posted By:
Subscribe to Filmibeat Kannada

ರಜನಿಕಾಂತ್ ಜೊತೆ ರೊಮಾನ್ಸ್ ಮಾಡುವ ಕನಸು ಕಂಡಿದ್ದ ದೀಪಿಕಾ ಪಡುಕೋಣೆಯ ಕನಸು ಭಗ್ನವಾಗಿದೆ. ಕೊಚಡಯ್ಯಾನ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಆ ಚಿತ್ರದ ನಾಯಕಿಯಾಗಿರುವ ದೀಪಿಕಾ ಪಡುಕೋಣೆ ರಜನಿಕಾಂತ್ ಜೊತೆ ಹಾಡು ಹಾಗೂ ರೊಮಾನ್ಸ್ ಆಯಾಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ, ನಾಯಕರಾದ ರಜನಿಕಾಂತ್.

ರಜಿನಿ ಒಪ್ಪದಿರಲು ಕಾರಣವೇನು ಗೊತ್ತೇ? ಅವರಿಗೆ ವಯಸ್ಸಾಗಿದ್ದು ಅಥವಾ ದೀಪಿಕಾಗೆ ಅಷ್ಟೊಂದು ವಯಸ್ಸಾಗದಿರುವುದು. ಕೊಚಡಯ್ಯಾನ್ ಚಿತ್ರದ ನಿರ್ದೇಶಕಿ ಹಾಗೂ ಮಗಳು ಸೌಂದರ್ಯ ಅವರಿಗೆ ಸ್ವತಃ ರಜನಿ, ದೀಪಿಕಾ ಜೊತೆ ಇರಬಹುದಾದ ರೊಮಾನ್ಸ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದರಂತೆ. ವಿಷಯ ತಿಳಿದ ದೀಪಿಕಾ, ರಜಿನಿಯವರಿಗೆ ಕನ್ವಿನ್ಸ್ ಮಾಡಿದರೂ ಅವರು ಒಪ್ಪಲಿಲ್ಲವಂತೆ.

ರಜನಿಯವರಿಗೆ ವಯಸ್ಸಾಗಿದ್ದು ಒಂದು ಕಾರಣವಾದರೆ ಅವರಿಗೆ ಇತ್ತೀಚಿಗೆ ಕಾಡಿದ್ದ ಅನಾರೋಗ್ಯದಿಂದ ಅವರು ಬಹಳಷ್ಟು ಬಳಲಿದ್ದು ಇನ್ನೊಂದು ಕಾರಣ. ದೀಪಿಕಾ ಹಾಗೂ ರಜನಿ ಸ್ಕ್ರೀನ್ ಕೆಮೆಸ್ಟ್ರಿ ಬಳಸಿಕೊಂಡು ತೆರೆಯ ಮೇಲೆ ಸಖತ್ ಡಾನ್ಸ್ ನೀಡುಲು ಉದ್ದೇಶಿಸಿದ್ದ ಕೋರಿಯೋಗ್ರಾಫರ್ ಸರೋಜ್ ಖಾನ್ ಕೂಡ ರಜನಿ ಮಾತು ಕೇಳಿ ಸುಮ್ಮಾನಾಗಿದ್ದಾರೆ. ಒಟ್ಟಿನಲ್ಲಿ ಅವರಿಬ್ಬರ ಹಾಟ್ ದೃಶ್ಯಕ್ಕಾಗಿ ಕಾದು ಕುಳಿತಿದ್ದ ಅವರ ಅಭಿಮಾನಿಗಳಿಗೆ ನಿರಾಸೆ ಕಾದಿದೆ. (ಒನ್ ಇಂಡಿಯಾ ಕನ್ನಡ)

English summary
Super Star Rajinikanth has become acutely conscious of his age and the age-difference with his leading lady Deepika, after the bout of illness last year. The superstar has reportedly asked his director Soundarya, who is also his daughter, to modify and change the love scenes. But But Deepika insisted on letting them be.
Please Wait while comments are loading...