ವಿಮಾನದಲ್ಲಿ ರಜನಿಕಾಂತ್ ಅಳಿಯನ ಹಣ, ಪಾಸ್ ಪೋರ್ಟ್ ಕಳ್ಳತನ: ಮುಂದೇನಾಯ್ತು?

ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಅಳಿಯ ಅಂದ್ರೆ ಸೌಂದರ್ಯ ರಜನಿಕಾಂತ್ ಎರಡನೆ ಪತಿಯ ಹಣ ಮತ್ತು ಪಾಸ್ ಪೋರ್ಟ್ ಲಂಡನ್ ನಲ್ಲಿ ಕಳ್ಳತನವಾಗಿದೆ. ಚೆನ್ನೈನಿಂದ ಲಂಡನ್ ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಲೈವ ಎರಡನೆ ಮಗಳು ಸೌಂದರ್ಯ ರಜನಿಕಾಂತ್ ಇತ್ತೀಚಿಗಷ್ಟೆ ಎರಡನೆ ಮದುವೆ ಆಗಿದ್ದರು.

ವಿಶಾಗನ್ ಮತ್ತು ಸೌಂದರ್ಯ ದಂಪತಿ ಲಂಡನ್ ಟ್ರಿಪ್ ಹೋಗಲು ಪ್ಲಾನ್ ಮಾಡಿದ್ದರು. ಅಲ್ಲದೆ ಚೆನ್ನೈ ಟು ಲಂಡನ್ ಏರ್ ಟಿಕೆಟ್ ಕೂಡ ಬುಕ್ ಮಾಡಿದ್ದರು. ಟ್ರಿಪ್ ನ ಪ್ಲಾನ್ ಅಂತೆ ಚೆನ್ನೈನಿಂದ ಲಂಡನ್ ಗೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದ ರಜನಿಕಾಂತ್ ಮಗಳು ಮತ್ತು ಅಳಿಯ ಲಂಡನ್ ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫ್ಲೈಟ್ ನಲ್ಲಿ ಬ್ರೀಫ್ಕೇಸ್ ಕಳವು

ಫ್ಲೈಟ್ ನಲ್ಲಿ ಬ್ರೀಫ್ಕೇಸ್ ಕಳವು

ಇಬ್ಬರು ಪ್ರಯಾಣ ಮಾಡಿದ್ದ ಫ್ಲೈಟ್ ನಲ್ಲಿ ವಿಶಾಗನ್ ಬ್ರೀಫ್ಕೇಸ್ ಮತ್ತು ಪಾಸ್ ಪೋರ್ಟ್ ಅನ್ನು ಕಳ್ಳರು ದೋಚಿದ್ದಾರೆ. ಬ್ರೀಫ್ಕೇಸ್ ನಲ್ಲಿದ್ದ ದೊಡ್ಡ ಮೊತ್ತದ ಡಾಲರ್ ಮತ್ತು ಎಲ್ಲಾ ವಸ್ತುಗಳು ಕಳುವಾಗಿದೆ. ಲಂಡನ್ ನಲ್ಲಿ ಲ್ಯಾಂಡ್ ಆಗಿ ಫ್ಲೈಟ್ ಯಿಂದ ಹೊರಬಂದ ನಂತರ ಚೆಕ್ ಮಾಡಿಕೊಂಡಾಗ ಬ್ರೀಫ್ಕೇಸ್ ಕಳುವಾಗಿರುವುದು ಗೊತ್ತಾಗಿ ಶಾಕ್ ಆಗಿದ್ದಾರೆ.

ಏರ್ ಪೋರ್ಟ್ ಅಧಿಕಾರಿಗಳಿಗೆ ದೂರು

ಏರ್ ಪೋರ್ಟ್ ಅಧಿಕಾರಿಗಳಿಗೆ ದೂರು

ವಿಶಾಗನ್ ಮತ್ತು ಸೌಂದರ್ಯ ಲಂಡನ್ ನಲ್ಲಿ ಲ್ಯಾಂಡ್ ಆಗಿ ಹಣ ಕಳ್ಳತನ ಆಗಿರುವುದು ಗೊತ್ತಾಗುತ್ತಿದ್ದಂತೆ ತಕ್ಷಣ ಏರ್ ಪೋರ್ಟ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಶಾಗನ್ ದಂಪತಿ ನೀಡಿರುವ ದೂರನ್ನು ಸ್ವೀಕರಿಸಿ ಇಬ್ಬರಿಗೂ ಏರ್ ಪೋರ್ಟ್ ನಲ್ಲಿಯೆ ಉಳಿದುಕೊಳ್ಳುವ ವ್ಯವಸ್ತೆ ಮಾಡಿಕೊಟ್ಟಿದ್ದಾರೆ ಅಧಿಕಾರಿಗಳು.

ರಜನಿಕಾಂತ್ ಅಳಿಯ ಎನ್ನುವುದು ಗೊತ್ತಾಗಿದೆ

ರಜನಿಕಾಂತ್ ಅಳಿಯ ಎನ್ನುವುದು ಗೊತ್ತಾಗಿದೆ

ನಂತರ ಏರ್ ಪೋರ್ಟ್ ಅಧಿಕಾರಿಗಳು ಈ ವಿಚಾರವನ್ನು ಭಾರತೀಯ ರಾಯಬಾರಿ ಕಚೇರಿಗೆ ತಿಳಿಸಿದ್ದಾರೆ. ವಿಚಾರ ತಿಳಿಸುತ್ತಿದ್ದಂತೆ ರಜನಿಕಾಂತ್ ಅಳಿಯ ಮತ್ತು ಮಗಳು ಎನ್ನುವ ವಿಚಾರ ಗೊತ್ತಾಗಿದೆ. ಆ ನಂತರ ಇಬ್ಬರಿಗೂ ನಕಲಿ ಪಾಸ್ ಪೋರ್ಟ್ ನೀಡಲಾಗಿದೆ. ಅಲ್ಲದೆ ಬ್ರೀಫ್ಕೇಸ್, ಹಣ ಮತ್ತು ಪಾಸ್ ಪೋರ್ಟ್ ಕದ್ದ ವ್ಯಕ್ತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಸೌಂದರ್ಯ ಎರಡನೆ ಮದುವೆ

ಫೆಬ್ರವರಿಯಲ್ಲಿ ಸೌಂದರ್ಯ ಎರಡನೆ ಮದುವೆ

ಸೌಂದರ್ಯ ರಜನಿಕಾಂತ್ ಮೊದಲು ಅಂದ್ರೆ 2010ರಲ್ಲಿ ಅಶ್ವಿನ್ ರಾಮ್ ಕುಮಾರ್ ಮದುವೆ ಆಗಿದ್ದರು. ಅಶ್ವಿನ್ ರಾಮ್ ಜೊತೆಗಿನ 7 ವರ್ಷದ ದಾಪಂತ್ಯ ಜೀವನ ಮುರಿದುಕೊಂಡು ಈ ವರ್ಷ ಫೆಬ್ರವರಿಯಲ್ಲಿ ವಿಶಾಗನ್ ಜೊತೆ ಹಸೆಮಣೆ ಏರಿದ್ದಾರೆ. ಸೌಂದರ್ಯ ರಜನಿಕಾಂತ್ ಮತ್ತು ಅಶ್ವಿನ್ ರಾಮ್ ಕುಮಾರ್ ಗೆ ಒಬ್ಬ ಮಗ ಕೂಡ ಇದ್ದಾರೆ.

More from Filmibeat

English summary
Super star Rajinikanth son in law Vishagan Vanangamudi loses Passport and Money in flight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X