'ದರ್ಬಾರ್' ಮುಗಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ 'ದರ್ಬಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ರಜನಿಕಾಂತ್ ಸಿನಿಮಾ ಮಾಡುವುದು ಅನುಮಾನ ಎಂದು ಹೇಳಲಾಗಿತ್ತು. ಆದ್ರೆ ದರ್ಬಾರ್ ಶುರು ಮಾಡುವ ಮೂಲಕ ಸಿನಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದರು.

ಆದ್ರೀಗ ಚಿತ್ರತಂಡದ ಕಡೆಯಿಂದ ಬಂದ ಸುದ್ದಿ ಅಂದ್ರೆ ತಲೈವಾ ದರ್ಬಾರ್ ಮುಗಿಸಿದ್ದಾರಂತೆ. ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದ ರಜನಿಕಾಂತ್ ಭಾಗದ ಚಿತ್ರೀಕರಣ ಇಂದಿಗೆ ಮುಕ್ತಾಯವಾಗಿದೆ. ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ.

ಸದ್ಯ ದರ್ಬಾರ್ ಮುಗಿಸಿರುವ ಸೂಪರ್ ಸ್ಟಾರ್ ಮುಂದಿನ ಸಿನಿಮಾದ ತಯಾರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ದರ್ಬಾರ್ ಚಿತ್ರದ ಮೇಲೆ ಅಭಿಮಾನಿಗಳು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Super Star Rajinikanth Wraps Up Darbar Shooting

ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಸೂಪರ್ ಸ್ಟಾರ್ ಖಾಕಿ ಧರಿಸಿ ಖದರ್ ತೋರಿಸಲು ಸಜ್ಜಾಗಿದ್ದಾರೆ. ರಜನಿಕಾಂತ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನು ಸೂಪರ್ ಸ್ಟಾರ್ ವಿರುದ್ಧ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಬ್ಬರಿಸಿದ್ದಾರೆ.

ಸದ್ಯ ದರ್ಬಾರ್ ಚಿತ್ರೀಕರಣ ಮುಗಿಸಿರುವ ತಲೈವಾ ಮುಂದಿನ ಸಿನಿಮಾದ ಬಗ್ಗೆಯು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ನಿರ್ದೇಶಕ ಸಿರುತೈ ಶಿವ ಜೊತೆ ಸೂಪರ್ ಸ್ಟಾರ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

More from Filmibeat

English summary
Super star Rajinikanth wraps up Darbar Shooting. This movie is directed by AR Murugadoss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X