For Quick Alerts
  ALLOW NOTIFICATIONS  
  For Daily Alerts

  ಜೆಕೆ 'ಸೂಪರ್ ಸ್ಟಾರ್' ಆದ್ರು: ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ರು.!

  By Bharath Kumar
  |

  ಕನ್ನಡ ಚಿತ್ರರಂಗಕ್ಕೆ ಒಬ್ಬರೇ 'ಸೂಪರ್ ಸ್ಟಾರ್', ಒಬ್ಬರೇ 'ರಿಯಲ್ ಸ್ಟಾರ್' ಅದು ನಮ್ಮ ಉಪೇಂದ್ರ ಎನ್ನುವುದು ಉಪ್ಪಿ ಅಭಿಮಾನಿಗಳ ಘೋಷವಾಕ್ಯ. ಆದ್ರೆ, ಪದೇ ಪದೇ ಈ ಟೈಟಲ್ ಗಳನ್ನ ಮತ್ತೊಬ್ಬ ನಟರು ಬಳಸಿಕೊಳ್ಳುತ್ತಿರುವುದು ಸಹಜವಾಗಿ ಉಪ್ಪಿ ಫ್ಯಾನ್ಸ್ ಗೆ ಕೋಪ ತರಿಸಿದೆ.

  'ಮಾಸ್ತಿಗುಡಿ' ಚಿತ್ರದ ವೇಳೆ ದುನಿಯಾ ವಿಜಯ್ ಅವರಿಗೆ ಟೈಟಲ್ ಕಾರ್ಡ್ ನಲ್ಲಿ 'ಸೂಪರ್ ಸ್ಟಾರ್' ಎಂದು ಬಿರುದು ನೀಡಿದ್ದರು. ಇದನ್ನ ಖಂಡಿಸಿದ್ದ ಉಪೇಂದ್ರ ಅಭಿಮಾನಿಗಳು 'ಮಾಸ್ತಿಗುಡಿ' ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 'ಸೂಪರ್ ಸ್ಟಾರ್' ಟೈಟಲ್ ಹಿಂದಕ್ಕೆ ಪಡೆದುಕೊಳ್ಳುವಂತೆ ನೋಡಿಕೊಂಡಿದ್ದರು.

  ಇದೀಗ, ಕಾರ್ತಿಕ್ ಜಯರಾಂ ಅಭಿನಯದ ಚಿತ್ರದಲ್ಲಿ ಮತ್ತೆ ಅದೇ ತಪ್ಪಾಗಿದೆ ಎಂದು ಉಪ್ಪಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜೆಕೆಗೆ 'ಸೂಪರ್ ಸ್ಟಾರ್' ಎಂದು ಟೈಟಲ್ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಏನಿದು ಸೂಪರ್ ಸ್ಟಾರ್ ವಿವಾದ ಎಂದು ತಿಳಿಯಲು ಮುಂದೆ ಓದಿ.....

  ಜೆಕೆ 'ಸೂಪರ್ ಸ್ಟಾರ್' ಆದ್ರಾ.?

  ಜೆಕೆ 'ಸೂಪರ್ ಸ್ಟಾರ್' ಆದ್ರಾ.?

  ಕಾರ್ತಿಕ್ ಜಯರಾಂ ಅಭಿನಯದ 'ಮೇ 1' ಚಿತ್ರದಲ್ಲಿ ನಟ ಜೆಕೆಗೆ ಸೂಪರ್ ಸ್ಟಾರ್ ಎಂದು ಟೈಟಲ್ ನೀಡಲಾಗಿದೆಯಂತೆ. ಇದು ಉಪ್ಪಿ ಅಭಿಮಾನಿಗಳನ್ನ ಕೆರಳಿಸಿದೆ. ಚಿತ್ರರಂಗಕ್ಕೆ ಒಬ್ಬರೇ 'ಸೂಪರ್ ಸ್ಟಾರ್', ಅದು ಉಪೇಂದ್ರ ಮಾತ್ರ..ಈ ಕೂಡಲೇ ಈ ಟೈಟಲ್ ವಾಪಸ್ ತೆಗೆದುಕೊಳ್ಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

  ಕನ್ನಡಕ್ಕೆ ಒಬ್ಬರೇ 'ಸೂಪರ್ ಸ್ಟಾರ್'.., 'ದುನಿಯಾ' ವಿಜಿಗಿಲ್ಲ 'ಆ' ಸ್ಟಾರ್.!ಕನ್ನಡಕ್ಕೆ ಒಬ್ಬರೇ 'ಸೂಪರ್ ಸ್ಟಾರ್'.., 'ದುನಿಯಾ' ವಿಜಿಗಿಲ್ಲ 'ಆ' ಸ್ಟಾರ್.!

  ಜೆಕೆ 'ಸೂಪರ್ ಸ್ಟಾರ್' ಅಂತಾನೆ ಫೇಮಸ್

  ಜೆಕೆ 'ಸೂಪರ್ ಸ್ಟಾರ್' ಅಂತಾನೆ ಫೇಮಸ್

  ಅಂದ್ಹಾಗೆ, ಜೆಕೆ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಅಂತಾನೇ ಫೇಮಸ್ ಆಗಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ಜೆಕೆ ಅವರನ್ನ ಇಂದಿಗೂ ಸೂಪರ್ ಸ್ಟಾರ್ ಅಂತಾನೇ ಕರೆಯುತ್ತಾರೆ. ಆದ್ರೆ, ಅದು ಕಿರುತೆರೆಗೆ ಮಾತ್ರ ಸೀಮಿತವಾಗಿರಲಿ ಎನ್ನುವುದು ಉಪ್ಪಿ ಅಭಿಮಾನಿಗಳ ಡಿಮ್ಯಾಂಡ್.

  ಗೊತ್ತಿದ್ದು ಗೊತ್ತಿದ್ದು ಯಾಕ್ಹೀಗೆ.?

  ಗೊತ್ತಿದ್ದು ಗೊತ್ತಿದ್ದು ಯಾಕ್ಹೀಗೆ.?

  ಈ ಹಿಂದೆ ಮಾಸ್ತಿಗುಡಿ ಚಿತ್ರದ ವೇಳೆ ದುನಿಯಾ ವಿಜಯ್ ಅವರಿಗೂ ಸೂಪರ್ ಸ್ಟಾರ್ ಎಂದು ಟೈಟಲ್ ನೀಡಿದ್ದರು. ಆಗಲೇ ಉಪ್ಪಿ ಅಭಿಮಾನಿಗಳು ಖಂಡಿಸಿ ಆ ಟೈಟಲ್ ವಾಪಸ್ ಪಡೆಯುವಂತೆ ಮಾಡಿದ್ದರು. ಇದು ಗೊತ್ತಿದ್ದರೂ ಮತ್ತೇಕೆ ಹೀಗೆ ಮಾಡಿದ್ರು ಎನ್ನುವುದು ಪ್ರಶ್ನೆ.?

  'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ

  ಅಲ್ಲಿ ರಜನಿಕಾಂತ್, ಇಲ್ಲಿ ಉಪೇಂದ್ರ.!

  ಅಲ್ಲಿ ರಜನಿಕಾಂತ್, ಇಲ್ಲಿ ಉಪೇಂದ್ರ.!

  ಕಾಲಿವುಡ್ ನಲ್ಲಿ ರಜನಿಕಾಂತ್ 'ಸೂಪರ್ ಸ್ಟಾರ್' ಅಂತ ಫೇಮಸ್ ಆಗಿದ್ರೆ, ಕರ್ನಾಟಕದಲ್ಲಿ ನಿಜವಾದ 'ಸೂಪರ್ ಸ್ಟಾರ್' ಉಪೇಂದ್ರ ಎಂಬುದು ಉಪ್ಪಿ ಅಭಿಮಾನಿಗಳ ಅಭಿಪ್ರಾಯ. ಅವರನ್ನ ಬಿಟ್ಟು ಬೇರೆ ಯಾರಿಗೂ ಸೂಪರ್ ಸ್ಟಾರ್ ಟೈಟಲ್ ನೀಡುವಂತಿಲ್ಲ ಎನ್ನುವುದು ಅವರ ಎಚ್ಚರಿಕೆ.

  English summary
  'Super star' title controversy between Karthik jayaram and Super star upendra fans. Jk get 'Super star' title from may 1st movie team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X