For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ 'ಗಾಡ್ ಫಾದರ್' ಮೊದಲ ವಾರದ ಗಳಿಕೆ

  By * ಪ್ರಕಾಶ್ ಉಪಾಧ್ಯಾಯ
  |

  ಕಳೆದ ಶುಕ್ರವಾರ (27 ಜುಲೈ 2012) ಬಿಡುಗಡೆಯಾಗಿರುವ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್ ಫಾದರ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ. ತಮಿಳಿನ 'ವರಲಾರು' ಚಿತ್ರದ ರೀಮೇಕ್ ಆಗಿರುವ 'ಗಾಡ್ ಫಾದರ್' ಚಿತ್ರ ಒಳ್ಳೆಯ ಓಪನಿಂಗ್ ಪಡೆದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಸಫಲವಾಗಿದೆ.

  ಇದೀಗ ಮೊದಲನೇ ವಾರದ ಕಲೆಕ್ಷನ್ ರಿಪೋರ್ಟ್ ಕೂಡ ಬಂದಿದ್ದು ಸ್ಯಾಂಡಲ್ ವುಡ್ ಮಟ್ಟಿಗೆ ಉತ್ತಮ ಎನ್ನಬಹುದಾದ ರು. 4.60 ಕೋಟಿ ಗಳಿಸಿ ಓಟ ಮುಂದುವರಿಸಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳು ಶೇ. 85 ರಷ್ಟು ತುಂಬಿದ್ದು, ಮೊದಲ ವಾರದ ವೀಕ್ ಎಂಡ್ ಗಳಿಕೆ ಚಿತ್ರತಂಡಕ್ಕೆ ಖುಷಿಯ ಸಮಾಚಾರ ನೀಡಿದೆ. ಮೊದಲ ಮೂರು ದಿನಗಳಲ್ಲೇ ರು. 3 ಕೋಟಿ ಗಳಿಕೆಯಾಗಿದ್ದು ನಂತರದ ನಾಲ್ಕು ದಿನಗಳಲ್ಲಿ ರು. 1.60 ಕೋಟಿ ದಾಖಲಾಗಿದೆ.

  ಈ ಚಿತ್ರದ ಮೂಲಕ ಚಿತ್ರಂಗಕ್ಕೆ ಅಡಿಯಿಟ್ಟ ಹಿರಿಯ ನಟಿ ಜಯಮಾಲಾ ಮಗಳು ಸೌಂದರ್ಯಾ, ನಟಿಸಿದ ಮೊದಲ ಚಿತ್ರ ಯಶಸ್ವಿಯಾಗುವ ದಾರಿಯಲ್ಲಿ ಇರುವುದರಿಂದ ಸಹಜವಾಗಿಯೇ ಖುಷಿಯಾಗಿದ್ದಾರೆ. ಕಠಾರಿವೀರ ಸುರಸುಂದರಾಂಗಿ ನಂತರ ತೆರೆಗೆ ಬಂದ ಗಾಡ್ ಫಾದರ್ ಚಿತ್ರ ಕೂಡ ಯಶಸ್ಸಿನ ದಾರಿ ಹಿಡಿದಿರುವುದು ನಟ ಉಪೇಂದ್ರರ ಆತ್ಮವಿಶ್ವಾಸ ಹಾಗೂ ಬೇಡಿಕೆ ಎರಡನ್ನೂ ಹೆಚ್ಚಿಸಿದೆಯಂತೆ.

  ಚಿತ್ರದ ಗಳಿಕೆ ವಿಷಯವಾಗಿ ಮಾತನಾಡಿರುವ ನಿರ್ಮಾಪಕ ಕೆ ಮಂಜು, "ನನ್ನ ನಿರ್ಮಾಣದ ಗಾಡ್ ಫಾದರ್ ಚಿತ್ರ, ಮೊದಲ ವಾರದಲ್ಲಿ ಉತ್ತಮ ಎನ್ನಬಹುದಾದ ರು. 4.60 ಕೋಟಿ ಗಳಿಸಿದೆ. ಮಾಸ್ ಹಾಗೂ ಕ್ಲಾಸ್ ಎರಡೂ ಕೆಟಗರಿಗೆ ಸೇರದ ಈ ಚಿತ್ರ, ಬಿಡುಗಡೆಯಾಗಿರುವ ಎಲ್ಲಾ ಕಡೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಉತ್ತಮ ಗಳಿಕೆ ದಾಖಲಿಸುವ ನಿರೀಕ್ಷೆಯಿದೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Upendra starrer Godfather has ended the first week on a good note. The movie has managed to collect Rs 4.60 crore in the first week.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X