ಕಾವೇರಿ ಹೋರಾಟ ಪರ ಉಪೇಂದ್ರ 'ವಿಭಿನ್ನ' ಹೇಳಿಕೆ
ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿರುವ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ "ನಾವು ಈ ರೀತಿ ಬೀದಿಗಿಳಿದು ಹೋರಾಟ ಮಾಡಿದರೆ ಏನೂ ಪ್ರಯೋಜನ ಆಗುವುದಿಲ್ಲ. ನಾವು ಮತ ಹಾಕಿ ಆರಿಸಿ ಕಳುಹಿಸಿದ ರಾಜಕೀಯ ನಾಯಕರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಬೇಕು. ಸಚಿವರು ಓಡಾಡುವ ರಸ್ತೆಗಳನ್ನು ಬಂದ್ ಮಾಡಬೇಕು. ಅದನ್ನು ಬಿಟ್ಟು ಇಲ್ಲಿ ಪ್ರತಿಭಟನೆ ಮಾಡಿದರೆ ಎಳ್ಳಷ್ಟೂ ಲಾಭವಾಗುವುದಿಲ್ಲ.
ಚುನಾಯಿತ ಪ್ರತಿನಿಧಿಗಳ ಮನೆ ಮಂದೆ ಧರಣಿ ನಡೆಸಬೇಕು. ಕೊಡಬೇಕಾದ ಜಾಗಕ್ಕೆ ಕೊಟ್ಟರೆ ಕೆಲಸ ಬೇಗ ಆಗುತ್ತದೆ. ಅದರ ಬದಲು ಗಲಟೆ ಮಾಡುವುದರಿಂದ, ಪ್ರತಿಭಟನೆ ನಡೆಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕಾವೇರಿ ನೀರು ಯಾವತ್ತಿದ್ದರೂ ನಮ್ಮದು. ಕನ್ನಡಿಗರಿಗೆ ಅನ್ಯಾಯವಾದರೆ ಕನ್ನಡಪರ ಹೋರಾಟಕ್ಕೆ ನಾವೆಲ್ಲರೂ ಸದಾ ಸಿದ್ಧ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತಾಗಬೇಕು" ಎಂದಿದ್ದಾರೆ.
ಯಾವತ್ತೂ ಭಿನ್ನವಾಗಿ ಯೋಚಿಸುವ ಹಾಗೂ ವಿಭಿನ್ನವಾಗಿ ಮಾತನಾಡುವ ಸೂಪರ್ ಸ್ಟಾರ್ ಉಪೇಂದ್ರ ಇದೀಗ ಕಾವೇರಿರುವ ಕಾವೇರಿ ಹೋರಾಟದ ವೇಳೆಯೂ ಬೇರೆಯದೇ ರೀತಿಯಲ್ಲಿ ಮಾತನಾಡುವ ಮೂಲಕ ವಿಶೇಷತೆ ಮೆರೆದಿದ್ದಾರೆ. ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿರುವ ಉಪೇಂದ್ರ, ಹೋರಾಟ ಮಾಡಬೇಕಾಗಿರುವ ದಾರಿಯನ್ನೂ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡ ತಾರೆಯರು ಈ ಚಳುವಳಿಯಲ್ಲಿ ಒಗ್ಗಟ್ಟಿನಿಂದ ಭಾಗವಹಿಸುವ ಮೂಲಕ ಬಹಳಷ್ಟು ಶಕ್ತಿ ತುಂಬಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications
