»   » ಯುವ ಜನಾಂಗಕ್ಕೆ ಸೂಪರ್ ಸ್ಟಾರ್ ನೀಡಿದ ಸಲಹೆ ಏನು?

ಯುವ ಜನಾಂಗಕ್ಕೆ ಸೂಪರ್ ಸ್ಟಾರ್ ನೀಡಿದ ಸಲಹೆ ಏನು?

Posted By:
Subscribe to Filmibeat Kannada
ಯುವ ಜನಾಂಗಕ್ಕೆ ಸೂಪರ್ ಸ್ಟಾರ್ ನೀಡಿದ ಸಲಹೆ ಏನು? | Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ರೋಬೋ-2' (2.0) ಚಿತ್ರದ ಆಡಿಯೋ ಸಮಾರಂಭ ಇತ್ತೀಚೆಗಷ್ಟೇ ದುಬೈನಲ್ಲಿ ನೆರವೇರಿದೆ. ಈ ವೇಳೆ ಚಿತ್ರದ ಬಗ್ಗೆ ಮಾತನಾಡಿದ ರಜನಿಕಾಂತ್ ಇಂದಿನ ಯುವ ಜನಾಂಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

''ಇಂದಿನ ಯುವಕರು ತಮ್ಮ ದೇಶದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಇದು ಖುಷಿಯ ವಿಚಾರ. ಆದ್ರೆ, ತಮ್ಮ ಸಂಸ್ಕ್ರತಿ ಮತ್ತು ಸಂಪ್ರದಾಯಗಳನ್ನ ಮರೆಯುತ್ತಿದ್ದಾರೆ'' ಎಂದು ಹೇಳಿದ್ದಾರೆ.

ರಜನಿ ಪಾತ್ರವನ್ನ ಅಮೀರ್ ಮಾಡಬೇಕಿತ್ತು: ರಿಜೆಕ್ಟ್ ಮಾಡಲು ರಜನಿನೇ ಕಾರಣ.!

Superstar Rajinikanth advised to young people

''ಜೀವನದಲ್ಲಿ ಅವಕಾಶಗಳು ಸಿಗುವುದು ಕಡಿಮೆ, ಆದ್ರೆ, ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶಗಳು ಸಿಕ್ಕಿದಾಗ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನವಿಲ್ಲ'' ಎಂದು ಸಲಹೆ ನೀಡಿದರು.

ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

ಅಂದ್ಹಾಗೆ, 2.0 ಚಿತ್ರದಲ್ಲಿ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದಾರೆ. ಜನವರಿ ತಿಂಗಳಿನಲ್ಲಿ 'ರೋಬೋ-2' ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.

English summary
Superstar Rajinikanth advised to young people.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada