67ನೇ ವಸಂತಕ್ಕೆ ಕಾಲಿಟ್ಟ ರಜನಿ : ಈ ಬಾರಿಯೂ ಇಲ್ಲ ಹುಟ್ಟುಹಬ್ಬದ ಆಚರಣೆ

By Naveen

ಪ್ರತಿ ವರ್ಷ ಡಿಸೆಂಬರ್ 12 ಬಂದರೆ ಸಾಕು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಹಬ್ಬದ ದಿನ ಆಗಿರುತ್ತದೆ. ಆ ದಿನ ಮತ್ತೆ ಈಗ ಬಂದಿದೆ. ನಟ ರಜನಿಕಾಂತ್ ಇಂದು ಹುಟ್ಟುಹಬ್ಬದ ಖುಷಿಯಲ್ಲಿದ್ದು, 67ನೇ ವಸಂತಕ್ಕೆ ಅವರು ಕಾಲಿಟ್ಟಿದ್ದಾರೆ.

ಆದರೆ ರಜನಿಕಾಂತ್ ಈ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಈ ಬಾರಿ ಓಖಿ ಚಂಡಮಾರುತದಿಂದ ತಮಿಳು ನಾಡು ಅಲ್ಲೋಲ ಕಲ್ಲೋಲ ಆಗಿದೆ. ಇದರಿಂದ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಕಾರಣದಿಂದ ಇಂತಹ ಪರಿಸ್ಥಿತಿಯಲ್ಲಿ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ರಜನಿ ನಿರ್ಧಾರ ಮಾಡಿದ್ದಾರೆ.

Superstar Rajinikanth turns 67 today

ಇನ್ನು ಕಳೆದ ಬಾರಿಯೂ ಸಹ ರಜನಿ ಜಯಲಲಿತಾ ಅವರ ನಿಧನ ಮತ್ತು ಚೆನ್ನೈ ಪ್ರವಾಹ ಕಾರಣದಿಂದ ಹುಟ್ಟು ಹಬ್ಬ ಮಾಡಿಕೊಂಡಿರಲಿಲ್ಲ. ಈ ವರ್ಷವೂ ಅದು ಮುಂದುವರೆದಿದ್ದು, ರಜನಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಇದ್ದ ಅಭಿಮಾನಿಗಳಿಗೆ ಅದು ಬೇಸರ ಮೂಡಿಸಿದೆ. ಆದರು ಸಹ ತಮಿಳುನಾಡಿನ ಅನೇಕ ಕಡೆ ಅಭಿಮಾನಿಗಳು ರಜನಿ ಅವರ ದೊಡ್ಡ ದೊಡ್ಡ ಕಟ್ ಔಟ್ ಹಾಕಿ ತಾವೇ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಅಂದಹಾಗೆ, ರಜನಿಕಾಂತ್ ಸದ್ಯ '2.0' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಶಂಕರ್ ಮತ್ತು ರಜನಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹ್ಯಾಟ್ರಿಕ್ ಸಿನಿಮಾ ಇದಾಗಿದೆ. ಇದರೊಂದಿಗೆ ಪಾ.ರಂಜಿತ್ ಅವರ 'ಕಾಲ' ಸಿನಿಮಾದಲ್ಲಿ ರಜನಿಕಾಂತ್ ಅಭಿನಯಿಸುತ್ತಿದ್ದಾರೆ.

More from Filmibeat

English summary
'Super star Rajinikanth' turns 67 today (December 12). The actor himself will stay away from the celebrations - spending the day out of town at a secret location.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X