»   » ಉಪೇಂದ್ರ 'ಬಾಕ್ಸ್ ಐಟಂ' ಪೋಸ್ಟರ್ ಸೂಪರ್ ಮಗಾ!

ಉಪೇಂದ್ರ 'ಬಾಕ್ಸ್ ಐಟಂ' ಪೋಸ್ಟರ್ ಸೂಪರ್ ಮಗಾ!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಟೋಪಿ ಹಾಕಿಕೊಂಡಿದ್ದಾರೆ. ಟೋಪಿವಾಲಾನಾಗಿ ಮಿಂಚುವುದರ ಜೊತೆಗೆ ಸೂಪರ್ ರಂಗಾನಾಗಿ ಕೂಡಾ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಮಧ್ಯೆ ಕಲ್ಪನಾ ರೂಪದಲ್ಲೂ ಕಾಣಿಸಿಕೊಳ್ಳಲಿರುವ ಉಪ್ಪಿ ಭಾನುವಾರ ತನ್ನ ಅಭಿಮಾನಿಗಳಿಗಾಗಿ ಹೊಸ ಚಿತ್ರ(ಉಪೇಂದ್ರ 2?)ದ ಪೋಸ್ಟರ್ ಅನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.

Superstar Upendra movie Poster

1999ರಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ 2ಡಿ ಚಿತ್ರ 'ಉಪೇಂದ್ರ' ಚಿತ್ರದ ಮುಂದುವರಿದ ಭಾಗವನ್ನು ನಟ ಉಪೇಂದ್ರ ಕೈಗೆತ್ತಿಕೊಂಡಿದ್ದಾರೆ. ಉಪೇಂದ್ರ ಅವರ 44ನೇ (ಸೆಪ್ಟೆಂಬರ್ 18) ಹುಟ್ಟುಹಬ್ಬದ ದಿನ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದ ಹಾಗೆ ಆಗಿದೆ.

ಟ್ವಿಟ್ಟರ್ ನಲ್ಲಿ @realupendra ಚಿತ್ರದ ಪೋಸ್ಟರ್ ಹಾಕುತ್ತಿದ್ದಂತೆ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು retweet, like ಮಾಡಿದ್ದಾರೆ. ಇದೇ ಪೋಸ್ಟರ್ ನಂತರ ಫೇಸ್ ಬುಕ್ ಸೇರಿ ಅಲ್ಲೂ ಕೂಡಾ ಸದ್ದು ಮಾಡತೊಡಗಿದೆ.

ಸದ್ಯಕ್ಕೆ ಎರಡು ಕಡೆ ಕಾಣಿಸಿಕೊಂಡಂತೆ 43 shares, 40 likes, 10 comments ಹಾಗೂ 3 shares, 41 likes, 10 comments ಬಂದಿದೆ.

ಪೋಸ್ಟರ್ ನಲ್ಲಿ ಏನಿದೆ?: ಎಡಗಡೆ ತುದಿಯಲ್ಲಿ ರಂಗೀಲಾ ಬಣ್ಣದಲ್ಲಿ ಟೋಪಿ ಧರಿಸಿದ ಉಪ್ಪಿ ಮುಖರಾವಿಂದ ಬಲಗೆ ಉಪೇಂದ್ರ ಪ್ರೊಡೆಕ್ಷನ್ಸ್ ಎಂದು ಬರೆದಿದೆ.

ಉಳಿದಂತೆ ಗೌರಿ ಗಣೇಶ ಹಬ್ಬದ ಶುಭ ಹಾರೈಕೆ ಇದ್ದರೆ, ನಿರ್ಮಾಪಕರಾಗಿ ಪ್ರಿಯಾಂಕ ಉಪೇಂದ್ರ, ಕಾರ್ಯಕಾರಿ ನಿರ್ಮಾಪಕರಾಗಿ ಸುಧೀಂದ್ರಕುಮಾರ್ ಬಿಎಂ ಹೆಸರು ಕಾಣಿಸಿಕೊಂಡಿದೆ.

ಮಧ್ಯಭಾಗದಲ್ಲಿ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಉಪೇಂದ್ರ ಎಂಬ ಹೆಸರು ರಾರಾಜಿಸುತ್ತಿದ್ದರೆ ಅದರ ಜೊತೆಗೆ ಎದ್ದು ಕಾಣುವಂತಿರುವುದು ಒಂದು ಬಾಕ್ಸ್ ಹಾಗೂ ಅದರಲ್ಲಿನ ಅಕ್ಷರಗಳು, ಚಿನ್ಹೆಗಳು, ಗಣಿತ ಸೂತ್ರಗಳು ಗಮನ ಸೆಳೆಯುತ್ತದೆ. ಬಾಕ್ಸ್ ಹಾಗೂ ಅದರಲ್ಲಿನ ಅರ್ಥವನ್ನು ಉಪ್ಪಿ ಅವರೇ ಮುಂದೇ ಜನತೆಯ ಮುಂದಿಡಲಿದ್ದಾರೆ ಎಂಬ ನಿರೀಕ್ಷೆಯಿದೆ.
ಅದಕ್ಕೂ ಮೊದಲು ನಿಮಗೇನಾದರೂ ಬಾಕ್ಸ್ ಐಟಂ ಬಗ್ಗೆ ತಿಳಿದರೆ ನಮಗೂ ತಿಳಿಸಿ...

ವಿಭಿನ್ನ ಕತೆ, ವಿಚಿತ್ರ ಸಂಭಾಷಣೆ, ವಿಶೇಷ ಹಾಡುಗಳಿಂದ ಉಪೇಂದ್ರ ಚಿತ್ರ ಎಲ್ಲರ ಮನಗೆದ್ದಿತ್ತು. ಸಾಲದಕ್ಕೆ ಚಿತ್ರದಲ್ಲಿ ಮೂವರು ನಾಯಕಿಯರಿದ್ದರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಈಗ ಇವರು ಮೂವರು ಚಲಾವಣೆಯಲ್ಲಿಲ್ಲ. ಹಾಗಾಗಿ ಭಾಗ ಎರಡನ್ನು ಯಾವ ರೀತಿ ತೆರೆಗೆ ತರುತ್ತಾರೋ ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಆದರೆ ಗುರುಕಿರಣ್ ಸಂಗೀತ, ಎಚ್ ಸಿ ವೇಣು ಛಾಯಾಗ್ರಹಣ ಉಳಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಉಪೇಂದ್ರ ಪ್ರೊಡೆಕ್ಷನ್ ಜೊತೆಗೆ ಓಂ ಹೆಸರಿನ ಸ್ವಂತ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಕೂಡಾ ಸುದ್ದಿ ಹಬ್ಬಿದೆ. ಎಲ್ಲದ್ದಕ್ಕೂ ಉಪ್ಪಿಯೇ ಉತ್ತರಿಸಬೇಕು.

English summary
Superstar Upendra has released movie poster of his new venture through social networking site twitter. Real Star known for his innovative script concept also in movie poster designs. Uppi to announce his movie name on his birthday (Sept.18) of own banner production with Priyanka Upendra producer and Uppi is wearing the director's hat as well.
Please Wait while comments are loading...