»   » ಸೂಪರ್‌ಸ್ಟಾರ್‌, ಎಚ್‌2

ಸೂಪರ್‌ಸ್ಟಾರ್‌, ಎಚ್‌2

Posted By: Super
Subscribe to Filmibeat Kannada

ಧನರಾಜ್‌ ಟೈಂ ಚೆನ್ನಾಗಿಲ್ಲ , ಹನುಮಂತು ಟೈಂ ಚೆನ್ನಾಗಿದೆ !
ಗಣೇಶನ ಮದುವೆಯಂತೆ ಎಚ್‌2ಓ ಬಿಡುಗಡೆ ಮುಂದೆ ಹೋಗುತ್ತಿದ್ದರೆ, ಸೂಪರ್‌ಸ್ಟಾರ್‌ ನಿರ್ಮಾಪಕ ಹನುಮಂತು ಮೊಗದಲ್ಲಿ ರಾಜಕಳೆ. ಉದ್ಯಮದ ಮಂದಿಯ ಮಾತನ್ನು ನಂಬುವುದಾದರೆ ಸೂಪರ್‌ಸ್ಟಾರ್‌ ಮೊದಲು ಬಿಡುಗಡೆಯಾಗಲೆಂದೇ ಎಚ್‌2ಓ ಹರಿವಿಗೆ ಉಪೇಂದ್ರ ಅಡ್ಡಿ ಮಾಡುತ್ತಿದ್ದಾರಂತೆ. ಉಪೇಂದ್ರ ಬಗ್ಗೆ ಆಪ್ತರಲ್ಲಿ ಧನರಾಜ್‌ ದೂರುತ್ತಿದ್ದಾರಂತೆ. ಪಾಪ ಧನರಾಜು!

ಸೂಪರ್‌ಸ್ಟಾರ್‌ ಚಿತ್ರೀಕರಣ ಹೆಚ್ಚೂ ಕಡಿಮೆ ಮುಕ್ತಾಯವಾಗಿದೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ 2 ಲಕ್ಷ ರುಪಾಯಿ ವೆಚ್ಚದಲ್ಲಿ ಸ್ತಬ್ಧ ಚಿತ್ರವೊಂದನ್ನು ರೂಪಿಸಲಾಗಿತ್ತು . ಈ ಚಿತ್ರವನ್ನು ಹಿನ್ನೆಲೆಯಾಗಿಸಿಕೊಂಡು ಹಂಸಲೇಖಾ ಸಂಗೀತ ಸಂಯೋಜನೆಯಲ್ಲಿ , ಹೇಮಂತಕುಮಾರ್‌ ಕಂಠದಲ್ಲಿ ಮೂಡಿದ ಗೀತೆಯನ್ನು ಚಿತ್ರೀಕರಿಸಲು ನಾಗತಿಹಳ್ಳಿ 7 ದಿನ ತೆಗೆದುಕೊಂಡಿದ್ದಾರೆ.

ಹಾಂಕಾಂಗ್‌, ಬ್ಯಾಂಕಾಕ್‌ಗಳಲ್ಲಿ ಕೀರ್ತಿರೆಡ್ಡಿಯಾಂದಿಗೆ ಸೂಪರ್‌ಸ್ಟಾರ್‌ ಕುಣಿದಿದ್ದಾನೆ. ಗೆಳೆಯ ಹನುಮಂತು ಕಾಸು ಸುರಿದಿರುವ ಸೂಪರ್‌ ಸ್ಟಾರ್‌ ಹಿಟ್‌ ಆಗಲೇಬೇಕು ಎನ್ನುವುದು ಉಪೇಂದ್ರರ ಹಟ. ನಾನೇನು ಪಾಪ ಮಾಡಿದ್ದೆ ಎಂದು ಅಲವತ್ತು ಕೊಳ್ಳುತ್ತಿರುವ ಧನರಾಜ್‌ ಧ್ವನಿಗೆ ಉಪ್ಪಿ ಕಿವುಡಾಗಿದ್ದಾರೆ.

'ರಾ" ಗೆ ದಾರಿಬಿಟ್ಟ ಅಪ್ಸರಾ
ಎಲ್ಲೆಡೆ ಅಪ್ಸರಳ ಮಾತೇ ತುಂಬಿರುವಾಗ, ತ್ರಿಭುವನ್‌ ಥಿಯೇಟರ್‌ನಿಂದ ಒಂದೇವಾರಕ್ಕೆ 'ರಾ" ಗೆ ಅಪ್ಸರಾ ಜಾಗ ಬಿಟ್ಟಿದ್ದಾಳೆ. ವೀಕ್ಷಕರ/ ಚಿತ್ರೋದ್ಯಮದ ಪ್ರತಿಭಟನೆಯಿಂದಾಗಿ ಈ ಎತ್ತಂಗಡಿಯಲ್ಲ. ಅಪ್ಸರ ಆಗಮಿಸಿದ್ದೆ ಒಂದು ವಾರದ ಅವಧಿಗೆ. ಪೂರ್ವ ಕರಾರಿನಂತೆ 'ರಾ " ಬಿಡುಗಡೆಯಾಗಿದೆ. ಅಂದಹಾಗೆ- 'ರಾ" ತೆಲುಗು ಚಿತ್ರ. ನಾಯಕ ಉಪೇಂದ್ರ.

ತೆಲುಗು ಚಿತ್ರೋದ್ಯಮದಲ್ಲಿ ರಾ ದಾಖಲೆ ಸೃಷ್ಟಿಸಿದೆಯಂತೆ. ಈ ದಾಖಲೆ ಚಿತ್ರವನ್ನು ಕೋಟಿ ನಿರ್ಮಾಪಕ ರಾಮು ಕರ್ನಾಟಕದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಿಯಾಂಕ, ಸಾಧು ಕೋಕಿಲ, ಆಲ್ಫೋನ್ಸಾ ತಾರಾಗಣದಲ್ಲಿದ್ದಾರೆ. ಸೂಪರ್‌ ಸ್ಟಾರ್‌ ಯಶಸ್ಸಿಗೆ/ಸೋಲಿಗೆ ರಾ ವೇದಿಕೆಯನ್ನು ಸೃಷ್ಟಿಸುತ್ತದಾ?

English summary
Kannada cinema : Super star, Ra and H2O and upendra

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada