»   » ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸುವ ಆಸೆನಾ?

ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸುವ ಆಸೆನಾ?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ನಿಮಗೆ ಇಷ್ಟನಾ? ಅವರೊಂದಿಗೆ ಆಕ್ಟ್ ಮಾಡುವ ಆಸೆ ನಿಮಗೆ ಇದ್ಯಾ? ಒಂದ್ ಚಾನ್ಸ್ ಸಿಕ್ಕಿದ್ರೆ ಸಾಕು, ಯಶ್ ಜೊತೆ ನಟಿಸ್ಬೇಕು ಅಂತ ಕನಸು ಕಾಣ್ತಿದ್ದೀರಾ?

ಹಾಗೇನಾದ್ರೂ ಇದ್ರೆ..ಇದೋ ಇಲ್ಲಿದೆ ಸುವರ್ಣಾವಕಾಶ. ಯಶ್ ಅಭಿನಯಿಸಲಿರುವ, 'ಉಗ್ರಂ' ಖ್ಯಾತಿ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹೊಸ ಸಿನಿಮಾ 'ಕೆ.ಜಿ.ಎಫ್' ಗೆ ಸಹ ನಟರು ಬೇಕಾಗಿದ್ದಾರೆ.

yash

27 ವರ್ಷದಿಂದ 65 ವರ್ಷ ವಯಸ್ಸಿನ ಪ್ರತಿಭಾವಂತ ಕಲಾವಿದರ ಹುಡುಕಾಟದಲ್ಲಿ ಚಿತ್ರತಂಡವಿದೆ. ಇದೇ ತಿಂಗಳ 8ನೇ ತಾರೀಖು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೂ ಆಡಿಷನ್ ನಡೆಯಲಿದೆ. ಎಲ್ಲಿ ಅಂದ್ರೆ, ಬೆಂಗಳೂರಿನ ಗಾಂಧಿನಗರದ ಜೈನ್ ಟೆಂಪಲ್ ಬಳಿ ಇರುವ ಚೇತನ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]

ನಿಮ್ಮಲ್ಲಿ ಟ್ಯಾಲೆಂಟ್ ಇದ್ರೆ, ನಿಮ್ಮದೇ ಡೈಲಾಗ್ ಮತ್ತು ಮ್ಯಾನರಿಸಂ ಮೂಲಕ ಆಡಿಷನ್ ನಲ್ಲಿ ಧೂಳೆಬ್ಬಿಸಿ. ಚಿತ್ರತಂಡವನ್ನ ಇಂಪ್ರೆಸ್ ಮಾಡಿ. ಯಾರಿಗ್ ಗೊತ್ತು, ಮುಂದೆ ಯಶ್ ಹೆಸರಿನ ನಂತ್ರ ಟೈಟಲ್ ಕಾರ್ಡ್ ನಲ್ಲಿ ನಿಮ್ಮ ನಾಮಧ್ಯೇಯ ಬರಬಹುದಲ್ಲಾ.!?

English summary
Yash starrer Kannada Movie 'KGF' team is in hunt for fresh faces for the Supporting role. If you are interested, take part in the audition which is happening on November 8th in Hotel Chetan International, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada