»   » ಸುಪ್ರಭಾತ ಕನ್ನಡ ವಾಹಿನಿ ಮತ್ತೆ ಮೊಳಗಿದೆ...

ಸುಪ್ರಭಾತ ಕನ್ನಡ ವಾಹಿನಿ ಮತ್ತೆ ಮೊಳಗಿದೆ...

Posted By: Super
Subscribe to Filmibeat Kannada

ಹತ್ತಿರ ಹತ್ತಿರ ಹತ್ತು ದಿನದಿಂದಲೇ ತನ್ನ ಪ್ರಸಾರ ನಿಲ್ಲಿಸಿದ್ದ ಕನ್ನಡದ ಖಾಸಗಿ ಟಿ.ವಿ. ಚಾನೆಲ್‌ ಸುಪ್ರಭಾತ ಸೋಮವಾರ ಸಂಜೆಯಿಂದ ಮತ್ತೆ ಮೊಳಗಿದೆ. ಸ್ಥಗಿತಗೊಂಡಿದ್ದ ಪ್ರಸಾರ ಪುನರ್‌ ಚಾಲನೆಗೊಂಡಿದೆ.

'ಪ್ರಿಯ ವೀಕ್ಷಕರೇ ತಾಂತ್ರಿಕ ಕಾರಣಗಳಿಂದ ಪ್ರಸಾರದಲ್ಲಿ ಉಂಟಾಗಿದ್ದ ಅಡಚಣೆಗೆ ವಿಷಾದಿಸುತ್ತೇವೆ. ಆತ್ಮೀಯ ಕೇಬಲ್‌ ಆಪರೇಟರ್‌ಗಳು ನಮ್ಮೊಂದಿಗೆ ಸಹಕರಿಸುವಂತೆ ಕೋರುತ್ತೇವೆ" ಎಂಬ ಪ್ರಕಟಣೆಯಾಂದಿಗೆ ಸುಪ್ರಭಾತ ಕಾರ್ಯಕ್ರಮಗಳ ಮರು ಪ್ರಸಾರದಲ್ಲಿ ತೊಡಗಿದೆ.

ಕಾರ್ಯಕ್ರಮ ನಿಲುಗಡೆಯಿಂದಾಗಿ ಕೇಬಲ್‌ ಆಪರೇಟರುಗಳ ಬಳಗದಲ್ಲಿ ಹಾಗೂ ಕಾರ್ಯಕ್ರಮ ನಿರ್ಮಾಪಕರ ವರ್ಗದ ನಡುವೆ ಸುಳಿದಾಡುತ್ತಿದ್ದ ಊಹಾಪೋಹ, ವದಂತಿಗಳಿಗೆ ಈಗ ತೆರೆ ಬಿದ್ದಂತಾಗಿದೆ. ಅನ್ಯಾಯವಾಗಿ ಕನ್ನಡದ ಚಾನೆಲ್‌ ಒಂದು ಕಾರ್ಯಕ್ರಮ ನಿಲ್ಲಿಸುವಂತಾಯಿತಲ್ಲ ಎಂಬ ಕನ್ನಡಿಗರ ಕೊರಗೂ ದೂರವಾಗಿದೆ.

ಈ ಹೊತ್ತು ಸುಪ್ರಭಾತ ವಾಹಿನಿಗೆ ಆಶಾದಾಯಕ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಇತರೆ ಕನ್ನಡ ವಾಹಿನಿಗಳಿಗೆ ಸವಾಲು ಒಡ್ಡುವ ಸಿದ್ಧತೆಯಲ್ಲಿ ತೊಡಗಿದೆ ಎಂಬ ಸುಳಿವು ಸಿಕ್ಕಿದೆ. ವಿವಿಧ ವಾಹಿನಿಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಟ್ಟರೆ, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮ ವೀಕ್ಷಣೆಯ ಅವಕಾಶ ಸಿಗುವುದು ಖಂಡಿತ.


English summary
Kannada tv channels struggling for existence. ಸುಪ್ರಭಾತ ಕನ್ನಡ ವಾಹಿನಿ ಮತ್ತೆ ಮೊಳಗಿದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada