twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 'ಮೋದಿ' ಬಯೋಪಿಕ್ ಚಿತ್ರ

    |

    ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಯೋಪಿಕ್ ಸಿನಿಮಾ ಚಿತ್ರಕ್ಕೆ ಚುನಾವಣಾ ಆಯೋಗ ನೀಡಿರುವ ತಡೆಯಾಜ್ಞೆ ಪ್ರಶ್ನಿಸಿ ನಿರ್ಮಾಪಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಚುನಾವಣೆ ನಡೆಯುತ್ತಿರುವ ಕಾರಣ ಎಲೆಕ್ಷನ್ ಮುಗಿಯವರೆಗೂ ಮೋದಿ ಸಿನಿಮಾ ರಿಲೀಸ್ ಮಾಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿತ್ತು.

    ಈ ಆದೇಶವನ್ನ ಪ್ರಶ್ನಿಸಿ ನಿರ್ಮಾಪಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 15ರಂದು ವಿಚಾರಣೆ ನಡೆಸಲಿದೆ. ಈ ಮೂಲಕ ಮೋದಿ ಸಿನಿಮಾದ ಬಿಡುಗಡೆ ವಿವಾದ ಅಯೋಗದಿಂದ ಮತ್ತೆ ನ್ಯಾಯಾಲಯದ ಅಂಗಳಕ್ಕೆ ಜಿಗಿದಿದೆ.

    ''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!

    ಈ ಹಿಂದೆ ಕಾಂಗ್ರೆಸ್ ಪಕ್ಷದವರು ಮೋದಿ ಚಿತ್ರಕ್ಕೆ ತಡೆ ನೀಡಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾಗ, ಸಿನಿಮಾ ಬ್ಯಾನ್ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಬಹುದು' ಎಂದು ತಿಳಿಸಿತ್ತು.

    'ಮೋದಿ' ಚಿತ್ರ ಬಿಡುಗಡೆಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ 'ಮೋದಿ' ಚಿತ್ರ ಬಿಡುಗಡೆಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ

    supreme court to hear on April 15 plea of modi movie ban

    ತದನಂತರ ಚುನಾವಣಾ ಆಯೋಗ ಪಿಎಂನರೇಂದ್ರಮೋದಿ ಚಿತ್ರದ ಬಿಡುಗಡೆಯನ್ನ ತಡೆ ಹಿಡಿದಿತ್ತು. ಈಗ ಮತ್ತೆ ಸುಪ್ರೀಂ ಕೋರ್ಟ್ ಗೆ ಈ ಪ್ರಕರಣ ಹೋಗಿರುವುದರಿಂದ ಬಹುಶಃ ಚಿತ್ರದ ರಿಲೀಸ್ ಗೆ ಗ್ರೀನ್ ಸಿಗ್ನಲ್ ಸಿಗಬಹುದು ಎಂಬ ನಿರೀಕ್ಷೆ ಇದೆ.

    ಓಮಂಗ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ. ಐದು ಜನ ನಿರ್ಮಾಪಕರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಮೊದಲು ನಿರ್ಧರಿಸಿದಂತೆ ಏಪ್ರಿಲ್ 5ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು, ನಂತರ ಏಪ್ರಿಲ್ 12ಕ್ಕೆ ಬಿಡುಗಡೆಯಾಗಬೇಕಿತ್ತು. ಆದ್ರೆ, ಸಿನಿಮಾ ರಿಲೀಸ್ ಅಗಲೇ ಇಲ್ಲ.

    English summary
    Biopic on prime minister narendra modi: supreme court to hear on April 15 plea challenging election commission's ban on release of film.
    Friday, April 12, 2019, 17:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X