'ರಹದಾರಿ' ಮೂಲಕ ಚಿತ್ರರಂಗ ಪ್ರವೇಶಿಸಿದ 'ಸೀತಾ ವಲ್ಲಭ' ನಾಯಕಿ

ಕನ್ನಡದ ಮತ್ತೊಬ್ಬ ಸೀರಿಯಲ್ ನಾಯಕಿ ಸಿನಿಮಾರಂಗದ ಪ್ರವೇಶ ಮಾಡಿದ್ದಾರೆ. 'ಸೀತಾ ವಲ್ಲಭ' ಧಾರಾವಾಹಿಯ ನಟಿ ಸುಪ್ರಿತಾ ಸತ್ಯನಾರಾಯಣ್ 'ರಹದಾರಿ' ಮೂಲಕ ಗಾಂಧಿನಗರ ತಲುಪಿದ್ದಾರೆ.

ಇತ್ತೀಚಿಗಷ್ಟೆ 'ರಹದಾರಿ' ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿರುವ ಸುದ್ದಿ ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಕಟ ಆಗಿತ್ತು. ಈ ಸಿನಿಮಾದ ಮೂಲಕ ಶ್ವೇತಾ ಶ್ರೀವತ್ಸವ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದೇ ಸಿನಿಮಾಗೆ ಮತ್ತೊಬ್ಬ ನಟಿಯ ಆಗಮನ ಆಗಿದ್ದು, ಸುಪ್ರಿತಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪೊಲೀಸ್ ಪಾತ್ರದಲ್ಲಿ ಶ್ವೇತಾ ಶ್ರೀವತ್ಸವ್ ನಟಿಸುತ್ತಿದ್ದಾರೆ. ರಾಬರಿ ಗ್ಯಾಂಗ್ ನಲ್ಲಿ ಇರುವ ಪಾತ್ರಗಳಲ್ಲಿ ಕೀರ್ತೇಶ್ ಹಾಗೂ ಸುಪ್ರಿತಾ ಪ್ರಮುಖರಾಗಿದ್ದಾರೆ. ರಾಬರಿ ಗ್ಯಾಂಗ್ ನಲ್ಲಿ ಇವರ ನಡುವೆ ಲವ್ ಸ್ಟೋರಿ ನಡೆಯಲಿದೆ.

Supritha Sathyanarayan Playing Important Role In Rahadari Movie

ಸಿನಿಮಾದ ಪೋಸ್ಟರ್ ವೊಂದು ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಇಡೀ ಸಿನಿಮಾದ ಕಥೆಯನ್ನು ಪೋಸ್ಟರ್ ನಲ್ಲಿ ಹೇಳಲಾಗಿದೆ. ಚಂದ್ರಶೇಖರ್ ಎಂಬುವವರು ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಅನೇಕ ಅಂಶಗಳು ಪೋಸ್ಟರ್ ನಲ್ಲಿ ಇದ್ದು, ಹೊಸದಾಗಿದೆ.

ಗಿರೀಶ್ ವೈರಮುಡಿ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಎರಡನೇ ಸಿನಿಮಾಗೆ ಮೊದಲೇ ಈ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಹೆಚ್ಚು ಇರುವ ಕಾರಣ 'ರಹದಾರಿ' ಚಿತ್ರ ಮೊದಲು ಶುರು ಮಾಡಿದ್ದಾರೆ.

Supritha Sathyanarayan Playing Important Role In Rahadari Movie

ಮುಕ್ತಾಂಬ ಬಸವರಾಜು ಹಾಗೂ ಮಂಜುನಾಥ್ ಶಾಮನೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರೋಣದ ಬಕ್ಕೇಶ್ ಹಾಗೂ ಕೆ ಸಿ ರಾವ್ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Actress Supritha Sathyanarayan playing Important officer role in 'Rahadari' kannada movie. The movie is directing by Girish Vairamudi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X