ಮತ್ತೊಂದು ಮಲೆಯಾಳಂ ಸಿನಿಮಾಗೆ ನಾಯಕಿ ಆದ ಸುರಭಿ
ಕನ್ನಡದ ನಟಿ ಸುರಭಿ ಸಂತೋಷ್ ಇತ್ತೀಚಿಗಷ್ಟೆ ಪ್ರಿಯಾಂಕ ಉಪೇಂದ್ರ ಅವರ ಜೊತೆಗೆ '2nd ಹಾಫ್' ಸಿನಿಮಾದಲ್ಲಿ ನಟಿಸಿದ್ದರು. ಉಪ್ಪಿ ಅಣ್ಣನ ಮಗ ನಿರಂಜನ್ ಜೋಡಿಯಾಗಿ ತೆರೆ ಮೇಲೆ ಲವಲವಿಕೆಯ ಹುಡುಗಿಯಾಗಿ ಅವರು ಗಮನ ಸೆಳೆದಿದ್ದರು. ಇನ್ನು '2nd ಹಾಫ್' ನಂತರ ಸುರಭಿ ಅವರ ಮತ್ತೊಂದು ಸಿನಿಮಾ ಈಗ ಬಿಡುಗೆಡೆಗೆ ಸಿದ್ಧವಾಗಿದೆ.
ನಟಿ ಸುರಭಿ ಸಂತೋಷ್ 'ಕಿನವಲ್ಲಿ' (Kinavalli) ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರ ಎರಡನೇ ಮಲೆಯಾಳಂ ಸಿನಿಮಾಗಿದೆ. ಇದೊಂದು ಹಾರರ್ ಚಿತ್ರವಾಗಿದ್ದು, ಮಲೆಯಾಳಂ ಹಾಗೂ ತಮಿಳು ಭಾಷೆಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಈಗಾಗಲೇ ಮಾಲಿವುಡ್ ನಲ್ಲಿ ಏಳು ಸಿನಿಮಾಗಳನ್ನು ಮಾಡಿರುವ ಸುಗೀತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮನೀಶ್ ಥಾಮಸ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಈ ತಿಂಗಳು ಆಡಿಯೋ ಲಾಂಚ್ ಆಗಲಿದ್ದು, ಜುಲೈ 27 'ಕಿನವಲ್ಲಿ' (Kinavalli) ಸಿನಿಮಾ ಬಿಡುಗಡೆಯಾಗಲಿದೆಯಂತೆ. ಇನ್ನು ಈ ವರ್ಷ ರಿಲೀಸ್ ಆಗುತ್ತಿರುವ ಸುರಭಿ ನಟನೆಯ ಮೂರನೇ ಸಿನಿಮಾ ಇದಾಗಿದೆ. ಹಾರರ್, ಫ್ರೆಂಡ್ ಶಿಪ್, ರೋಮ್ಯಾನ್ಸ್, ಫೈಟ್ ,ಡ್ಯಾನ್ಸ್ ಹಾಗೂ ಒಂದು ಸಂದೇಶ ಈ ಚಿತ್ರದಲ್ಲಿದೆಯಂತೆ.

ಅಂದಹಾಗೆ, ಎಸ್ ನಾರಾಯಣ್ ನಿರ್ದೇಶನದ 'ದುಷ್ಟ' ಚಿತ್ರ ಸಿನಿಮಾದ ಮೂಲಕ ನಟಿ ಸುರಭಿ ಸಂತೋಷ್ ಸಿನಿ ಕೆರಿಯರ್ ಶುರು ಮಾಡಿದರು. 'ಜಟಾಯು' ಸಿನಿಮಾದ ಬಳಿಕ ವಿಧ್ಯಾಭ್ಯಾಸದ ದೃಷ್ಟಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಇವರು ಮತ್ತೆ ತೆರೆ ಮೇಲೆ ಮಿಂಚುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications











