»   » ಕನ್ನಡದ ಜೊತೆ ತೆಲುಗಿನಲ್ಲಿ ಮಿಂಚುತ್ತಿರುವ ಸೂರಜ್ ಗೌಡ

ಕನ್ನಡದ ಜೊತೆ ತೆಲುಗಿನಲ್ಲಿ ಮಿಂಚುತ್ತಿರುವ ಸೂರಜ್ ಗೌಡ

Posted By:
Subscribe to Filmibeat Kannada

'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಸೆಳೆದ ನಟ ಸೂರಜ್ ಗೌಡ ನಂತರ 'ಕಹಿ', 'ಸಿಲಿಕಾನ್ ಸಿಟಿ' ಅಂತಹ ಚಿತ್ರಗಳಲ್ಲಿ ನಟಿಸಿದ್ದರು. ಇದಾದ ನಂತರ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬಿಜಿಯಾಗಿರುವ ಸೂರಜ್ ಮತ್ತೆರಡು ಹೊಸ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ, ಕನ್ನಡದಲ್ಲಿ ಯಶಸ್ಸಿ ಜರ್ನಿ ಶುರು ಮಾಡಿರುವ ಸೂರಜ್ ಈಗ ಕನ್ನಡದ ಜೊತೆ ತೆಲುಗು ಸಿನಿಲೋಕಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ಚಂದನವನದ ಯುವ ಪ್ರತಿಭೆಯೊಂದು ಟಾಲಿವುಡ್ ನಲ್ಲಿ ಮಿಂಚಲು ತಯಾರಿ ನಡೆಸಿದೆ.

ಅಷ್ಟಕ್ಕೂ, ಸೂರಜ್ ಗೌಡ ಅವರ ತೆಲುಗು ಚಿತ್ರ ಯಾವುದು? ನಟಿ ಯಾರು? ನಿರ್ದೇಶಕ ಯಾರು ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.....

ದ್ವಿಭಾಷಾ ಚಿತ್ರಕ್ಕೆ ಸೂರಜ್ ನಾಯಕ

ಸೂರಜ್ ಗೌಡ ಅಭಿನಯಿಸಲಿರುವ ಮುಂದಿನ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ತಯಾರಾಗುತ್ತಿದ್ದು, ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಹೆಸರೇನು?

ಈ ಚಿತ್ರಕ್ಕೆ ಕನ್ನಡದಲ್ಲಿ 'ಸ್ನೇಹವೇ ಪ್ರೀತಿ' ಎಂದು ಹೆಸರಿಟ್ಟಿದ್ದು, ತೆಲುಗಿನಲ್ಲಿ ಈ ಚಿತ್ರಕ್ಕೆ '2-ಫ್ರೆಂಡ್ಸ್' ಎಂದು ನಾಮಕರಣ ಮಾಡಲಾಗಿದೆ.

ಇಬ್ಬರು ನಾಯಕಿಯರು

ಸೂರಜ್ ಗೌಡ ಅವರಿಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಇಬ್ಬರು ಬಾಲಿವುಡ್ ಕ್ಷೇತ್ರದ ಮಾಡೆಲ್ ಗಳಾಗಿದ್ದು, ಸೋನಿಯಾ ಮತ್ತು ಫರಾಹ ಸೂರಜ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಯಾರು?

ಈ ಚಿತ್ರಕ್ಕೆ ತೆಲುಗಿನ ನಿರ್ದೇಶಕ ಜಿ.ಎಲ್.ಬಿ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಆಕ್ಷನ್ ದೃಶ್ಯ ಚಿತ್ರೀಕರಿಸುತ್ತಿದೆ.

English summary
Suraj Gowda’s next is a Kannada-Telugu bilingual. the Movie Directed by GLB Srinivas.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada