For Quick Alerts
  ALLOW NOTIFICATIONS  
  For Daily Alerts

  ನನ್ನ ಜೀವನದಲ್ಲಿ ಯಾವತ್ತೂ ಮಗು ಎತ್ತಿಕೊಂಡಿರ್ಲಿಲ್ಲ: ಸೂರಜ್ ಸರ್ಜಾ ತೋಳಲ್ಲಿ ಜ್ಯೂ.ಚಿರು

  |

  ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಸೋದರ ಸಂಬಂಧಿ, ಸಂಗೀತ ನಿರ್ದೇಶಕ ಸೂರಜ್ ಸರ್ಜಾ ಮೊದಲ ಬಾರಿಗೆ ಜ್ಯೂ.ಚಿರುನನ್ನು ಎತ್ತಿ ಮುದ್ದಾಡಿದ್ದಾರೆ. ಮೊದಲ ಬಾರಿಗೆ ಚಿರಂಜೀವಿ ಪುತ್ರನನ್ನು ಎತ್ತಿಕೊಂಡಿರುವ ಫೋಟೋವನ್ನು ಸೂರಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮೇಘನಾ ರಾಜ್ ಪ್ರೀತಿಯ ಪುತ್ರ ಜ್ಯೂ.ಚಿರು ಫೋಟೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತೆ. ಮೇಘನಾ ರಾಜ್ ಮುದ್ದಿನ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಸೂರಜ್ ಸರ್ಜಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜ್ಯೂ.ಚಿರು ಫೋಟೋವನ್ನು ಶೇರ್ ಮಾಡಿದ್ದಾರೆ.

  ಚಿರು-ಮೇಘನಾ ಪುತ್ರನಿಗೆ 7 ತಿಂಗಳು: ಅಭಿಮಾನಿ ರಚಿಸಿದ ಫೋಟೋ ವೈರಲ್ಚಿರು-ಮೇಘನಾ ಪುತ್ರನಿಗೆ 7 ತಿಂಗಳು: ಅಭಿಮಾನಿ ರಚಿಸಿದ ಫೋಟೋ ವೈರಲ್

  ಸೂರಜ್ ಸರ್ಜಾ ತೋಳಲ್ಲಿ ಮಲಗಿರುವ ಮುದ್ದಾದ ಜ್ಯೂ.ಚಿರು ಸೂರಜ್ ನನ್ನೇ ದಿಟ್ಟಿಸಿ ನೋಡುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಶೇರ್ ಮಾಡಿ ಸೂರಜ್, 'ನಾನು ನನ್ನ ಜೀವನದಲ್ಲಿ ಎಂದಿಗೂ ಮಗುವನ್ನು ಎತ್ತಿಕೊಂಡಿರಲಿಲ್ಲ. ಬಹುಶಃ ಮೊದಲ ಬಾರಿಗೆ ನಾನು ಹೆಚ್ಚಿನ ಸಂಪರ್ಕ ಹೊಂದಿದ್ದು, ನನ್ನದೇ ಎಂದು ಭಾವಿಸಿದೆ. (ನನ್ನ ಜ್ಯೂ.ಚಿರು ಜೊತೆ) ಎಂದು ಬರೆದುಕೊಂಡಿದ್ದಾರೆ.

  ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ಮೇಘನಾ ರಾಜ್, ಅವನು ನಿಮ್ಮ ಸ್ವಂತ ಸೂರಜ್. ಈ ಫೋಟೋವನ್ನು ತುಂಬಾ ಇಷ್ಟಪಟ್ಟೆ ಎಂದಿದ್ದಾರೆ. ಇನ್ನು ಅರ್ಜನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಹಾರ್ಟ್ ಇಮೋಜಿಯನ್ನು ಹಾಕಿದ್ದಾರೆ. ಸೂರಜ್ ಸರ್ಜಾ. ಚಿರಂಜೀವಿ ಸರ್ಜಾ ಅವರ ಚಿಕ್ಕಪ್ಪ ಕಿಶೋರ್ ಸರ್ಜಾ ಅವರ ಪುತ್ರ. ಚಿರಂಜೀವಿ ನಿಧನದ ಬಳಿಕ ಧ್ರುವ ಮತ್ತು ಚಿರಂಜೀವಿ ಸರ್ಜಾ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಭಾವುಕರಾಗಿದ್ದರು.

  ಮತ್ತೊಂದು ಮೈಲಿಗಲ್ಲು ತಲುಪಿದ ಉಪೇಂದ್ರ | Filmibeat Kannada

  ಜ್ಯೂ.ಚಿರುಗೆ ಸದ್ಯ 7 ತಿಂಗಳು. ಇತ್ತೀಚಿಗಷ್ಟೆ 6 ತಿಂಗಳ ಹುಟ್ಟುಹಬ್ಬವನ್ನು ಮೇಘನಾ ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಮುದ್ದಿನ ಮಗನ 6 ತಿಂಗಳ ಬರ್ತಡೇಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಮಗನ ಜೊತೆ ಇರುವ ಮುದ್ದಾದ ಫೋಟೋವನ್ನು ಮೇಘನಾ ಶೇರ್ ಮಾಡಿ ಸಂತಸ ಪಟ್ಟಿದ್ದರು.

  English summary
  Suraj Sarja shares Jr.Chiru photo. He says I have Never ever carried a baby in my life before.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X