»   » ಸುಮ್ ಸುಮ್ನೆ ರಾನಾ ದಗ್ಗುಬಾಟಿ ಬಗ್ಗೆ ರೂಮರ್ಸ್ ಹಬ್ಬಿಸಬೇಡಿ.!

ಸುಮ್ ಸುಮ್ನೆ ರಾನಾ ದಗ್ಗುಬಾಟಿ ಬಗ್ಗೆ ರೂಮರ್ಸ್ ಹಬ್ಬಿಸಬೇಡಿ.!

Posted By:
Subscribe to Filmibeat Kannada

''ಸುಮ್ ಸುಮ್ನೆ ರಾನಾ ದಗ್ಗುಬಾಟಿ ಬಗ್ಗೆ ರೂಮರ್ಸ್ ಹಬ್ಬಿಸಬೇಡಿ'' ಎಂದು ಕೇಳಿಕೊಳ್ಳುತ್ತಿರುವವರು ಬೇರೆ ಯಾರೂ ಅಲ್ಲ. ಸ್ವತಃ ರಾನಾ ದಗ್ಗುಬಾಟಿ ರವರ ತಂದೆ ಸುರೇಶ್ ಬಾಬು ದಗ್ಗುಬಾಟಿ.

ಟಾಲಿವುಡ್ ನಲ್ಲಿ ಸ್ಫೋಟಗೊಂಡಿರುವ 'ಡ್ರಗ್ಸ್ ಮಾಫಿಯಾ'ದಲ್ಲಿ ನಟ ರಾನಾ ದಗ್ಗುಬಾಟಿ ಹಾಗೂ ಅವರ ಸಹೋದರ ಅಭಿರಾಮ್ ಹೆಸರೂ ಇದೆ ಎಂಬ ಗುಲ್ಲು ತೆಲುಗು ಸಿನಿ ಅಂಗಳದಾದ್ಯಂತ ಹಬ್ಬಿದೆ.

Suresh Babu denies Rana's involvement in Tollywood Drug Scandal

ಇದನ್ನ ಕೇಳಿ ಬೇಸರಗೊಂಡಿರುವ ತಂದೆ ಸುರೇಶ್ ಬಾಬು ದಗ್ಗುಬಾಟಿ, ''ಡ್ರಗ್ಸ್ ಮಾಫಿಯಾ' ವಿಚಾರವಾಗಿ ನಮ್ಮ ಇಡೀ ಕುಟುಂಬದಲ್ಲಿ ಯಾರಿಗೂ ನೋಟೀಸ್ ಬಂದಿಲ್ಲ. ಸುಮ್ ಸುಮ್ನೆ ಇಂತಹ ರೂಮರ್ಸ್ ಹಬ್ಬಿಸಬೇಡಿ'' ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Suresh Babu denies Rana's involvement in Tollywood Drug Scandal

''ಕೆಲವರು ಬೇಕು ಅಂತ ನನ್ನ ಮಕ್ಕಳ ಹೆಸರನ್ನು 'ಡ್ರಗ್ಸ್ ಮಾಫಿಯಾ' ವಿಚಾರದಲ್ಲಿ ಎಳೆದು ತರುತ್ತಿದ್ದಾರೆ. ಆದ್ರೆ, ರಾನಾ ಹಾಗೂ ಅಭಿರಾಮ್ ಗೂ 'ಡ್ರಗ್ಸ್ ಮಾಫಿಯಾ'ಗೂ ಯಾವುದೇ ಸಂಬಂಧ ಇಲ್ಲ'' ಎಂದಿದ್ದಾರೆ ಸುರೇಶ್ ಬಾಬು ದಗ್ಗುಬಾಟಿ.

English summary
Producer Suresh Babu Daggubati has condemned rumours of his son's (Rana Daggubati and Abhiram Daggubati) involvement in Drug Scandal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada