ಸರ್ಜಿಕಲ್ ಸ್ಟ್ರೈಕ್ 2 : ಭಾರತೀಯ ವಾಯುಸೇನೆಗೆ ಸೆಲ್ಯೂಟ್ ಹೊಡೆದ ಸ್ಟಾರ್ ಗಳು

ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆ ಘಟನೆಯಾದ 11 ದಿನಕ್ಕೆ ಸರಿಯಾಗಿ ಭಾರತೀಯ ವಾಯುಪಡೆಯೂ ಉಗ್ರರ ಮೇಲೆ ಪ್ರತಿ ದಾಳಿ ಮಾಡಿ ಸರಿಯಾದ ಉತ್ತರ ನೀಡಿದೆ.

ಭಾರತೀಯ ವಾಯುಪಡೆ ಇಂದು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ಮಾಡಲಾಗಿದೆ. ಭಾರತೀಯ ವಾಯುಪಡೆಯ ಈ ನಡೆ ಕಂಡು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. 'How was the josh?' ಎಂದು ಜೈಕಾರ ಹಾಕುತ್ತಿದ್ದಾರೆ.

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸಂಜಯ್ ದತ್, ಸೂನು ಸೂದ್, ಸುನೀಲ್ ಶೆಟ್ಟಿ, ಕನ್ನಡದ ನಟರಾದ ಧ್ರುವ ಸರ್ಜಾ, ಗಣೇಶ್ ಟಾಲಿವುಡ್ ನಾಯಕರಾದ ಜೂನಿಯರ್ ಎನ್ ಟಿ ಆರ್, ಮಹೇಶ್ ಬಾಬು ಹೀಗೆ ಸಾಕಷ್ಟು ನಟರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

ಭಾರತೀಯ ವಾಯುಪಡೆಯ ಬಗ್ಗೆ ಹೆಮ್ಮೆ ಆಗುತ್ತಿದೆ - ಅಕ್ಷಯ್ ಕುಮಾರ್

ಭಾರತೀಯ ವಾಯುಪಡೆಯ ಪ್ರತೀಕಾರದ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್ ''Proud of our #IndianAirForce fighters for destroying terror camps. अंदर घुस के मारो ! Quiet no more! #IndiaStrikesBack'' ಎಂದು ಬರೆಯುವ ಮೂಲಕ ಭಾರತೀಯ ವಾಯುಪಡೆ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದಿದ್ದಾರೆ.

ಜೈ ಹಿಂದ್ - ಗಣೇಶ್

''ನಮ್ಮ ಭಾರತದ ವಾಯುಪಡೆ ಉಗ್ರರನ್ನು ನಾಶ ಮಾಡಲು ದಾಳಿ ಮಾಡಿದೆ. ಜೈ ಹಿಂದ್. ನಮ್ಮ ವಾಯುಪಡೆ ಬಗ್ಗೆ ಹೆಮ್ಮೆ ಇದೆ.'' - ಗಣೇಶ್, ನಟ

ಬ್ಲಾಸ್ ಆಗೋಯ್ತಿರಾ - ಧ್ರುವ ಸರ್ಜಾ

''ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ ಮಾಕ್ಳಾ ಬ್ಲಾಸ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ. ಜೈ ಆಂಜನೇಯ'' - ಧ್ರುವ ಸರ್ಜಾ

How is the josh? - ಶಶಾಂಕ್

''How is the josh? High sir. How is the jaishe? Dead sir.'' ಎಂದು ಬರೆಯುವ ಮೂಲಕ ನಿರ್ದೇಶಕ ಶಶಾಂಕ್ ಭಾರತಾಂಬೆಗೆ ಜೈಕಾರ ಹಾಕಿದ್ದಾರೆ. 'ಕೆಜಿಎಫ್' ನಿರ್ಮಾಪಕ ವಿಜಯ್ ಕಿರಗದೂರು ಸಹ ''ಭಾರತೀಯ ವಾಯುಪಡೆಯ ಧೈರ್ಯವಾದ ಹೃದಯಕ್ಕೆ ಸೆಲ್ಯೂಟ್. ಜೈ ಹಿಂದೆ'' ಎಂದಿದ್ದಾರೆ.

ಧೈರ್ಯವಂತ ಹೀರೋಗಳು - ಕಾಜಲ್ ಅಗರ್ವಾಲ್

'ನಟ ಸಾರ್ವಭೌಮ' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನುಪಮ ಪರಮೇಶ್ವರನ್ ಇಂಡಿಯನ್ ಏರ್ ಫೋರ್ಸ್ ಗೆ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ನಟಿ ಕಾಜಲ್ ಅಗರ್ವಾಲ್ ''ಭಾರತ ಈಗ ಹಿಂತಿರುಗಿಸಿ ಉತ್ತರ ಕೊಟ್ಟಿದೆ. ನಮ್ಮ ಧೈರ್ಯವಂತ ಹೀರೋಗಳಾದ ಭಾರತೀಯ ವಾಯುಪಡೆಗೆ ದೊಡ್ಡ ಸೆಲ್ಯೂಟ್'' ಎಂದಿದ್ದಾರೆ.

ಸರಿಯಾಗಿ ಪ್ರತಿ ಉತ್ತರ - ಜೂನಿಯರ್ ಎನ್ ಟಿ ಆರ್

''ನಮ್ಮ ದೇಶ ಸರಿಯಾಗಿ ಪ್ರತಿ ಉತ್ತರ ನೀಡಿದೆ ''ಎಂದು ನಟ ಜೂನಿಯರ್ ಎನ್ ಟಿ ಆರ್ ಟ್ವೀಟ್ ಮಾಡಿದ್ದಾರೆ. ನಟ ಮಹೇಶ್ ಬಾಬು ''ನಮ್ಮ ಇಂಡಿಯನ್ ಏರ್ ಫೋರ್ಸ್ ಬಗ್ಗೆ ತುಂಬ ಹೆಮ್ಮೆ ಆಗುತ್ತದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಾಕಷ್ಟು ಸ್ಟಾರ್ ಗಳ ಟ್ವೀಟ್

ಖ್ಯಾತ ಟಾಲಿವುಡ್ ನಿರ್ದೇಶಕ ರಾಜಮೌಳಿ, ಬಾಲಿವುಡ್ ನಟರಾದ ಸಂಜಯ್ ದತ್, ಸೂನು ಸೂದ್, ನಟಿ ರವೀನಾ ಟಂಡನ್, ಸಂಗೀತ ನಿರ್ದೇಶಕ ಗುರುಕಿರಣ್, ನಟಿ ತಮನ್ನಾ ಭಾಟಿಯಾ, 'ಪೈಲ್ವಾನ್' ನಾಯಕಿ ಅಕಾಂಕ್ಷ ಸಿಂಗ್, ನಟಿ ಆಕಾಂಕ್ಷ ಪುರೋಹಿತ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಕಲಾವಿದರು ಭಾರತೀಯ ವಾಯುಪಡೆಯ ಕಾರ್ಯಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ.

More from Filmibeat

English summary
Surgical Strike 2 : Indian movie stars tweets about Indian air force. IAF sources say, India drops 1000 Kg bombs on terror camps across the LoC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X