»   » ಕಾಣದ ಕೈಗೊಂದು ನಮಸ್ಕಾರ ಹೇಳಿದ ಸುಕ್ಕಾ ಸೂರಿ

ಕಾಣದ ಕೈಗೊಂದು ನಮಸ್ಕಾರ ಹೇಳಿದ ಸುಕ್ಕಾ ಸೂರಿ

Posted By:
Subscribe to Filmibeat Kannada

ಟಗರು ಟಗರು ಟಗರು ಎಲ್ಲರ ಬಾಯಲ್ಲೂ ಇದೇ ಸುದ್ದಿ. ಚಿತ್ರ ಬಿಡುಗಡೆ ಆಗಿ ಐದು ದಿನಗಳು ಕಳೆದು ಹೋಗಿವೆ. ರಿಲೀಸ್ ಆದ ದಿನದ ರೀತಿಯಲ್ಲೇ ಎಲ್ಲೆಡೆ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಜೊತೆಯಲ್ಲೇ ಕೆಲ ಅಭಿಮಾನಿಗಳು ಸಿನಿಮಾದ ಸಂಭಾಷಣೆ ವಿಚಾರವಾಗಿ ವಿವಾದವನ್ನು ಸೃಷ್ಠಿ ಮಾಡಿದ್ದಾರೆ.

ಸಿನಿಮಾ ಯಶಸ್ಸು ಪಡೆದುಕೊಂಡಿರುವ ಖುಷಿಯಲ್ಲಿ ಸಿನಿಮಾತಂಡ ಇದೆ. ಇದೇ ಸಂಭ್ರಮದಲ್ಲಿ ಪ್ರೇಕ್ಷಕ ಮಹಾಪ್ರಭುವಿಗೆ ನಿರ್ದೇಶಕ ಸೂರಿ ಧನ್ಯವಾದ ತಿಳಿಸಿದ್ದಾರೆ. ಅವರದ್ದೇ ಶೈಲಿಯಲ್ಲಿ ಪತ್ರದ ಮುಖೇನ ಅಭಿಮಾನಿಗಳಿಗೆ ತಲುಪಿದ್ದಾರೆ. ಸೂರಿ ಬರೆದಿರುವ ಪತ್ರ ಯಾವುದು?

ಶಿವಣ್ಣನ 'ಟಗರು' ನೋಡಲಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿ

ಪತ್ರದಲ್ಲಿ ಏನೆಲ್ಲಾ ವಿಚಾರವನ್ನ ಚರ್ಚೆ ಮಾಡಿದ್ದಾರೆ? ಪತ್ರ ಬರೆಯುವ ಉದ್ದೇಶವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಸೂರಿ ಅವರ ಮನದಾಳದ ಮಾತುಗಳು ಅಕ್ಷರ ರೂಪದಲ್ಲಿ ಹಾಳೆ ಮೇಲೆ ಚಿತ್ತಾರವಾಗಿದ್ದು ಹೀಗೆ. ಮುಂದೆ ಓದಿ

ಮಮತೆಗೆ ಋಣಿ ಎಂದ ನಿರ್ದೇಶಕ

ಟಗರು ಸಿನಿಮಾ ಯಶಸ್ವಿ ಆದ ಹಿನ್ನಲೆಯಲ್ಲಿ ನಿರ್ದೇಶಕ ಸೂರಿ ಪ್ರೇಕ್ಷಕರಿಗೆ ಪತ್ರ ಬರೆದಿದ್ದಾರೆ. ಕಾಣದ ಕೈಗೊಂದು ನಮಸ್ಕಾರ ಎಂದು ಮಾತನ್ನ ಶುರು ಮಾಡಿ ಸತ್ಯಕ್ಕೆ ಸಂಭ್ರಮವಿಲ್ಲ ಅದು ನಿತ್ಯ ಸತ್ಯ ಹಾಗೆಯೇ ಸಿನಿಮಾ ಎಂದಿದ್ದಾರೆ.

ತೀರ್ಪು ಕೊಟ್ಟ ಪ್ರೇಕ್ಷಕರ

ಶ್ರಮ ಪಟ್ಟು ಮಾಡಿರುವ ಸಿನಿಮಾಗೆ ತೀರ್ಪುಕೊಟ್ಟಿರುವ ಪ್ರೇಕ್ಷಕನಿಗೆ ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ಬಿಡುಗಡೆ ಆದ ದಿನದ ಅನುಭವವನ್ನ ಪತ್ರದ ಮೂಲಕ ಹಂಚಿಕೊಂಡಿದ್ದಾರೆ ಸೂರಿ.

ಹೊಸ ಸಿನಿಮಾದ ಧಾವಂತ

ಟಗರು ಸಿನಿಮಾವನ್ನ ಪ್ರತಿ ಪ್ರೇಕ್ಷಕರು ಅವರದ್ದೇ ಆದ ರೀತಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರ ನೋಡಿ ಆತ್ಮೀಯತೆಯಿಂದ ಮಾತನಾಡುತ್ತಿದ್ದಾರೆ ಅದು ಸೂರಿ ಅವರಿಗೆ ಸಿನಿಮಾ ಮೇಲಿನ ನಂಬಿಕೆ ದುಪ್ಪಟ್ಟು ಮಾಡಿದ್ಯಂತೆ. ಮತ್ತೊಂದು ಹೊಸ ಹಾಗೂ ವಿಭಿನ್ನ ಚಿತ್ರಕ್ಕೆ ಮುಂದಾಗಬೇಕು ಎನ್ನಿಸಿದ್ಯಂತೆ.

ಹೊರ ರಾಜ್ಯದಲ್ಲೂ ಟಗರು ದರ್ಬಾರ್

ಇತ್ತ ಪತ್ರದ ಮೂಲಕ ಅಭಿಮಾನಿಗಳಿಗೆ ನಿರ್ದೇಶಕರು ಧನ್ಯವಾದ ತಿಳಿಸುತ್ತಾರೆ. ಅತ್ತ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

English summary
Kannada director Suri wrote letter to fans of the Tagaru film, suri said Thank you to the audience for the success of the film. Tagaru movie is getting good response everywhere

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada