'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?

Recommended Video

ಡಿ ಬಾಸ್ ಚಿತ್ರದಲ್ಲಿರೋ ಹಾಸ್ಯ ನಟ ಯಾರು? | DARSHAN | CHIKANNA | ROBERT | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಂದ ಈ ಪೋಸ್ಟರ್ನಲ್ಲಿ ಡಿ ಬಾಸ್ ಆಂಜನೇಯನ ಅವತಾರವೆತ್ತಿದ್ದಾರೆ.

ರಾಮನ ಅವತಾರದಂತೆ ಬಾಲಕನನ್ನು ಹೆಗಲು ಮೇಲೆ ಕೂರಿಸಿಕೊಂಡಿರುವ ದರ್ಶನ್, ಆಂಜನೇಯನಂತೆ ಗದೆ ಹಿಡಿದು ಕೂತಿದ್ದಾರೆ. ಈ ಪೋಸ್ಟರ್ ರಾಬರ್ಟ್ ಚಿತ್ರದ ಬಗ್ಗೆ ಇದ್ದ ಕುತೂಹಲವನ್ನ ಬೆಟ್ಟದಷ್ಟು ಹೆಚ್ಚಿಸಿದೆ.

ಆದ್ರೆ, ಇದೇ ಪೋಸ್ಟರ್ನಲ್ಲಿ ದರ್ಶನ್ ಮತ್ತು ಪುಟ್ಟ ಬಾಲಕನನ್ನು ಬಿಟ್ಟು ಮತ್ತೊಬ್ಬ ಸ್ಟಾರ್ ನಟ ಕಾಣಿಸಿಕೊಂಡಿದ್ದಾನೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಈ ಪೋಸ್ಟರ್ ನಲ್ಲಿ ಮತ್ತೊಬ್ಬ ನಟ ಇದ್ದಾನೆ. ಯಾರದು? ಮುಂದೆ ಓದಿ....

ಜನಗಳ ಮಧ್ಯೆ ನಿಂತಿರುವ ನಟ ಯಾರು?

ಜನಗಳ ಮಧ್ಯೆ ನಿಂತಿರುವ ನಟ ಯಾರು?

ಆಂಜನೇಯನ ಅವತಾರದಲ್ಲಿ ದರ್ಶನ್, ಅವರ ಹೆಗಲ ಮೇಲೆ ರಾಮನ ಅವತಾರದಲ್ಲಿ ಪುಟ್ಟ ಬಾಲಕ. ಒಂದು ಕಡೆ ರಾವಣನ ಕಟೌಟ್, ಇನ್ನೊಂದು ಕಡೆ ರಾಮನ ಕಟೌಟ್. ಇದರ ಮಧ್ಯೆ ನೂರಾರು ಸಂಖ್ಯೆಯಲ್ಲಿ ಮಹಿಳಾ ಡ್ಯಾನ್ಸರ್ ಗಳು. ಇಷ್ಟು ಜನರ ಮಧ್ಯೆ ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ಒಬ್ಬ ನಟ ಇದ್ದಾನೆ ಗಮನಿಸಿ.

ಡಿ ಬಾಸ್ ಚಿತ್ರದಲ್ಲಿ ಹಾಸ್ಯ ನಟ

ಡಿ ಬಾಸ್ ಚಿತ್ರದಲ್ಲಿ ಹಾಸ್ಯ ನಟ

ಈ ಪೋಸ್ಟರ್ ನಲ್ಲಿ ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಕೂಡ ಇದ್ದಾರೆ. ಇದನ್ನು ಅನೇಕರು ಗಮನಿಸಿಲ್ಲ. ಗಮನಿಸಿದವರಿಗೆ ಇದು ಸರ್ಪ್ರೈಸ್ ಆಗಿದೆ. ಅಂದ್ಹಾಗೆ, ರಾಬರ್ಟ್ ಚಿತ್ರದಲ್ಲಿ ಚಿಕ್ಕಣ್ಣ ಕೂಡ ನಟಿಸಿದ್ದಾರೆ ಎನ್ನುವುದು ಖಚಿತವಾಗಿದೆ.

ಕಥೆಯ ಬಗ್ಗೆ ಹೆಚ್ಚಿದ ಕುತೂಹಲ

ಕಥೆಯ ಬಗ್ಗೆ ಹೆಚ್ಚಿದ ಕುತೂಹಲ

ರಾಬರ್ಟ್ ಚಿತ್ರದ ಕಥೆಯ ಬಗ್ಗೆ ಕುತೂಹಲ ಹೆಚ್ಚಿದೆ. ಶೀರ್ಷಿಕೆಯಲ್ಲಿರುವ ದರ್ಶನ್ ರಾಬರ್ಟ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಪಕ್ಕಾ. ಈ ನಡುವೆ ತ್ರಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಎರಡನೇ ಪೋಸ್ಟರ್ ನಲ್ಲಿ ದರ್ಶನ್ ಆಂಜನೇಯನ ಅವತಾರವೆತ್ತಿದ್ದಾರೆ. ವಾರಣಾಸಿಯಲ್ಲಿ ಶೂಟಿಂಗ್ ಆಗಿದೆ. ರಾಮ, ಆಂಜನೇಯ, ರಾಬರ್ಟ್ ಕಥೆಯಲ್ಲಿದೆ. ಇದೆಲ್ಲವನ್ನು ಗಮನಿಸದಾಗ ಪ್ರೇಕ್ಷಕರ ಥ್ರಿಲ್ ಹೆಚ್ಚಾಗಿದೆ.

ಸಮ್ಮರ್ ಗೆ ರಾಬರ್ಟ್!

ಸಮ್ಮರ್ ಗೆ ರಾಬರ್ಟ್!

ಸಮ್ಮರ್ ವಿಶೇಷವಾಗಿ ರಾಬರ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಇದನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ 9 ರಂದು ರಾಬರ್ಟ್ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆಯಂತೆ.

ರಾಬರ್ಟ್ ಗೆ ಆಶಾ ಭಟ್ ಜೋಡಿ

ರಾಬರ್ಟ್ ಗೆ ಆಶಾ ಭಟ್ ಜೋಡಿ

ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು ಖಳನಟರಾಗಿದ್ದಾರೆ. ಮುಂಬೈ ಮೂಲದ ಬಾಲನಟ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿಕ್ಕಣ್ಣನ ಕಾಮಿಡಿ ಇರಲಿದೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.

More from Filmibeat

English summary
Challenging star Darshan starrer Robert movie motion poster released in sankranthi special. here is the surprise in poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X