'ನಿನ್ನ ದೇಹದ ಬಗ್ಗೆ ಇಂಚಿಂಚೂ ತಿಳಿಯಬೇಕು' ಎಂದಿದ್ದನಂತೆ ಸೌತ್ ನಿರ್ದೇಶಕ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದ 'ಪರಮೇಶ ಪಾನಾವಾಲಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸುರ್ವೀನ್ ಚಾವ್ಲಾ ತಮಿಳು, ಹಿಂದಿ, ಪಂಜಾಬಿ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ಇತ್ತೀಚಿಗಷ್ಟೆ ಹಿಂದಿ ವೆಬ್ ಸೈಟ್ ಗೆ ಸುರ್ವೀನ್ ಚಾವ್ಲಾ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನ ಬಹಿರಂಗಪಡಿಸಿದ್ದಾರೆ.
ಅದರಲ್ಲೂ ಸೌತ್ ಇಂಡಸ್ಟ್ರಿಯಲ್ಲಿ ನಿರ್ದೇಶಕನೊಬ್ಬ ನಡೆದುಕೊಂಡ ರೀತಿ ಬಗ್ಗೆ ಸುರ್ವೀನ್ ಭಾರಿ ಬೇಸರ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಚಿತ್ರರಂಗದ ನಿರ್ದೇಶಕರೊಬ್ಬರು 'ನಿನ್ನ ದೇಹದ ಬಗ್ಗೆ ಇಂಚಿಂಚೂ ತಿಳಿಯಬೇಕು' ಎಂದು ನಟಿಯ ಬಳಿ ಬೇಡಿಕೆ ಇಟ್ಟಿದ್ದನಂತೆ. ಅಷ್ಟಕ್ಕೂ, ಯಾರು ನಿರ್ದೇಶಕ?

ಐದು ಸಲ ಕಾಸ್ಟಿಂಗ್ ಕೌಚ್ ಘಟನೆ ಎದುರಾಗಿದೆ
2008ರಲ್ಲಿ ಸಿನಿ ಜರ್ನಿ ಆರಂಭಿಸಿದ್ದ ಸುರ್ವೀನ್ ಚಾವ್ಲಾ 2014ರಲ್ಲಿ ತೆರೆಕಂಡಿದ್ದ 'ಹೇಟ್ ಸ್ಟೋರಿ-2' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡರು. ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೂ ಐದು ಸಲ ಕಾಸ್ಟಿಂಗ್ ಕೌಚ್ ಘಟನೆಗಳನ್ನ ಎದುರಿಸಿದ್ದಾರಂತೆ ಈ ನಟಿ. ಮೂರು ಸಲ ಸೌತ್ ಇಂಡಸ್ಟ್ರಿಯಲ್ಲಿ, ಎರಡು ಸಲ ಬಾಲಿವುಡ್ ನಲ್ಲಿ ಕೆಟ್ಟ ಅನುಭವ ಎದುರಿಸಿದ್ದರಂತೆ.

ಎದೆ ಭಾಗ ನೋಡಬೇಕು ಎಂದಿದ್ದರಂತೆ
ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದ ನಟಿ ''ನಿನ್ನ ಎದೆ ಭಾಗ ಹೇಗೆ ಕಾಣುತ್ತೆ ಎಂದು ನೋಡಬೇಕು ಎಂದು ಕೇಳಿದ್ದ. ಇನ್ನೊಬ್ಬ ನಿರ್ದೇಶಕ ನಿಮ್ಮ ತೊಡೆ ಹೇಗೆ ಕಾಣುತ್ತೆ ನೋಡೋಣ ಎಂದು ಕೇಳಿದ್ದ. ಇನ್ನೊಂದು ಚಿತ್ರಕ್ಕೆ ಆಡಿಷನ್ ಗೆ ಹೋದಾಗ ''ನೀವು ಹೆಚ್ಚು ತೂಕ ಇದ್ದೀಯಾ ಎಂದು ಕೇಳಿದ್ದರು. ನಾನು ಕೇವಲ 56 ಕೆಜಿ ತೂಕ ಇದ್ದೆ ಅಷ್ಟೆ'' ಎಂದು ಹಳೆ ಘಟನೆಗಳನ್ನ ನೆನಪಿಸಿಕೊಂಡರು.

ದಕ್ಷಿಣದಲ್ಲಿ ಆ ನಿರ್ದೇಶಕ....
ಇನ್ನು ಸೌತ್ ಇಂಡಸ್ಟ್ರಿ ನಿರ್ದೇಶಕನೊಬ್ಬ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿರುವಾಗ ''ನಿಮ್ಮ ದೇಹದ ಪ್ರತಿಯೊಂದು ನೋಡಬೇಕು'' ಎಂದು ಕೇಳಿದ್ದನಂತೆ. ಈ ಮಾತು ಕೇಳಿ ಸುರ್ವೀನ್ ಚಾವ್ಲಾ ಒಂದು ಕ್ಷಣ ದಂಗಾದರಂತೆ. ಆಮೇಲೆ ಆ ಸಿನಿಮಾ ಮಾಡಲ್ಲ ಎಂದು ಕೈಬಿಟ್ಟೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಮುಂಬೈಗೆ ಬಾ' ಎಂದು ಆಫರ್
ತಮಿಳಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ನಿರ್ದೇಶಕರೊಬ್ಬರು ಆಡಿಷನ್ ತಗೊಂಡಿದ್ದರು. ಎಲ್ಲ ರೀತಿಯ ಅಭಿನಯವನ್ನ ಮಾಡಿದೆ. ಸುಮಾರು ಹೊತ್ತು ಆಡಿಷನ್ ಕೊಟ್ಟೆ. ಅದರಿಂದ ಸಹಜವಾಗಿ ಆಯಾಸವಾಗಿತ್ತು. ಆದರೆ ಆ ನಿರ್ದೇಶಕ ''ಮುಂಬೈಗೆ ಬಾ'' ಎಂದು ಆಫರ್ ಮಾಡಿದ್ರು. ಅಷ್ಟು ದೊಡ್ಡ ಸಮಯ ಆಡಿಷನ್ ಮುಗಿದ ಮೇಲೂ ಮುಂಬೈಗೆ ಕರೆಯುವ ಅವಶ್ಯಕತೆ ಇರಲಿಲ್ಲ'' ಎಂದು ಸುರ್ವೀನ್ ಚಾವ್ಲಾ ಬಹಿರಂಗಪಡಿಸಿದ್ದಾರೆ.


Click it and Unblock the Notifications











