Survivor: ಕ್ಯಾನ್ಸರ್ ಗೆದ್ದ ಶಿವಣ್ಣ; ಶಸ್ತ್ರ ಚಿಕಿತ್ಸೆಯ ಆ ಕ್ಷಣಗಳು ಹೇಗಿದ್ದವು?

ಒಂದೂವರೆ ವರ್ಷದ ಹಿಂದೆ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಕೇಳಿಬಂದಿತ್ತು. ಶಿವಣ್ಣ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಆಪ್ತರಿಗೆ ಅಭಿಮಾನಿಗಳಿಗೆ ಆತಂಕ ತಂದಿತ್ತು. ಆದರೆ ವಿದೇಶದಲ್ಲಿ ಚಿಕಿತ್ಸೆ ಪಡೆದು ಶಿವಣ್ಣ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು. ಈ ಹೋರಾಟದ ಜರ್ನಿಯನ್ನು 'ಸರ್ವೈವರ್' ಎಂಬ ಡಾಕ್ಯುಮೆಂಟರಿ ಮೂಲಕ ಕಟ್ಟಿಕೊಡಲಾಗುತ್ತಿದೆ.

ಶೀಘ್ರದಲ್ಲೇ 'ಸರ್ವೈವರ್' ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ ಡಾಕ್ಯುಮೆಂಟರಿ ಪ್ರೋಮೊ ಹೊರಬಂದಿದೆ. ಶಿವಣ್ಣ ವಿದೇಶದಲ್ಲಿ ಚಿಕಿತ್ಸೆ ಪಡೆದ ಒಂದಷ್ಟು ದೃಶ್ಯಗಳು ಅದರಲ್ಲಿದೆ. ಸುದೀಪ್, ನಾಗಾರ್ಜುನ್, ಕಮಲ್ ಹಾಸನ್ ಸೇರಿ ಸಾಕಷ್ಟು ಕಲಾವಿದರು ಶಿವಣ್ಣನ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ಮಾತನಾಡಿದ್ದಾರೆ. ಶಿವಣ್ಣನ ಧೈರ್ಯ, ಹೋರಾಟ ಮನೋಭಾವದ ಬಗ್ಗೆ ಹಂಚಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ಸ್ವತಃ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

Survivor documentary Shivarajkumar s Inspiring Fight Against Cancer Promo Out on Birthday

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಈ ಬಾರಿ ಅರ್ಥಪೂರ್ಣವಾಗಿ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಒಂದಷ್ಟು ಹೊಸ ಚಿತ್ರಗಳ ಅಪ್‌ಡೇಟ್ ಸಿಕ್ಕಿದೆ. 'ಸರ್ವೈವರ್' ಡಾಕ್ಯುಮೆಂಟರಿಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಕ್ಯಾನ್ಸರ್ ಎಂದಾಗ ಎಂತಹವರು ಒಂದು ಕ್ಷಣ ಶಾಕ್ ಆಗುತ್ತಾರೆ. ಎಂತಹವರ ಜಂಘಾಬಲವು ಉಡುಗಿ ಹೋಗುತ್ತದೆ.

ಶಿವಣ್ಣ ಇಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಗೊತ್ತಾದಾಗ ಅಭಿಮಾನಿಗಳು ಆತಂಕಗೊಂಡಿದ್ದರು. ಅವತ್ತು ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುವಾಗ ಅಭಿಮಾನಿಗಳು ಕಣ್ಣೀರಾಕಿದ್ದರು. ಅಭಿಮಾನಿಗಳ ನೋವು ಕಂಡು ಶಿವಣ್ಣನ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. 2024ರ ಮಧ್ಯಭಾಗದಲ್ಲಿ ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿತ್ತು. ಸಾಕಷ್ಟು ಪರೀಕ್ಷೆಗಳ ಬಳಿಕ ಅವರು ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಗೊತ್ತಾಗಿತ್ತು.

ಕ್ಯಾನ್ಸರ್ ಎನ್ನುವ ವಿಚಾರ ಕೆಲ ದಿನಗಳ ಕಾಲ ಗುಟ್ಟಾಗಿಯೇ ಇತ್ತು. ಕೆಲ ದಿನ ಸಿನಿಮಾ ಕೆಲಸಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು. ಬಳಿಕ ಸ್ವತಃ ಶಿವಣ್ಣ ಈ ಬಗ್ಗೆ ಹೇಳಿಕೊಂಡಿದ್ದರು. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಸೆಂಬರ್ 24, 2024 ರಂದು ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಡಾ. ಮುರುಗೇಶ್ ಮನೋಹರನ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಕಿಮೊಥೆರಪಿ ಮಾಡಲಾಗಿತ್ತು. ಬಳಿಕ ಕೆಲ ಪರೀಕ್ಷೆಗಳನ್ನು ನಡೆಸಿ ಶಿವಣ್ಣ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಬಗ್ಗೆ ವೈದ್ಯರು ಘೋಷಣೆ ಮಾಡಿದ್ದರು.

ಹೆಚ್ಚು ಕಮ್ಮಿ ಒಂದು ತಿಂಗಳ ಕಾಲ ಶಿವಣ್ಣ ಕುಟುಂಬ ಸಮೇತ ಅಮೆರಿಕಾದಲ್ಲಿ ಇದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಕೆಲ ಸಮಯ ಅಲ್ಲೇ ವಿಶ್ರಾಂತಿ ಪಡೆದಿದ್ದರು. ಬೆಂಗಳೂರಿಗೆ ಬಂದು ಕೊಂಚ ವಿಶ್ರಾಂತಿ ಪಡೆದ ನಂತರ ಎಂದಿನಂತೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಿಸಿಕೊಂಡಿದ್ದರು. ಮೊದಲಿನಂತೆ ಮತ್ತೆ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಕ್ಷನ್, ಡಬ್ಬಿಂಗ್, ಡ್ಯಾನ್ಸ್ ಎಲ್ಲಾ ಮಾಡುತ್ತಿದ್ದಾರೆ.

ಸಿನಿಮ್ಯಾಟಿಕ್ ಆಗಿ ಹೇಳ್ಬೇಕು ಅಂದ್ರೆ, ಇದು ಕಿತ್ತಾಕ್ತೀವಿ, ಇದು ಸೇರಿಸ್ತೀವಿ.. ಅದನ್ನು ಒಲಿತ್ತೀವಿ.. ಅದು ಇದು ಸೇರಿಸಿ.. ಕೊನೆಗೆ ಒಲಿದುಬಿಡ್ತೀವಿ.. ಹಿಂಗೆ ವೈದ್ಯರು ಹೇಳಿದ್ರು ಎಂದು ಶಿವಣ್ಣ ತಮ್ಮ ಶಸ್ತ್ರ ಚಿಕಿತ್ಸೆ ಬಗ್ಗೆ ಹೇಳಿರುವ ಮಾತುಗಳು ವೈರಲ್ ಆಗ್ತಿದೆ. ಅದನ್ನು ಕೇಳಿ ಪತ್ನಿ ಗೀತಾ ಹಾಗೂ ಮಗಳು ನಿವೇದಿತಾ ನಕ್ಕಿದ್ದಾರೆ.

ಶಿವಣ್ಣ ಅಂದ್ರೆ ಎನರ್ಜಿ, ಜೋಶ್.. ವಯಸ್ಸು 60 ದಾಟಿದ್ರು 20ರ ಯುವಕರನ್ನು ನಾಚಿಸುವಂತೆ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ತೆರೆಮೇಲೆ ಕಾಣುತ್ತಾರೆ. ನಿಜ ಜೀವನದಲ್ಲೂ ಅಷ್ಟೇ ಎನರ್ಜಿ ಇರುತ್ತದೆ. ಅದೇ ಧೈರ್ಯ, ಮನೋಸ್ಥೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ಅವರು ಗೆದ್ದಿದ್ದಾರೆ. ತಮ್ಮ ಹೋರಾಟದ ಕಥೆಯ ಮೂಲಕ ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬಲು 'ಸರ್ವೈವರ್' ಡಾಕ್ಯುಮೆಂಟರಿ ತಯಾರಿಸುತ್ತಿದ್ದಾರೆ. ಪ್ರದೀಪ್ ಶಾಸ್ತ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Read more about: shivarajkumar kannada actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X