ಅಂದು ಅಕ್ಷಯ್ ಕುಮಾರ್ ಜೊತೆಗಿನ ಸಿನಿಮಾ ಮಧ್ಯದಲ್ಲೇ ಬಿಟ್ಟಿದ್ದರು ಸುಶ್ಮಿತಾ ಸೇನ್!
ಮಾಜಿ ವಿಶ್ವ ಸುಂದರಿ ಮತ್ತು ಖ್ಯಾತ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಪ್ರಸ್ತುತ 'ತಾಲಿ' ವೆಬ್ ಸೀರಿಸ್‌ನಲ್ಲಿನ ಅತ್ಭುತ ಅಭಿನಯದಿಂದ ಸಿನಿಪ್ರಿಯರ ಮನ ಗೆದ್ದಿದ್ದಾರೆ. ತಾಲಿಯಲ್ಲಿನ ನಟನೆಗೆ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದ್ದಾರೆ. ಜೊತೆಗೆ ತಮ್ಮ ತೆಕ್ಕೆಯಲ್ಲಿ ಹಲವು ಸಿನಿಮಾಗಳನ್ನು ತುಂಬಿಕೊಂಡಿದ್ದಾರೆ.
ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ನಟಿ ಸುಶ್ಮಿತಾ ಸೇನ್, ಕಷ್ಟದ ಸಮಯದಲ್ಲಿಯೂ ಎದೆಗುಂದದ ಧೈರ್ಯದಿಂದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಒಮ್ಮೆ ಅಕ್ಷಯ್ ಕುಮಾರ್ ಚಿತ್ರವನ್ನು ಮಧ್ಯದಲ್ಲಿ ಬಿಟ್ಟು ಬಂದಿದ್ದು, ನಂತರ ತಮ್ಮ ವೃತ್ತಿಜೀವನ ಅಂತ್ಯವಾಗಲಿದೆ ಎಂದುಕೊಂಡಿದ್ದರ ಬಗ್ಗೆ ವಿವರಿಸಿದ್ದಾರೆ.

ಮಗಳಿಗಾಗಿ ಅಕ್ಷಯ್ ಕುಮಾರ್ ಚಿತ್ರವನ್ನು ಬಿಟ್ಟ ಸುಶ್ಮಿತಾ ಸೇನ್!
ಮೊಜೊ ಸ್ಟೋರಿಯಲ್ಲಿ ಬರ್ಖಾ ಸಿಂಗ್ ಅವರೊಂದಿಗಿನ ಅವರ ಇತ್ತೀಚಿನ ಸಂಭಾಷಣೆಯಲ್ಲಿ, ನಟಿ ಸುಶ್ಮಿತಾ ಸೇನ್ ತನ್ನ ಹಿರಿಯ ಮಗಳು ರೆನೀ ಸೇನ್‌ಗಾಗಿ ಅಕ್ಷಯ್ ಕುಮಾರ್ ಅಭಿನಯದ ಚಲನಚಿತ್ರವನ್ನು ಮಧ್ಯದಲ್ಲಿಯೇ ಬಿಟ್ಟು ಬಿಡಬೇಕಾದ ಘಟನೆಯ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ಜನಪ್ರಿಯ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ, ಆ ವೇಳೆ ತನ್ನ ಮಗಳು ರೆನೀ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ತಾನು ಚಿತ್ರೀಕರಣದಿಂದ ಮಧ್ಯದಲ್ಲಿಯೇ ಹೊರಟು ಬರಬೇಕಾಯಿತು ಎಂದು ಹೇಳಿದ್ದಾರೆ.
"ರೆನೀಗಾಗಿ ನಾನು ಅಲ್ಲಿರಲೇಬೇಕಿತ್ತು. ಆಕೆ ನನ್ನ ಜೀವನದಲ್ಲಿ ಬಂದಾಗ ಆಕೆಯ ಆರೋಗ್ಯ ಚೆನ್ನಾಗಿರಲಿಲ್ಲ, ವೈದ್ಯರ ತೀವ್ರ ಸಹಾಯದ ಅಗತ್ಯವಿತ್ತು. ನಾನು ಅಕ್ಷಯ್ ಮತ್ತು ಕರೀನಾ ಜೊತೆ ಕೆನಡಾದಲ್ಲಿ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದೇವು. ಅದು ಮಲ್ಟಿ ಸ್ಟಾರ್ ಕಾಸ್ಟ್ ಸಿನಿಮಾ. ಆದರೆ, ನಾನು ಈ ಒತ್ತಡದಲ್ಲಿದ್ದೆ " ಎಂದು ಮಾಜಿ ವಿಶ್ವ ಸುಂದರಿ ನೆನಪಿಸಿಕೊಂಡಿದ್ದಾರೆ.

"ಆ ಸಮಯದಲ್ಲಿ ಆಕೆ 24 ನೇ ವಯಸ್ಸಿನಲ್ಲಿ ತಾಯಿಯಾದ ಕಾರಣ ತನ್ನ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಜನರು ಹೇಳುತ್ತಿದ್ದರು. ಹಾಗಾಗಿ, ನನಗೆ ನನ್ನನ್ನು ಸಾಬೀತುಪಡಿಸಿಕೊಳ್ಳಬೇಕಿತ್ತು. ಯಾವುದೇ ದೂರುಗಳಿಲ್ಲದೇ ಸಮಯಕ್ಕೆ ಸರಿಯಾಗಿ ಇರಬೇಕು, ನಾನು ನನ್ನ ಕೆಲಸವನ್ನು ಮಾಡಬೇಕು ಎಂಬುದಿತ್ತು" ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಸುಶ್ಮಿತಾ ಸೇನ್
"ಹೀಗಿರುವಾಗ ನನಗೆ ಮುಂಬೈಯಿಂದ ಕರೆ ಬಂತು, ನನ್ನ ತಂದೆ ರೆನೀಯನ್ನು ನೋಡಿಕೊಳ್ಳುತ್ತಿದ್ದರು. ರೆನೀ ಪರಿಸ್ಥಿತಿ ತುಂಬಾ ಗಂಭೀರವಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣ ನಾನು ವಿಮಾನದಲ್ಲಿ ಹಿಂತಿರುಗಿದೆ. ಇದು ನನ್ನ ವೃತ್ತಿಜೀವನದ ಅಂತ್ಯ ಎಂದು ನನಗೆ ತಿಳಿದಿದೆ, ನನ್ನನ್ನು ಕ್ಷಮಿಸಿ ಎಂದು ಅವರಿಗೆ ಹೇಳಿದೆ. ಅವರು ತುಂಬಾ ಒಳ್ಳೆಯವರಾಗಿದ್ದರು, ಕನಿಷ್ಠ ಮೇಲ್ನೋಟಕ್ಕೆ ಹಾಗಿದ್ದರು ಎನಿಸುತ್ತದೆ. ಆದರೆ, ನಾನು ಅಲ್ಲಿಂದ ಹೊರಟುಹೋದೆ" ಎಂದು ಅಂದಿನ ಘಟನೆಯನ್ನು ವಿವರಿಸಿದ್ದಾರೆ.
ಒಂದು ವಾರದ ಆಸ್ಪತ್ರೆಯಲ್ಲಿ ಮಗಳ ಜೊತೆಗಿದ್ದು ಮತ್ತೆ ಕೆಲಸಕ್ಕೆ ಸಿದ್ಧನಿದ್ದೇನೆ ಎಂದು ಹೇಳಲು ಹಿಂತಿರುಗಿ ಓಡಿಹೋದೆ. ಆದರೆ ಅಷ್ಟರಲ್ಲಿ ಹಾನಿ ಆಗಿಯೇ ಹೋಗಿತ್ತು" ಎಂದು ಸುಶ್ಮಿತಾ ಸೇನ್ ತಮ್ಮ ಮಾತನ್ನು ನಿಲ್ಲಿಸಿದ್ದಾರೆ. ತಮ್ಮ ವೃತ್ತಿ ಜೀವನ ಕೂಡ ಇಲ್ಲಿಗೆ ಮುಕ್ತಾಯ ಎಂದುಕೊಂಡಿದ್ದರು ಎಂದು ಆತಂಕ ಹೊರಹಾಕಿದ್ದಾರೆ.
ತಾಲಿ ಬಯೋಪಿಕ್ ವೆಬ್ ಸರಣಿಯಲ್ಲಿ ಟ್ರಾನ್ಸ್‌ಜೆಂಡರ್!
ಪ್ರತಿಭಾವಂತ ನಟಿ ಸುಶ್ಮಿತಾ ಸೇನ್ ತಾಲಿ ಬಯೋಪಿಕ್ ವೆಬ್ ಸರಣಿಯಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರದಲ್ಲಿ ತಮ್ಮ ಅಭಿನಯದ ಮೂಲಕ ಸಿನಿಪ್ರೇಮಿಗಳು ಹೃದಯ ಗೆಲ್ಲುತ್ತಿದ್ದಾರೆ. ಸುಶ್ಮಿತಾ ಸೇನ್ ಮುಂದೆ ತಮ್ಮ ಬ್ಲಾಕ್‌ಬಸ್ಟರ್ ಥ್ರಿಲ್ಲರ್ ವೆಬ್ ಸರಣಿ ಆರ್ಯ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸಿಗಲಿದೆ.


Click it and Unblock the Notifications











