ಮುಖವಾಡದ ವ್ಯಕ್ತಿಯ ಸೇಡಿನ ಕತೆ 'ಮೋಕ್ಷ': ಮಾರ್ಚ್ 4ಕ್ಕೆ ಬಿಡುಗಡೆ

ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ 'ಮೋಕ್ಷ' ಮಾರ್ಚ್ 4ಕ್ಕೆ ರಾಜ್ಯದಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಉತ್ತರ ಕನ್ನಡ, ಬೆಂಗಳೂರು, ಹಾಸನ ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಿರುವ ಮೋಕ್ಷ ಚಿತ್ರ ತಂಡ, ಇದೀಗ ತೆರೆಗೆ ಬರಲು ಸಜ್ಜಾಗಿದೆ.

ಎಂಜಿನಿಯರ್ ಆಗಿ ನೌಕರಿ ಮಾಡುತ್ತಿದ್ದ ಅಂಕೋಲಾ ಮೂಲದ ಸಮರ್ಥ ನಾಯ್ಕ, ನೂರಾರು ಜಾಹೀರಾತುಗಳ್ನು ಮಾಡಿರುವ ಅನುಭವಿ. ಈ ಮೋಕ್ಷ ಸಿನಿಮಾಕ್ಕಾಗಿ ತಮ್ಮ ಕೆಲಸ ಕಾರ್ಯವನ್ನೂ ಬದಿಗೊತ್ತಿರುವ ಸಮರ್ಥ, ಕಳೆದ ಮೂರ್ನಾಲ್ಕು ವರ್ಷಗಳಿಂದ 'ಮೋಕ್ಷ' ಸಿನಿಮಾಕ್ಕಾಗಿ ದುಡಿಯುತ್ತಿದ್ದಾರೆ. ತಮ್ಮ ಎಸ್.ಜಿ.ಎನ್. ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಿಸಿರುವ ಚೊಚ್ಚಲ ಚಿತ್ರದ ಬಿಡುಗಡೆಗೆ ಇದೀಗ ಸಮರ್ಥ ಸಜ್ಜಾಗಿದ್ದಾರೆ.

ಸಮರ್ಥ ನಾಯ್ಕ ಅವರ ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಮೋಕ್ಷದಲ್ಲಿ ತಾರಕ್ ಪೊನ್ನಪ್ಪ ಹಾಗೂ ಪ್ರಶಾಂತ್ ಅವರ ಸಹ ನಟನೆಯೊಂದಿಗೆ ಮೋಹನ್ ಧನರಾಜ್ ಹಾಗೂ ಆರಾಧ್ಯಾ ಲಕ್ಷ್ಮಣ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮಾಸ್ಕ್ ಮ್ಯಾನ್ ಈ ಸಿನಿಮಾದ ಮುಖ್ಯ ಆಕರ್ಷಣೆಯಾಗಿದ್ದು, ಮಾರ್ಚ್ 4ರಂದು ತೆರೆಗೆ ಬರುತ್ತಿದೆ.

Suspense Thriller Movie Moksha Releasing On March 03

''ಮೋಕ್ಷ' ಥ್ರಿಲ್ಲರ್ ಸಿನಿಮಾ ಆಗಿದ್ದರೂ ಪ್ರೀತಿ, ಕೌಟುಂಬಿಕ ಮೌಲ್ಯ ಹಲವು ವಿಷಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಮುಖವಾಡ ಧರಿಸಿರುವ ವ್ಯಕ್ತಿಯೊಬ್ಬನ ಪಾತ್ರವಿದೆ. ಆತ ಯಾರು ಆತನ ಉದ್ದೇಶವೇನು, ಆತ ಏಕೆ ಜನರಿಗೆ ತೊಂದರೆ ಕೊಡುತ್ತಿದ್ದಾನೆ ಇವು ಪ್ರೇಕ್ಷಕರಿಗೆ ಕುತೂಹಲ ಮೂಡಿಸುವ ಅಂಶಗಳಾಗಿರುತ್ತವೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಇದಕ್ಕೆಲ್ಲ ಉತ್ತರ ಸಿಗುತ್ತದೆ'' ಎಂದು ಕತೆಯ ಬಗ್ಗೆ ಸರಳವಾಗಿ ವಿವರಿಸಿದ್ದಾರೆ ನಿರ್ದೇಶಕ ಸಮರ್ಥ ನಾಯಕ್.

ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸುತ್ತಿದೆ. ಮುಖವಾಡದ ವ್ಯಕ್ತಿ ಹಾಗೂ ನಾಯಕನ ನಡುವೆ ನಡೆವ ದ್ವೇಷ, ಸೇಡಿನ ಕತೆಯನ್ನು ಸಿನಿಮಾ ಹೊಂದಿದೆ.

ಜಯಂತ್ ಕಾಯ್ಕಿಣಿ, ಕುಮಾರದತ್ತ್ ಸಾಹಿತ್ಯ, ಕಿಶನ್ ಮೋಹನ್, ಸಚಿನ್ ಬಾಲು ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಸಿನಿಮಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲೂ ಸಿನಿ ರಸಿಕರಿಗೆ ರೊಮ್ಯಾಂಟಿಕ್ ಅನುಭವ ನೀಡುವುದಂತೂ ಪಕ್ಕಾ. ಈಗಾಗಲೇ ಸಿನಿಮಾದ ಟ್ರೈಲರ್ ಗಳು ಸಾಕಷ್ಟು ವೈರಲ್ ಆಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮಾರ್ಚ್ 4ರಂದು ಥಿಯೇಟರ್ ನಲ್ಲಿ ಜನರ ರೆಸ್ಪಾನ್ಸ್ ಹೇಗಿರಲಿದೆ ಎಂಬುದನ್ನ ಚಿತ್ರ ತಂಡ ಎದುರು ನೋಡುತ್ತಿದೆ.

More from Filmibeat

English summary
Suspense thriller Kannada movie Moksha releasing on March 03. Movie is directed by Samarth Nayak.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X