'The 7 Deaths'; ಇದು ಮರ್ಡರ್ ಮಿಸ್ಟ್ರಿಯೇ? ಸೈಕಾಲಜಿಕಲ್ ಥ್ರಿಲ್ಲರೋ?
ಹೊಸಬರ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹೊಸದೊಂದು ಸಿನಿಮಾ ಸೆಟ್ಟೇರಿದೆ. ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿರುವ ಈ ಸಿನಿಮಾ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮುಹೂರ್ತ ಕಂಡಿದೆ. ಅದುವೇ 'The 7 Deaths'. ಸಿನಿಮಾ ಟೈಟಲ್‌ನಿಂದಲೇ ಇದೊಂದು ಮಿಸ್ಟರಿ ಕಥೆಯುಳ್ಳ ಸಿನಿಮಾ ಇರಬಹುದೆಂದು ಗೆಸ್ಸ್ ಮಾಡಬಹುದು.
'The 7 Deaths' ಎಂಬ ಟೈಟಲ್ ಮೂಲಕವೇ ಇದು ಮರ್ಡರ್ ಮಿಸ್ಟ್ರಿಯೇ? ಸೈಕಾಲಜಿಕಲ್ ಥ್ರಿಲ್ಲರೇ? ಇಲ್ಲವೇ ಏಳು ಜನ್ಮಗಳ ಕಥೆನಾ? ಏಳು ಸಾವುಗಳ ಸುತ್ತ ಹೆಣೆದ ಕಥೆಯೇ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡುವುದು ಗ್ಯಾರಂಟಿ. ಇಂತಹ ವಿಶಿಷ್ಟ ಟೈಟಲ್ ಅನ್ನು ಇಟ್ಟು ಕಲ್ಪನಾಶೀಲ ಮತ್ತು ಬಲಿಷ್ಠ ಕ್ರಿಯೇಟಿವ್ ತಂಡದೊಂದು ಸಿನಿಮಾ ಲಾಂಚ್ ಆಗಿದೆ.

ಈ ಸ್ಪಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾಗೆ ಕಥೆ ಹೆಣೆದಿರೋದು ಲವ್ ಶರ್ಮಾ ಹಾಗೂ ಸಚಿನ್ ಎಸ್.ಪ್ರಜಾಪತಿ. ಒಳ್ಳೆಯ ಕತೆ ಹಾಗೂ ಚಿತ್ರಕಥೆಯೊಂದಿಗೆ ಮಾಡಿಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಲವ್ ಮತ್ತು ಸಚಿನ್ ಅವರ ಜೋಡಿ ಪ್ರೇಕ್ಷಕರನ್ನು ಕುರ್ಚಿಯ ಅಂಚಿನಲ್ಲಿ ಕುಳ್ಳಿರಿಸುವಂತಹ ಕಥಾಹಂದರವನ್ನು ಹೆಣೆಯುವ ನಿರೀಕ್ಷೆಯನ್ನು ಟೈಟಲ್ ಮೂಡಿಸಿದೆ.
ಇನ್ನು ಈ ಸಿನಿಮಾವನ್ನು ಲವ್ ಶರ್ಮಾ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಇವರೊಂದಿಗೆ ಎನ್.ಶರ್ಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವೀರೇಶ್ ಎನ್‌ಟಿಎ ಕ್ಯಾಮೆರಾ ಕಣ್ಣಿನಲ್ಲಿ ಈ ರಹಸ್ಯಭರಿತ ಕಥೆ ಸೆರೆಯಾಗಲಿದೆ. ಡಾರ್ಕ್-ಥ್ರಿಲ್ಲಿಂಗ್ ಟೋನ್‌ನಲ್ಲಿ ಈ ಸಿನಿಮಾ ಮೂಡಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ.
'The 7 Deaths' ಸ್ಟಾರ್‌ಕಾಸ್ಟ್‌ನಲ್ಲಿ ನೀತಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೀತಾ ಶರ್ಮಾ ಅವರ ಪಾತ್ರ ಸಿನಿಮಾಗೆ ಗ್ಲಾಮರ್ ಜೊತೆಗೆ ಭಾವನಾತ್ಮಕ ಸನ್ನಿವೇಶಗಳ ನಡುವೆ ಸಾಗಲಿದೆ. ಇವರೊಂದಿಗೆ ಲಾಯಾ ಕೋಕಿಲಾ ಮತ್ತು ನಾಗೇಂದ್ರ ಉರ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಸ್ಕ್ರೀನ್ ಪ್ರೆಸೆನ್ಸ್ ಕಥೆಯ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಬ್ಜೆಕ್ಟ್‌ಗೆ ಜೀವ ತುಂಬಲಿದೆ ಎಂದು ತಂಡ ಹೇಳಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಬೆಂಗಳೂರಿನಲ್ಲಿ ಮುಹೂರ್ತ ಕಂಡಿದೆ. ಹೀಗಾಗಿ ಅತ್ಯಂತ ಶುಭ ಹಾಗೂ ಪಾಸಿಟಿವ್ ಸೂಚನೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾಗೆ ಬೆಂಗಳೂರು ಉತ್ತಮ ಬ್ಯಾಕ್‌ಡ್ರಾಪ್ ಮತ್ತು ಅತ್ಯುತ್ತಮ ತಾಂತ್ರಿಕ ಬೆಂಬಲವನ್ನು ನೀಡಲಿದೆ ಎಂಬುವುದು ತಂಡದ ನಂಬಿಕೆ. 'The 7 Deaths' ಕೇವಲ ಒಂದು ಸಿನಿಮಾ ಮಾತ್ರವಲ್ಲ, ಇದು ಸಸ್ಪೆನ್ಸ್, ಥ್ರಿಲ್ಲರ್‌ನ ಅದ್ಭುತ ಪ್ಯಾಕೇಜ್ ಎಂಬುವುದ ಚಿತ್ರತಂಡದ ವಾದ. ಈ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾ ನೋಡಬೇಕಿದೆ.


Click it and Unblock the Notifications