ಮಗನ ಮುಂದೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕಣ್ಣೀರಿಟ್ಟಿದ್ದು ಯಾಕೆ.?

Recommended Video

ಹಳೇದನ್ನ ಮರೆತರೆ ಯಾರು ಉದ್ದಾರ ಆಗಲ್ಲ ನೆನಪಿರಲಿ ಅಂದ್ರು ರಾಜೇಂದ್ರ ಸಿಂಗ್ ಬಾಬು | Munduvareda Adhyaya | Aditya

'ನಾಗರಹೊಳೆ', 'ಕಿಲಾಡಿ ಜೋಡಿ', 'ಅಂತ', 'ಸಿಂಹದ ಮರಿ ಸೈನ್ಯ', 'ಕರ್ಣ', 'ಮುತ್ತಿನ ಹಾರ', 'ಬಂಧನ' ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.

ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ 'ರಾಜ ವೀರ ಮದಕರಿ ನಾಯಕ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇಂತಿಪ್ಪ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿನ್ನೆ ಕಣ್ಣೀರಿಟ್ಟರು. ಮಗನ ಮುಂದೆ ಭಾವುಕರಾದರು.

SV Rajendra Singh Babu becomes emotional

ಅಷ್ಟಕ್ಕೂ, ನಿನ್ನೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತು. ಈ ವೇಳೆ ಇಲ್ಲಿಯವರೆಗೂ ತಮ್ಮ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕರುಗಳಿಗೆ ಆದಿತ್ಯ ಸನ್ಮಾನ ಸಮಾರಂಭ ಆಯೋಜಿಸಿದ್ದರು.

ಮಗ ಆದಿತ್ಯಗಾಗಿ ತಂದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು 'ಲವ್', 'ಮೋಹಿನಿ' ಮತ್ತು 'ರೆಬೆಲ್' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೀಗಾಗಿ, ತಂದೆಗೆ ಮಗ ಸನ್ಮಾನ ಮಾಡಲು ಮುಂದಾದರು. ಈ ಸಮಯದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಕಣ್ಣಾಲಿಗಳು ತುಂಬಿ ಬಂದವು.

ಬಳಿಕ, ''ನನ್ನ ಮಗನಿಗೆ ನಾನು ಆಶೀರ್ವಾದ ಮಾಡುತ್ತೇನೆ. 75 ವರ್ಷಗಳಿಂದ ನಾವು ಚಿತ್ರರಂಗದಲ್ಲಿ ಇದ್ದೇವೆ. ಸುಮಾರು 108 ಚಿತ್ರಗಳನ್ನು ತೆರೆಗೆ ತಂದಿದ್ದೇವೆ. ನಮ್ಮ ಅಧ್ಯಾಯ ಮುಗಿಯುವುದಿಲ್ಲ. ಯಾವಾಗಲೂ ನಡೆಯುತ್ತಲೇ ಇರುತ್ತದೆ'' ಎಂದು 'ಮುಂದುವರೆದ ಅಧ್ಯಾಯ' ಚಿತ್ರತಂಡಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಶುಭ ಹಾರೈಸಿದರು.

More from Filmibeat

English summary
Kannada Director SV Rajendra Singh Babu becomes emotional at 'Munduvareda Adhyaya' trailer launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X