ರಂಜಿತಾಳ ಸಿನಿಮಾ ನೋಡಿ ಹುಚ್ಚನಾಗಿದ್ದ ನಿತ್ಯಾನಂದ: ತಮಿಳು ನಟಿ ಈತನ ತೆಕ್ಕೆಗೆ ಬಿದ್ದಿದ್ದೇಗೆ?
ಹಲವು ವರ್ಷಗಳ ಬಳಿಕ ಮತ್ತೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಂಜಿತಾ ತಂದೆ ಅಶೋಕ್ ಕುಮಾರ್ ಮಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ತಮ್ಮ ನೋವನ್ನು ತೋಡಿಕೊಂಡಿದ್ದರು.
ರಂಜಿತಾ ಅಪ್ಪ ಅಶೋಕ್ ಕುಮಾರ್‌ಗೆ ಮೂವರು ಪುತ್ರಿಯರು. ಮೊದಲನೇ ಪುತ್ರಿ ನಿರ್ಮಲಾ ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದರು. ಎರಡನೇಯವರು ರಂಜಿತಾ. ಮೂರನೇ ಮಗಳು ಜ್ಯೋತಿ ಮುಂಬೈನಲ್ಲಿ ವಾಸವಿದ್ದಾರೆ.

ನಿತ್ಯಾನಂದಾ ಜೊತೆ ರಂಜಿತಾ ಹೆಸರು ತಳುಕು ಹಾಕೊಂಡಾಗ ದೇಶದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಯಾಗಿತ್ತು. ಆಗಲೇ ನಿತ್ಯಾನಂದ ಹಾಗೂ ರಂಜಿತಾ ಲವ್ ಸ್ಟೋರಿ ಬಗ್ಗೆ ಸುದ್ದಿಯೊಂದು ಹಬ್ಬಿತ್ತು. ಟಿವಿ9ನಲ್ಲಿ ಈ ಬಗ್ಗೆ ವಿಸ್ತೃತವಾಗಿ ವರದಿ ಮಾಡಲಾಗಿತ್ತು. ನಿತ್ಯಾನಂದನಿಗೆ ಯಾವಾಗ ರಂಜಿತಾ ಮೇಲೆ ವ್ಯಾಮೋಹ ಮೂಡಿದ್ದು ಯಾವಾಗ? ಅನ್ನೋದನ್ನು ವರದಿ ಮಾಡಿತ್ತು.
ರಂಜಿತಾಳ ನಾಡೋಡಿ ತೆಂಡ್ರಲ್ ನೋಡಿ ಕರಗಿದ್ದ ನಿತ್ಯಾನಂದ
ರಂಜಿತಾ ತಂದೆ ಅಶೋಕ್ ಕುಮಾರ್ ಕೂಡ ಸಿನಿಮಾರಂಗದಲ್ಲಿದ್ದರು. ಹೀರೋ ಆಗೋಕೆ ಪ್ರಯತ್ನ ಪಟ್ಟಿದ್ದರು. ಆದರೆ, ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಆದರೆ, ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಾಧ್ಯವಾಗಿರಲಿಲ್ಲ.

ಅಶೋಕ್ ಕುಮಾರ್ ಅವರ ಎರಡನೇ ಪುತ್ರಿನೇ ರಂಜಿತಾ. ಮಗಳು ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ 'ನಾಡೋಡಿ ತೆಂಡ್ರಲ್'ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ನಿತ್ಯಾನಂದನ ಬದುಕನ್ನೇ ಬದಲಿಸಿತ್ತು. ರಂಜಿತಾ ಮೇಲೆ ಲವ್ವೋ.. ವ್ಯಾಮೋಹವೋ ಬೆಳೆದು ಬಿಟ್ಟಿತ್ತು.
10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್
ನಿತ್ಯಾನಂದ 10ನೇ ತರಗತಿ ಓದುವಾಗ 'ನಾಡೋಡಿ ತೆಂಡ್ರಲ್' ರಿಲೀಸ್ ಆಗಿತ್ತು. ಆಗ ನಿತ್ಯಾನಂದ ಇನ್ನೂ ರಾಜಸೇಖರ್ ಆಗಿಯೇ ಇದ್ದ. ಅದ್ಯಾವಾಗ ಈ ಸಿನಿಮಾ ನೋಡಿದನೋ ಅಲ್ಲಿಂದ ರಂಜಿತಾ ಜಪಾ ಮಾಡೋಕೆ ಶುರು ಮಾಡಿದ್ದ. ಬ್ಯಾಗ್‌ನಲ್ಲಿ ರಂಜಿತಾ ಫೋಟೊಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ ಎಂದು 10ನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಶಿವಕುಮಾರ್ ಎಂಬುವವರು ಟಿವಿ9ಗೆ ವಿವರಿಸಿದ್ದರು.
ನಾಡೋಡಿ ತೆಂಡ್ರಲ್ ಸಿನಿಮಾ ನೋಡುತ್ತಿದ್ದಂತೆ ನಿತ್ಯಾನಂದನ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಇದನ್ನು ಆತನ ಸಹಪಾಠಿಗಳು ಗಮನಿಸಿದ್ದರು. ಹೀಗಾಗಿ ಸ್ನೇಹಿತರು 'ರಾಜಶೇಖರನ್ ಇನ್ ಲವ್' ಎಂದು ಹೆಸರಿಟ್ಟಿದ್ದಾಗಿ ಮಾಹಿತಿ ನೀಡಿದ್ದರು. ಇಲ್ಲಿಂದಲೇ ರಂಜಿತಾಗಾಗಿ ನಿತ್ಯಾನಂದನ ಮನಸ್ಸು ಹಾತೊರೆಯುತ್ತಿತ್ತು ಎನ್ನಲಾಗಿದೆ.
ನಿತ್ಯಾಂದನ ಸಂಪರ್ಕಕ್ಕೆ ರಂಜಿತಾ ಬಂದಿದ್ದೇಗೆ?
ನಿತ್ಯಾನಂದ 6ನೇ ತರಗತಿಯಿಂದಲೇ ತಪಸ್ಸು ಮಾಡುತ್ತೇನೆ ಸನ್ಯಾಸಿ ಆಗುತ್ತೇನೆ ಎನ್ನುತ್ತಿದ್ದ. ರಂಜಿತಾ ನೋಡಿದ ಮೇಲೆ ವ್ಯಾಮೋಹ ಹುಟ್ಟಿದರೂ, ಸನ್ಯಾಸಿ ಆಗೋ ಗುರಿಯನ್ನು ಮರೆತಿರಲಿಲ್ಲ. ಇತ್ತ ರಂಜಿತಾ ಮಿಲಿಟಿರಿ ಆಫೀಸರ್ ಅನ್ನು ಲವ್ ಮಾಡಿ ಮದುವೆ ಆಗಿದ್ದರು. ಆದರೆ, ಮದುವೆ ಬಳಿಕ ಗರ್ಭ ಕೋಶದ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ರಂಜಿತಾ ಅಕ್ಕ ಮದುವೆ ಬಳಿಕ ಅಮೆರಿಕಾದಲ್ಲಿ ಇದ್ದರು. ಅಕ್ಕ ನಿತ್ಯಾನಂದನ ಭಕ್ತೆಯಾಗಿದ್ದರು.
ಅಕ್ಕನೊಂದಿಗೆ ನಿತ್ಯಾನಂದನ ಆಶ್ರಮಕ್ಕೆ ಹೋಗಿದ್ದರು. ಅಲ್ಲಿವರೆಗೂ ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ಒಲವು ಮೂಡುವುದಕ್ಕೆ ಶುರುವಾಗಿತ್ತು. ರಂಜಿತಾ ಹಾಗೂ ಅವರ ಅಕ್ಕ ನಿರ್ಮಲಾ ಇಬ್ಬರೂ ವಿಚ್ಛೇದನ ಪಡೆದು ನಿತ್ಯಾನಂದನ ಭಕ್ತೆಯಾದರು ಎಂದು ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ಗೆ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











