'ಪೈಲ್ವಾನ್' ಬಗ್ಗೆ ನೆಗೆಟಿವ್ ಪ್ರಚಾರ : ನಿರ್ಮಾಪಕಿ ಸ್ವಪ್ನ ಪ್ರತಿಕ್ರಿಯೆ
'ಪೈಲ್ವಾನ್' ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಗಳನ್ನು ಹಬ್ಬಿಸಲಾಗುತ್ತಿದೆ ಎನ್ನುವ ಆರೋಪ ಇದೆ. ಕೆಲವರು ಸಿನಿಮಾ ನೋಡದೆ, ಚಿತ್ರ ಚೆನ್ನಾಗಿಲ್ಲ ಎಂದು ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತಿದೆ. ಈ ಬಗ್ಗೆ ನಟ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದರು.
ಸುದೀಪ್ ನಿನ್ನೆ ಈ ವಿಚಾರವಾಗಿ ಟ್ವೀಟ್ ಮಾಡಿದ್ದರು. ಈಗ ನಿರ್ಮಾಪಕಿ ಸ್ವಪ್ನ ಕೃಷ್ಣ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ''ಯಾವುದೇ ನೆಗೆಟಿವ್ಸ್ ಗೆ ನಮ್ಮ ತಂಡ ತಲೆ ಕೆಡಿಸಿಕೊಳ್ಳುವುದಿಲ್ಲ, ಒಂದಂತೂ ಸತ್ಯ ನಾವು ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೇವೆ.'' ಎಂದಿದ್ದಾರೆ.

''ನೀವು ಮೆಚ್ಚಿ ಸಿನಿಮಾ ನೋಡಿ ಚೆನ್ನಾಗಿ ಇದೆ ಎಂದಿದ್ದೀರಿ. ಇದು ಜೀವನ. ಒಳ್ಳೇದು ಬೈಸಿದ್ರು ಕೆಟ್ಟದ್ದನ್ ಬಯಸಿದ್ರು ನಿಮಗೆ 10 ಪಟ್ಟು ಜಾಸ್ತಿ ಸಿಗತ್ತೆ.'' ಎಂದು ಸ್ವಪ್ನ ಟ್ವೀಟ್ ಮಾಡಿದ್ದಾರೆ.

ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದ ಸುದೀಪ್, ''ಯಾರು ಕೆಟ್ಟ ಸುದ್ದಿಗಳನ್ನು ಹರಡಿಸುತ್ತಿದ್ದಾರೋ ಅವರಿಂದ ನಾನು ಖುಷಿಯಾಗಿ ಇದ್ದೇನೆ. ಅವರು ಇನ್ನೊಂದು ಕಡೆ, ಈಗಲೂ ಪೈಲ್ವಾನ್ ಬಗ್ಗೆ ಮಾತಾನಾಡಲು ಸಮಯ ಮತ್ತು ಶ್ರಮವನ್ನು ಹಾಕುತ್ತಿದ್ದಾರೆ. ನಾನು ಅದನ್ನು ಗಮನಿಸುತ್ತಿದ್ದೇನೆ. ಯಾವಾಗ ಎಲ್ಲರೂ ನಮ್ಮ ಬಗ್ಗೆ ಕೆಟ್ಟದನ್ನು ಹಬ್ಬಿಸಲು ಸಾಧ್ಯ?. ನಾವು ಒಳ್ಳೆಯದನ್ನು ಮಾಡುತ್ತಿರುವಾಗ ಅಲ್ಲವೇ. ಅದಕ್ಕೆ ಈ ಕ್ಷಣವನ್ನು ಖುಷಿಪಡಿ.'' ಎಂದಿದ್ದರು.


Click it and Unblock the Notifications











