»   » ಕಾಶ್ಮೀರ ಹೂತೋಟದಲ್ಲಿ ರಾಧಿಕಾ ಕುಮಾರಸ್ವಾಮಿ

ಕಾಶ್ಮೀರ ಹೂತೋಟದಲ್ಲಿ ರಾಧಿಕಾ ಕುಮಾರಸ್ವಾಮಿ

Posted By:
Subscribe to Filmibeat Kannada

ರಾಜ್ಯ ರಾಜಕೀಯ ಹಾಗೂ ವಾತಾವರಣ ಎರಡರಲ್ಲೂ ತಾಪಮಾನ ಏರಿಕೆಯಾಗಿದೆ. ರಾಜಕಾರಣಿಗಳು ಬಣ್ಣಹಚ್ಚುತ್ತಿದ್ದಾರೆ. ಬಣ್ಣದ ಬಣ್ಣದ ಮಾತುಗಳಿಗೇನು ಕಡಿಮೆ ಇಲ್ಲ ಬಿಡಿ. ಈಗ ವಿಷಯಕ್ಕೆ ನೇರವಾಗಿ ಬರೋಣ. ಇಲ್ಲೇನೋ ತಾಪಮಾನ ಜೋರಾಗಿದೆ. ಆದರೆ ನಟಿ ರಾಧಿಕಾ ಕುಮಾರಸ್ವಾಮಿ ಮಾತ್ರ ಕಾಶ್ಮೀರದಲ್ಲಿ ತಂಪಾಗಿದ್ದಾರೆ.

ಕಾಶ್ಮೀರದ ಟುಲಿಪ್ ಉದ್ಯಾನವನದಲ್ಲಿ ರಾಧಿಕಾ ಅವರ ಮುಂದಿನ ಚಿತ್ರ 'ಸ್ವೀಟಿ' ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಕಾಶ್ಮೀರದ ಟುಲಿಪ್ ಉದ್ಯಾನದಲ್ಲಿ 'ಸ್ವೀಟಿ' ಚಿತ್ರದ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ರಾಧಿಕಾ ಜೊತೆ ಚಿತ್ರದ ನಾಯಕ ನಟ ಆದಿತ್ಯ ಸಹ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.


ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಕಾಶ್ಮೀರದ ಟುಲಿಪ್ ಉದ್ಯಾನದಲ್ಲಿ ಚಿತ್ರೀಕರಿಸುತ್ತಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಗೆ 'ಸ್ವೀಟಿ' ಚಿತ್ರ ಪಾತ್ರವಾಗುತ್ತಿದೆ.

ಹರ್ಷಾ, ಇಮ್ರಾನ್ ಸರ್ದಾರಿಯಾ ಹಾಗೂ ಮುರಳಿ ನೃತ್ಯ ಸಂಯೋಜನೆಯಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಇನ್ನೊಂದು ಹಾಡನ್ನು ಗೋವಾದ ಸಮುದ್ರ ತೀರದಲ್ಲಿ ಚಿತ್ರೀಕರಿಸಿಕೊಳ್ಳಲಾಗಿತ್ತು. ಈಗ ಕಾಶ್ಮೀರದ ಹಾಡಿನ ಮೂಲಕ ಸ್ವೀಟಿ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ.

ಸ್ವೀಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ವಿಜಯಲಕ್ಷ್ಮಿ ಸಿಂಗ್. ಛಾಯಾಗ್ರಹಣ ಅಜಯ್ ವಿನ್ಸೆಂಟ್, ಸಂಭಾಷಣೆ ಬಿ.ಎ.ಮಧು. ಪಾತ್ರವರ್ಗದಲ್ಲಿ ಗಿರೀಶ್ ಕಾರ್ನಾಡ್, ಸಾಧು ಕೋಕಿಲ, ತಬಲಾ ನಾಣಿ, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Radhika Kumaraswamy and Aaditya lead Kannada fil 'Sweety' duet was shot in the Tulip Garden in Kashmir. The song composed by Arjun Janya. A stylish film with extra care on costumes is stored in the camera by Ajay Vincent. 
Please Wait while comments are loading...