ಬೆಂಗಳೂರಿನಲ್ಲಿ ಮುಂಜಾನೆ 3 ಗಂಟೆಗೆ 'ಸೈರಾ' ಮೊದಲ ಶೋ

ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಬರ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಮೆಗಾ ಸಿನಿಮಾ ಬಿಡುಗಡೆಯಾಗುತ್ತಿದೆ.

ಈಗಾಗಲೇ ಎಲ್ಲ ಕಡೆ ಬುಕ್ಕಿಂಗ್ ಓಪನ್ ಆಗಿದೆ. ಬೆಂಗಳೂರಿನಲ್ಲೂ ಸೈರಾ ಬುಕ್ಕಿಂಗ್ ಗೆ ಆರಂಭವಾಗಿದ್ದು, ಎರಡು ಚಿತ್ರಮಂದಿರದಲ್ಲಿ ಮುಂಜಾನೆ 3 ಗಂಟೆಗೆ ಮೊದಲ ಶೋ ಇದೆ. ಸ್ವತಃ ಸುದೀಪ್ ಅವರು ಈ ಸಂಸ್ಕ್ರತಿಯಿಂದ ಹಿಂದೆ ಸರಿದಿದ್ದರು. ಈಗ, ಸುದೀಪ್ ನಟನೆಯ ಚಿತ್ರ ರಾತ್ರಿ ಸಮಯದಲ್ಲಿ ಶೋ ಕಾಣುತ್ತಿರುವುದು ನಿಜಕ್ಕೂ ಅಚ್ಚರಿ. ಯಾವ ಚಿತ್ರಮಂದಿರದಲ್ಲಿ ಮುಂಜಾನೆ ಶೋ ಇದೆ? ಮುಂದೆ ಓದಿ...

ಊರ್ವಶಿ ಚಿತ್ರಮಂದಿರದಲ್ಲಿ ಸೈರಾ

ಊರ್ವಶಿ ಚಿತ್ರಮಂದಿರದಲ್ಲಿ ಸೈರಾ

ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ ಸೈರಾ ನರಸಿಂಹ ರೆಡ್ಡಿ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಎರಡು ಶೋಗಳಿಗೆ ಮಾತ್ರ ಬುಕ್ಕಿಂಗ್ ಓಪನ್ ಆಗಿದ್ದು ಮೊದಲ ಶೋ ಮುಂಜಾನೆ 3.05 ನಿಮಿಷಕ್ಕೆ ಇದೆ. ನಂತರ ಎರಡನೇ ಶೋ 7 ಗಂಟೆಗೆ ಇದೆ. ಟಿಕೆಟ್ ಬೆಲೆ 500, 400, 300 ರೂಪಾಯಿ ನಿಗದಿಯಾಗಿದೆ.

ಶಂಕರ್ ನಾಗ್ ಚಿತ್ರಮಂದಿರದಲ್ಲಿ ಸೈರಾ

ಶಂಕರ್ ನಾಗ್ ಚಿತ್ರಮಂದಿರದಲ್ಲಿ ಸೈರಾ

ಎಂಜಿ ರಸ್ತೆಯಲ್ಲಿರುವ ಶಂಕರ್ ನಾಗ್‌ ಚಿತ್ರಮಂದಿರದಲ್ಲಿ ಮುಂಜಾನೆ 3.30ಕ್ಕೆ ಮೊದಲ ಶೋ ಇದೆ. ಮೊದಲ ದಿನ ಒಟ್ಟು ಐದು ಶೋಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ. ಇಲ್ಲಿ ಟಿಕೆಟ್ ಬೆಲೆ ಗರಿಷ್ಠ 1200 ರೂಪಾಯಿವರೆಗೂ ಇದೆ.

ಮಿಡ್ ನೈಟ್ ಶೋ ಬೇಡ ಎಂದಿದ್ದ ಸುದೀಪ್

ಮಿಡ್ ನೈಟ್ ಶೋ ಬೇಡ ಎಂದಿದ್ದ ಸುದೀಪ್

ಈ ಹಿಂದೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ತೆರೆಕಂಡಿತ್ತು. ಆ ಸಮಯದಲ್ಲಿ ಮಿಡ್ ಶೋ ಆಯೋಜನೆ ಮಾಡಿ ಎಂದು ಅಭಿಮಾನಿಗಳು ಒತ್ತಾಯಿಸಿದರು. ಆದರೆ, ಇದಕ್ಕೆ ಸ್ವತಃ ಸುದೀಪ್ ಅವರೇ ಒಪ್ಪಲಿಲ್ಲ. ಮಧ್ಯರಾತ್ರಿ ಶೋ ಮಾಡುವುದರಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ಹಾಗಾಗಿ, ಬೇಡ. ಏಳು ಗಂಟೆಗೆ ಶೋ ಮಾಡಬಹುದು ಎಂದಿದ್ದರು.

ಕನ್ನಡ ಚಿತ್ರಗಳು ಅಪರೂಪ

ಕನ್ನಡ ಚಿತ್ರಗಳು ಅಪರೂಪ

ಚಕ್ರವರ್ತಿ, ಹೆಬ್ಬುಲಿ ಬಂದಾಗ ರಾಜ್ಯದಲ್ಲಿ ಮಿಡ್ ನೈಟ್ ಶೋಗಳು ಪ್ರದರ್ಶನ ಕಂಡಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರ ಚಿತ್ರಗಳು ಕೂಡ ಮಿಡ್ ನೈಟ್ ಅಥವಾ ಮುಂಜಾನೆ ಶೋಗಳನ್ನ ಕಡಿಮೆ ಮಾಡಿವೆ. ಬೆಳಿಗ್ಗೆ 5, 6, 7 ಗಂಟೆಗೆ ಮೊದಲ ಶೋ ಆರಂಭಿಸುತ್ತಿದೆ.

More from Filmibeat

English summary
Megastar Chiranjeevi, Sudeep starrer Sye raa narasimha reddy movie will releasing at morning 3 am in bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X